‘ಶಾಕುಂತಲಂ’ ಸಿನಿಮಾ ಸೋಲೊಪ್ಪಿಕೊಂಡ ನಿರ್ಮಾಪಕ ದಿಲ್ ರಾಜು

Public TV
1 Min Read
dil raju

ಸೌತ್ ಬ್ಯೂಟಿ ಸಮಂತಾ (Samantha) ನಟನೆಯ ‘ಶಾಕುಂತಲ’ (Shakuntalam) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ಸೋತಿತ್ತು. ಮೊದಲ ವಾರವೇ ಚಿತ್ರಮಂದಿರಲ್ಲಿ ಸಮಂತಾ ಸಿನಿಮಾ ಮಕಾಡೆ ಮಲಗಿತ್ತು. ಇದೀಗ ‘ಶಾಕುಂತಲಂ’ ಸಿನಿಮಾ ಮಾಡಿ ದೊಡ್ಡ ಹೊಡೆತ ತಿಂದೆ ಎಂದು ನಿರ್ಮಾಪಕ ದಿಲ್ ರಾಜು (Producer Dil Raju) ಪ್ರತಿಕ್ರಿಯೆ ನೀಡಿದ್ದಾರೆ.

samantha 2 1

‘ಪುಷ್ಪ’ (Pushpa)  ಚಿತ್ರದ ಸಾಂಗ್ ಸಮಂತಾ ಸೊಂಟ ಬಳುಕಿಸಿ ಗೆದ್ದು ಬೀಗಿದ್ದರು. ಬಳಿಕ ಯಶೋದ (Yashoda) ಚಿತ್ರದಲ್ಲಿ ಸ್ಯಾಮ್ ನಟನೆಯಿಂದ ಸಕ್ಸಸ್ ಕಂಡಿತ್ತು. ಸಹಜವಾಗಿ ‘ಶಾಕುಂತಲಂ’ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆದರೆ ಈ ಸಿನಿಮಾ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿತ್ತು. ಚಿತ್ರಮಂದಿರಲ್ಲಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ವಿಫಲವಾಗಿತ್ತು.‌ ಇದನ್ನೂ ಓದಿ:ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ರಿವೀಲ್ ಮಾಡಿದ ನಟಿ ಇಲಿಯಾನಾ

dil raju

ಇದೀಗ ಸಂದರ್ಶನವೊಂದರಲ್ಲಿ ನಿರ್ಮಾಪಕ ದಿಲ್ ರಾಜು ‘ಶಾಕುಂತಲಂ’ ಸಿನಿಮಾ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ. ನಾನು 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ನಾಲ್ಕರಿಂದ ಐದು ಸಿನಿಮಾಗಳು ಮಾತ್ರ ನನಗೆ ಆರ್ಥಿಕವಾಗಿ ಹೊರೆಯಾಗಿವೆ. ನನ್ನ 25 ವರ್ಷಗಳ ಕೆರಿಯರ್‌ನಲ್ಲಿ ‘ಶಾಕುಂತಲಂ’ ಸಿನಿಮಾ ದೊಡ್ಡ ಹೊಡೆತ ನೀಡಿತು ಎಂದಿದ್ದಾರೆ. ಯಶಸ್ಸು ಸಿಕ್ಕಿಲ್ಲ ಅಂದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಜನರಿಗೆ ಸಿನಿಮಾ ಇಷ್ಟ ಆದರೆ ಅದನ್ನು ಸೆಲೆಬ್ರೇಟ್ ಮಾಡುತ್ತಾರೆ. ಒಂದೊಮ್ಮೆ ಅವರು ಸೆಲಬ್ರೆಟ್ ಮಾಡಿಲ್ಲ ಎಂದರೆ ನನ್ನ ಜಡ್ಜ್‌ಮೆಂಟ್ ತಪ್ಪಾಗಿದೆ ಎಂದರ್ಥ ಎಂದು ದಿಲ್ ರಾಜು ಹೇಳಿದ್ದಾರೆ.

samantha

ಇನ್ನೂ ‘ಶಾಕುಂತಲಂ’ ಸಿನಿಮಾದ ಸೋಲಿನ ನಂತರ ನಟಿ ಸಮಂತಾ ಬಾಲಿವುಡ್ ‘ಸಿಟಾಡೆಲ್ʼ ವೆಬ್ ಸೀರಿಸ್‌ನತ್ತ ಮುಖ ಮಾಡಿದ್ದಾರೆ. ವರುಣ್ ಧವನ್‌ಗೆ ನಾಯಕಿಯಾಗಿ ಸ್ಯಾಮ್ ನಟಿಸುತ್ತಿದ್ದಾರೆ.

Share This Article