ಬಾಲಿವುಡ್ ನಲ್ಲಿ ಜೀವ ಬೆದರಿಕೆಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪಾತಕಿ ಲಾರೆನ್ಸ್ ಬಿಷ್ಣೋಯಿ ಗುಂಪಿನ ಸದಸ್ಯರು ಸತತವಾಗಿ ಜೀವ ಬೆದರಿಕೆಯ ಕರೆಗಳನ್ನು ಮತ್ತು ಪತ್ರಗಳನ್ನು ಬಾಲಿವುಡ್ ನಟ ನಟಿಯರಿಗೆ ಬರೆಯುತ್ತಲೇ ಇದ್ದಾರೆ. ಈ ಹಿಂದೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಪತ್ರವೊಂದನ್ನು ಬರೆದಿದ್ದರು. ಈ ಕಾರಣಕ್ಕಾಗಿಯೇ ಸಲ್ಮಾನ್ ಅವರಿಗೆ ಭದ್ರತೆಯನ್ನು ಒದಗಿಸಲಾಗಿತ್ತು. ಇದೀಗ ಅವರ ವಕೀಲರಿಗೆ ಜೀವ ಬೆದರಿಕೆ ಹಾಕಲಾಗಿದೆ.
Advertisement
ಪಾತಾಕಿ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯರು ಸಲ್ಮಾನ್ ಖಾನ್ ವಕೀಲರಾದ ಹಸ್ತಿ ಮಾಲ್ ಸರಸ್ವತ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರಂತೆ. ಹಾಗಾಗಿ ವಕೀಲ ಹಸ್ತಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಬಿಷ್ಣೋಯಿ ಕಡೆಯವನು ಎಂದು ಹೇಳಿಕೊಂಡ ಗೋಲ್ಡಿ ಬ್ರಾರ್ ಹೆಸರಿನ ವ್ಯಕ್ತಿಯೊಬ್ಬ ತಮಗೆ ಜುಲೈ 3 ರಂದು ಕಚೇರಿಯ ಬಾಗಿಲು ಬಳಿ ಬೆದರಿಕೆಯ ಪತ್ರವೊಂದನ್ನು ಇಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ
Advertisement
Advertisement
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮಹಾಮಂದಿರ್ ಪೊಲೀಸ್ ಠಾಣೆ ಅಧಿಕಾರಿ ಲೇಖ ರಾಜ್ ಸಿಹಾಗ್, ಆ ಪತ್ರವನ್ನು ಪರಿಶೀಲಿಸುತ್ತಿರುವುದಾಗಿ ಹೇಳೀದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ ಪರ ವಕೀಲರಿಗೆ ಸಿಬ್ಬಂದಿಯೊಬ್ಬರನ್ನು ರಕ್ಷಣೆಗೆ ನಿಯೋಜಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ನಂತರ ಲಾರೆನ್ಸ್ ಕಡೆಯವರು ನಿತ್ಯ ಈ ರೀತಿ ಸಲ್ಮಾನ್ ಪರರಿಗೆ ತೊಂದರೆ ಕೊಡುತ್ತಲೇ ಇದ್ದಾರೆ.