ಹೈದರಾಬಾದ್: ಈಗಾಗಲೇ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ `ಪದ್ಮಾವತ್’ ವಿರುದ್ಧ ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಈಗ ಸಲ್ಮಾನ್ ಖಾನ್ ಅವರ ಸೋದರ ಅಳಿಯ ಆಯುಶ್ ಶರ್ಮಾ ಅವರ ಚೊಚ್ಚಲ ಚಿತ್ರವಾದ `ಲವ್ ರಾತ್ರಿ’ಯ ವಿರುದ್ಧ ಪ್ರತಿಭಟಿಸಲು ಮುಂದಾಗಿದೆ.
ಈ ಹಿಂದೆ ವಿಎಚ್‍ಪಿ `ಪದ್ಮಾವತ್’ ಸಿನಿಮಾದಲ್ಲಿ ರಜಪೂತರ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿತ್ತು. ಆದರೆ ಆ ಸಿನಿಮಾ ಟೈಟಲ್ ಬದಲಾಯಿಸಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಈಗ `ಲವ್ ರಾತ್ರಿ’ ಸಿನಿಮಾದಲ್ಲಿ ಹಿಂದೂ ಹಬ್ಬದ ಅರ್ಥವನ್ನು ವಿರೂಪಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಸಿನಿಮಾ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದೆ.
Advertisement
ಈ ಪ್ರೀತಿ-ಪ್ರಯಣದ ನಾಟಕ ಹಿಂದೂಗಳ ಭಾವನೆಗಳಿಗೆ ದಕ್ಕೆಯುಂಟುಮಾಡುತ್ತದೆ. ಆದ್ದರಿಂದ ಈ ಸಿನಿಮಾ ಪ್ರದರ್ಶನ ಕಾಣಲು ನಾವು ಅನುಮತಿ ನೀಡುವುದಿಲ್ಲ ಎಂದು ವಿಎಚ್‍ಪಿ ವಿರೋಧ ವ್ಯಕ್ತಪಡಿಸುತ್ತಿವೆ.
Advertisement
ನಾವು ದೇಶದಾದ್ಯಂತ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಬಿಡುವುದಿಲ್ಲ. ಇದು ಹಿಂದೂಗಳ ಭಾವನೆಗಳನ್ನು ನೋಯಿಸುವಂತಹ ಕೆಲಸ. ಆದ್ದರಿಂದ ನಾವು ನೋಯಿಸುವಂತಹ ಕೆಲಸವನ್ನು ಬಯಸುವುದಿಲ್ಲ ಎಂದು ವಿಎಚ್‍ಪಿಯ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
Advertisement
ಅಷ್ಟೇ ಅಲ್ಲದೇ ಈ ಸಿನಿಮಾ ಹಿಂದೂ ಹಬ್ಬವಾದ ನವರಾತ್ರಿ ಹಿನ್ನೆಲೆಯ ವಿರುದ್ಧವಾಗಿ ಮಾಡಲಾಗಿದೆ. ಜೊತೆಗೆ ಅದರ ಅರ್ಥವು ನವರಾತ್ರಿ ಅರ್ಥವನ್ನು ವಿರೂಪಗೊಳಿಸುತ್ತದೆ ಎಂದು ಅಲೋಕ್ ಕುಮಾರ್ ಆರೋಪಿಸಿದ್ದಾರೆ.
Advertisement
`ಲವ್ ರಾತ್ರಿ’ ಸಿನಿಮಾ ಗುಜರಾತಿ ಹಿನ್ನೆಲೆಯ ವಿರುದ್ಧ ಮಾಡಲಾಗಿದ್ದು, ಇದು ಒಂಬತ್ತು ರಾತ್ರಿಯ ಅವಧಿಯಲ್ಲಿ ದಂಪತಿಗಳ ಪ್ರೇಮ ಕಥೆಯನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಆಯುಶ್ ಶರ್ಮಾ ಮತ್ತು ವಾರಿನಾ ಹುಸೇನ್ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ಸುಲ್ತಾನ್’ ಮತ್ತು `ಶಾರುಖ್ ಖಾನ್ ಫ್ಯಾನ್’ ನಂತಹ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಭಿರಾಜ್ ಮಿನವಾಲಾರವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
`ಲವ್ ರಾತ್ರಿ’ ಸಿನಿಮಾ ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರವಾಗಿದೆ. ವಿಶ್ವ ಹಿಂದೂ ಪರಿಷತ್ ನಿಂದ ಈಗಾಗಲೇ ಕಂಗನಾ ರಣಾವತ್ ಅಭಿನಯದ `ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇತಿಹಾಸ ತಿರುಚಲಾಗುತ್ತಿದೆ ಎಂದು ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ.