ಅಡಿಲೇಡ್: ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ರಿಷಬ್ ಪಂತ್ ಅವರನ್ನು ಸ್ಲೆಡ್ಜಿಂಗ್ ಮಾಡಿ ಟೀಕೆಗೆ ಗುರಿಯಾಗಿದ್ದ ಆಸೀಸ್ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದು, ಪಂದ್ಯದ 3ನೇ ದಿನದಾಟದ ವೇಳೆಗೆ ಕೆಎಲ್ ರಾಹುಲ್‍ರನ್ನು ಆಸೀಸ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಕೆಣಕಿದ್ದಾರೆ.
ಟೀಂ ಇಂಡಿಯಾ ತನ್ನ 2ನೇ ಇನ್ನಿಂಗ್ ಆರಂಭಿಸಿದ ವೇಳೆ ಕೆಎಲ್ ರಾಹುಲ್ ವೇಗದ ಬೌಲರ್ ಕಮ್ಮಿನ್ಸ್ ಬೌಲಿಂಗ್ ಎದುರಿಸಿದರು. 11 ಓವರಿನ 4ನೇ ಎಸೆತವನ್ನು ಬೌಂಡರಿಗಟ್ಟಲು ಯತ್ನಿಸಿ ವಿಫಲವಾದ ರಾಹುಲ್ ಮರು ಎಸೆತದಲ್ಲಿ ಬೌಂಡರಿ ಸಿಡಿಸಿದರು. ಈ ವೇಳೆ ರಾಹುಲ್‍ರತ್ತ ದಿಟ್ಟಿಸಿದ ಕಮ್ಮಿನ್ಸ್ ಕೈ ಸನ್ನೆ ಮಾಡಿ ಸ್ಲೆಡ್ಜಿಂಗ್ ಮಾಡಿದರು.
Advertisement
KL Rahul isn't holding back!
Live coverage here: https://t.co/lTUqyqRMzW #AUSvIND pic.twitter.com/xr86289CpO
— cricket.com.au (@cricketcomau) December 8, 2018
Advertisement
ಇದಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್‍ರನ್ನು ಸ್ಲೆಡ್ಜ್ ಮಾಡಿದ್ದ ಆಸೀಸ್ ಆಟಗಾರರಿಗೆ ಪಂತ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದರು. ಆಸೀಸ್ ತಂಡದ ಮೊದಲ ಇನ್ನಿಂಗ್ಸ್ ವೇಳೆ ಉಸ್ಮಾನ್ ಖವಾಜರನ್ನು ಎಲ್ಲರೂ ಪೂಜಾರ ಆಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕಿಚಾಯಿಸಿದ್ದರು.
Advertisement
ಟೀಂ ಇಂಡಿಯಾ ಪರ 2ನೇ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ನೀಡಿದ ಕೆಎಲ್ ರಾಹುಲ್ 67 ಎಸೆತಗಳನ್ನು ಎದುರಿಸಿ 44 ರನ್ ಸಿಡಿಸಿದರು. ಅವರ ಬ್ಯಾಟಿಂಗ್‍ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಮೂಡಿಬಂತು. ಉತ್ತಮವಾಗಿ ಆಡುತ್ತಿದ್ದ ರಾಹುಲ್ ಭಾರೀ ಹೊಡೆತಕ್ಕೆ ಯತ್ನಿಸಿ ಜೋಸ್ ಹಜಲ್‍ವುಡ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ತಂಡಕ್ಕೆ ಕೊಹ್ಲಿ, ಪೂಜಾರ ಜೋಡಿ 71 ರನ್ ಕಾಣಿಕೆ ನೀಡಿತು. ಆಸೀಸ್ ಮುಳುವಾಗಿದ್ದ ಈ ಜೋಡಿಯನ್ನು ಲಯನ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಬೇರ್ಪಡಿಸಿದರು.
Advertisement
50 partnership for Pujara-Rahane. #TeamIndia's lead swells to 212 ???????? #AUSvIND pic.twitter.com/D7MqeiOOrH
— BCCI (@BCCI) December 9, 2018
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 106.5 ಓವರ್ ಗಳಲ್ಲಿ 307 ರನ್ ಗಳಿಸಿ ಆಲೌಟ್ ಆಯ್ತು. ಚೇತೇಶ್ವರ ಪೂಜಾರ 71 ರನ್( 204 ಎಸೆತ, 9 ಬೌಂಡರಿ), ವಿರಾಟ್ ಕೊಹ್ಲಿ 34 ರನ್(104 ಎಸೆತ, 3 ಬೌಂಡರಿ) ಹೊಡೆದು ಔಟಾದರು. ರೆಹಾನೆ 70 ರನ್(147 ಎಸೆತ, 7 ಬೌಂಡರಿ), ರಿಷಬ್ ಪಂತ್ 28 ರನ್(16 ಎಸೆತ, 4 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ನಥನ್ ಲಿಯಾನ್ 42 ಓವರ್ ಮಾಡಿ 122 ರನ್ ನೀಡಿ 6 ವಿಕೆಟ್ ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv