ಬೆಂಗಳೂರು: ಕಳೆದ ಜನವರಿ 31ರಂದು ಜಯದೇವ ಆಸ್ಪತ್ರೆ ನಿರ್ದೇಶಕರ ಸ್ಥಾನದಿಂದ ನಿವೃತ್ತಿ ಹೊಂದಿದ್ದ ಡಾ.ಸಿ.ಎನ್ ಮಂಜುನಾಥ್ ಅವರ ಹೆಗಲಿಗೆ ಮತ್ತೊಂದು ಮಹತ್ತರ ಜವಾಬ್ದಾರಿಗೆ ಚಿಂತನೆ ನಡೆದಿದ್ದು, ಅದಕ್ಕೆ ಡಾ.ಮಂಜುನಾಥ್ (Dr. CN Manjunath) ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಹೌದು. ಜಯದೇವ ಆಸ್ಪತ್ರೆಯ (Jayadeva Hospital) ತಮ್ಮ ಸುಧೀರ್ಘ 16 ವರ್ಷಗಳ ಸೇವೆಯಿಂದ ನಿವೃತ್ತಿಯಾಗಿದ್ದ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಮತ್ತೊಂದು ಮಹತ್ತರ ಜವಾಬ್ದಾರಿ ತೆಗೆದುಕೊಳ್ಳುವಂತೆ ಒತ್ತಡ ಹೆಚ್ಚಾಗಿದ್ದು, ಪ್ರತಿಷ್ಠಿತ ಆಸ್ಪತ್ರೆಗಳ ಒಕ್ಕೂಟದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವಂತೆ ಕೂಗು ಕೇಳಿಬಂದಿದೆ.
- Advertisement
ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ, ಕಿಮ್ಸ್ ಆಸ್ಪತ್ರೆಗಳು ಮತ್ತು ಒಕ್ಕಲಿಗರ ಸಂಘದ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯಗಳ ಮೇಲುಸ್ತುವಾರಿ ತೆಗೆದುಕೊಳ್ಳುವಂತೆ ಒಕ್ಕಲಿಗರ ಸಂಘ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಮನವಿ ಮಾಡಿದೆ. ಈ ಸಂಬಂಧ ಜನವರಿ 31 ರಂದು ಸಭೆ ಮಾಡಿದ್ದ ಸಂಘ, ತನ್ನ ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆಯಲ್ಲಿ 35 ನಿರ್ದೇಶಕರ ಒಮ್ಮತದ ನಿರ್ಧಾರದೊಂದಿಗೆ ಮಂಜುನಾಥ್‌ರನ್ನ ಉಸ್ತುವಾರಿಯಾಗಿ ನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ. ಈ ಬೆನ್ನಲ್ಲೇ ಒಕ್ಕಲಿಗರ ಸಂಘ ಕೂಡ ಅಧ್ಯಕ್ಷರ ನೇತೃತ್ವದಲ್ಲಿ ಡಾ.ಮಂಜುನಾಥ್‌ಗೆ ಮನವಿ ಸಲ್ಲಿಸಿದೆ.
- Advertisement
ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ, ಕೆಂಪೇಗೌಡ ಆಸ್ಪತ್ರೆ, ವೈದ್ಯಕೀಯ ವಿದ್ಯಾಲಯಗಳು, ಕಿಮ್ಸ್ಗೆ ಒಳಪಟ್ಟ ಆಸ್ಪತ್ರೆಗಳು ಹಾಗೂ ಹೊಸದಾಗಿ ಆರಂಭವಾಗುವ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಳ ಸಂಪೂರ್ಣ ಜವಬ್ದಾರಿ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದು, ಮಂಜುನಾಥ್ ಅವರೂ ಸಹ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘಧ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ನಿರ್ವಹಿಸಲಾಗದೆ ಕೇಂದ್ರದ ಅನುದಾನ ಬಂದಿಲ್ಲ ಅಂತಿದ್ದಾರೆ ಕಾಂಗ್ರೆಸ್‌ನವ್ರು: ಜೋಶಿ ಆರೋಪ
ಈ ಬಗ್ಗೆ ಡಾ.ಸಿ.ಎನ್ ಮಂಜುನಾಥ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಂಘ ಈಗಾಗಲೇ ಮನವಿ ಮಾಡಿದೆ. ಆದರೆ ಸದ್ಯಕ್ಕೆ ನಾನು ಸಲಹೆಗಾರನಾಗಿ ಇರುತ್ತೇನೆ ಎಂದು ತಿಳಿಸಿದ್ದೇನೆ. ಈ ಜವಾಬ್ದಾರಿ ತೆಗೆದುಕೊಳ್ಳುವ ಸಂಬಂಧ ನಿರ್ಧಾರ ಮಾಡಲು ಸಮಯಾವಕಾಶ ಕೇಳಿದ್ದೇನೆ. ಯೋಜಿಸಿ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ