ಹೈದರಾಬಾದ್: ಭಾರತ ಚಿತ್ರರಂಗದ ತಾರೆಯರು ಮದುವೆಯಾಗುತ್ತಿದ್ದು, ಇತ್ತೀಚೆಗೆ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ನಾನು ಮದುವೆಯಾಗ್ತೀನಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟಿ ಕಾಜಲ್ ಅಗರ್ವಾಲ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಪತ್ರಕರ್ತರು ಕಾಜಲ್ ಅವರಿಗೆ ದೀಪಿಕಾ ಹಾಗೂ ಪ್ರಿಯಾಂಕ ಮದುವೆ ಆಯ್ತು. ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಿದರು.
Advertisement
ಪತ್ರಕರ್ತರ ಪ್ರಶ್ನೆಗೆ ಕಾಜಲ್ ನಗುತ್ತಾ, ನನ್ನ ಮದುವೆ ಬಗ್ಗೆ ನಿಮಗೆ ತುಂಬಾ ಯೋಚನೆ ಇದೆ ಎಂದು ನನಗೆ ಗೊತ್ತಾಗುತ್ತಿದೆ. ನನ್ನ ತಂದೆ ಬಳಿ ನೀವೇ ಮಾತನಾಡಿ ಎಂದು ಹೇಳಿದರು. ಅಲ್ಲದೇ ಈ ವರ್ಷ ಹಲವಾರು ಕಲಾವಿದರು ಮದುವೆಯಾಗಿದ್ದಾರೆ ಹಾಗೂ ಆಗುತ್ತಿದ್ದಾರೆ. ಹಾಗಾಗಿ ನನಗೂ ಮದುವೆ ಆಗಬೇಕು ಎಂದು ಅನಿಸುತ್ತಿದೆ ಎಂದು ಹೇಳಿದರು.
Advertisement
Advertisement
ಕಾಜಲ್ ನನಗೂ ಮದುವೆಯಾಗಬೇಕು ಎಂದು ಅನಿಸುತ್ತಿದೆ ಎಂದು ಹೇಳಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆದರೆ ಕಾಜಲ್ ತಾವು ಲವ್ ಮ್ಯಾರೇಜ್ ಆಗ್ತಾರಾ? ಇಲ್ಲ ಆರೇಂಜ್ ಮ್ಯಾರೇಜ್ ಆಗ್ತಾರಾ? ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ.
Advertisement
ಹಿಂದಿ ‘ಕ್ವೀನ್’ ಚಿತ್ರವನ್ನು ತಮಿಳಿನಲ್ಲಿ ‘ಪ್ಯಾರೀಸ್ ಪ್ಯಾರೀಸ್’ ಎಂದು ರೀಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಕಾಜಲ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಹೊರತು ಪಡಿಸಿ ಕಾಜಲ್ ಕವಚಂ, ಕಮಲ್ ಹಾಸನ್ ಜೊತೆ ‘ಇಂಡಿಯನ್-2’ ಹಾಗೂ ಜಯಂ ರವಿ ಜೊತೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv