ಬೆಂಗಳೂರು: ಸಿದ್ದರಾಮಯ್ಯ ಇಮೇಜ್‍ಗೆ ಕೌಂಟರ್ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಿಯಾಂಕಾ ಗಾಂಧಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
Advertisement
ಮೊದಲ ಹಂತದಲ್ಲಿ ಪ್ರಿಯಾಂಕಾ ಗಾಂಧಿಯನ್ನು ರಾಜ್ಯದಿಂದ ರಾಜ್ಯಸಭೆ ಅಭ್ಯರ್ಥಿ ಮಾಡಿಸುವ ಯತ್ನದಲ್ಲಿ ಡಿಕೆಶಿ ವಿಫಲರಾದರು. ಆದರೆ ಮರಳಿ ಯತ್ನವ ಮಾಡು ಎಂದು ಇನ್ನೊಂದು ಪ್ರಯತ್ನಕ್ಕೆ ಡಿಕೆಶಿ ಮುಂದಾಗಿದ್ದಾರೆ. ಆಗಸ್ಟ್ 15ರ ಫ್ರೀಡಂಮಾರ್ಚ್‍ಗೆ ಪ್ರಿಯಾಂಕಾ ಗಾಂಧಿಯೇ ಬರಬೇಕು ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಗಣೇಶೋತ್ಸವ ಆಚರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಜಮೀರ್‌ಗೆ ಶ್ರೀರಾಮ ಸೇನೆ ಸವಾಲ್
Advertisement
Advertisement
ರಾಜ್ಯ ಕಾಂಗ್ರೆಸ್‍ಗೆ ಪ್ರಿಯಾಂಕಾ ಮೇನಿಯದ ಬೂಸ್ಟ್ ತುಂಬಲು ಸಿದ್ದರಾಮಯ್ಯಗೆ ಕೌಂಟರ್ ಹೊಡೆಯಲು ಡಿಕೆಶಿ ಈ ಯತ್ನ ಮಾಡುತ್ತಿದ್ದಾರೆ. ಶತಾಯಗತಾಯ ಪ್ರಿಯಾಂಕಾ ಗಾಂಧಿಯನ್ನು ಕರೆತರುವುದು ಡಿಕೆಶಿ ಲೆಕ್ಕಾಚಾರ ಎನ್ನಲಾಗುತ್ತಿದೆ. ಆದ್ದರಿಂದ ಪ್ರಿಯಾಂಕಾ ಗಾಂಧಿಯವರು ಆಗಸ್ಟ್ 15ಕ್ಕೆ ಫ್ರೀಡಂ ಮಾರ್ಚ್‍ಗೆ ಬರಲೇಬೇಕು ಎಂದು ಡಿಕೆಶಿ ಎಐಸಿಸಿ ಮೇಲೆ ಒತ್ತಡ ಹೇರ ತೊಡಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಲೆಮಹದೇಶ್ವರನ ಭಕ್ತರಿಗೆ ಗುಡ್ ನ್ಯೂಸ್ – ಮಾದಪ್ಪನ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ
Advertisement
ದಾವಣಗೆರೆಯಲ್ಲಿ ಇತ್ತೀಚಿಗಷ್ಟೇ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನೋತ್ಸವದಲ್ಲಿ ಅವರ ಸಹೋದರ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾಗವಹಿಸಿದ್ದರು. ಇದೀಗ ಆಗಸ್ಟ್ 15 ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ‘ಸ್ವಾತಂತ್ರ್ಯ ನಡಿಗೆ’ಯಲ್ಲಿ ಪಾಲ್ಗೊಳ್ಳುವಂತೆ ಪ್ರಿಯಾಂಕಾಗೆ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದು ರಾಜ್ಯಾದ್ಯಂತ ಒಂದು ವಾರದಿಂದ ನಡೆಯುತ್ತಿರುವ ಕಾಂಗ್ರೆಸ್‍ನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪಾದಯಾತ್ರೆಯ ಸಮಾರೋಪ ಸಮಾರಂಭವಾಗಿದೆ