ಉಡುಪಿ: ಪಹಲ್ಗಾಮ್ ದಾಳಿ (Pahalgam Terror Attack) ಬೆನ್ನಲ್ಲೇ ದೇಶದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ದೇಶದ ಗಡಿಯೇ ಆಗಿರುವ ಕರ್ನಾಟಕ ಕರಾವಳಿಯಲ್ಲೂ ಕರಾವಳಿ ಕಾವಲು ಪಡೆ (Coastal Security) ಪೊಲೀಸ್ ಗಸ್ತು ಹೆಚ್ಚು ಮಾಡಿದೆ. ಈ ಬಗ್ಗೆ ಕರಾವಳಿ ಕಾವಲು ಪಡೆ ಎಸ್‌ಪಿ ಮಿಥುನ್ ‘ಪಬ್ಲಿಕ್ ಟಿವಿ’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ನೇವಿ ಕೋಸ್ಟ್ ಗಾರ್ಡ್ ಮತ್ತು ಸಿಎಸ್‌ಪಿ 24*7 ಕಣ್ಗಾವಲು ಇರಿಸಿದೆ. ಮೀನುಗಾರರು, 320 ಕಿಲೋಮೀಟರ್‌ನ ಗ್ರಾಮದ ಯುವಕರನ್ನು ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ ದಾಳಿಗೆಂದೇ 130 ಅಣು ಬಾಂಬ್‌ಗಳನ್ನು ಬಚ್ಚಿಟ್ಟಿದ್ದೇವೆ – ಪಾಕ್ ಸಚಿವನ ಬೆದರಿಕೆ
ಕೇಂದ್ರ ಗೃಹ ಇಲಾಖೆಯಿಂದ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ದೇಶದ ಮೂರು ದಿಕ್ಕಿನ ಸಮುದ್ರದಲ್ಲಿ 24*7 ಗಸ್ತು ನಡೆಸಲಾಗುತ್ತಿದೆ. ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಿರಂತರವಾಗಿ ಎಲ್ಲಾ ಇಲಾಖೆಗಳ ಜೊತೆ ಸಂಪರ್ಕದಲ್ಲಿದ್ದೇವೆ. ನೇವಿ, ಕೋಸ್ಟ್ ಗಾರ್ಡ್ ಜೊತೆ ಕರಾವಳಿ ಕಾವಲು ಪೊಲೀಸ್ ಸಂಪರ್ಕದಲ್ಲಿದೆ. ಕೇಂದ್ರಕ್ಕೆ ಎಲ್ಲಾ ಮಾಹಿತಿ ರವಾನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಕರ್ನಾಟಕ ಕರಾವಳಿಯ ಎಲ್ಲಾ ಗ್ರಾಮದ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡಿದ್ದೇವೆ. ಸಭೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳು ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶನ ನೀಡಿದ್ದೇವೆ. ಮೂರು ಜಿಲ್ಲೆಯ ಒಂಬತ್ತು ಠಾಣಾ ವ್ಯಾಪ್ತಿಯಲ್ಲಿ 13 ಸ್ಪೀಡ್ ಬೋಟ್ಗಳು ಗಸ್ತು ಮಾಡುತ್ತದೆ. ದೀರ್ಘಕಾಲದ ಪೆಟ್ರೋಲಿಂಗ್ ಮಾಡಬೇಕು ಎಂಬ ಸೂಚನೆ ಮೇರೆಗೆ ನಾವು ಕೆಲಸ ಮಾಡುತ್ತಿದ್ದೇವೆ. ಸ್ಪೀಡ್ ಬೋಟುಗಳು 13 ಇದೆ, ಸಣ್ಣ ಬೋಟುಗಳನ್ನು ಖರೀದಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮೋದಿ
ಕರ್ನಾಟಕ ಕರಾವಳಿ ತೀರ 320 ಕಿಲೋಮೀಟರ್ ಹೆಚ್ಚು ಇದೆ. ನೋಟುಗಳ ಅವಶ್ಯಕತೆ ಇದೆ, ಖರೀದಿ ಪ್ರಕ್ರಿಯೆ ನಡೆಯುತ್ತದೆ. ಗ್ರಾಮ ಭೇಟಿ, ಗ್ರಾಮ ವಾಸ್ತವ್ಯ ಮಾಡುತ್ತೇವೆ. ಕರಾವಳಿ ನಿಯಂತ್ರಣ ದಳ ಎಂಬ ವಿಂಗ್ ಇದೆ. ಮೀನುಗಾರರ ಸಮುದಾಯದ ಯುವಕರನ್ನು ಈ ದಳದಲ್ಲಿ ನೇಮಕ ಮಾಡಿದ್ದೇವೆ. ಕರಾವಳಿ ಕಾವಲು ಪೊಲೀಸ್ ಮತ್ತು ಮೀನುಗಾರ ಸಮುದಾಯದ ಬಾಂಧವ್ಯ ಚೆನ್ನಾಗಿದೆ. ಘಟನೆ ನಂತರ ನೇವಿ, ಕೋಸ್ಟ್ ಗಾರ್ಡ್ ಕರಾವಳಿ ಕಾವಲು ಪೊಲೀಸ್ ಸಮನ್ವಯದಲ್ಲಿದ್ದೇವೆ. ಕೋಸ್ಟಲ್ ಸೆಕ್ಯೂರಿಟಿ ಆಪರೇಷನ್ ಸೆಂಟರ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.