ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿದ್ದು, ಇದೀಗ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದು ನಿಂತಿದೆ.ಇದನ್ನೂ ಓದಿ:ಭಾರತ-ಪಾಕ್ ಉದ್ವಿಗ್ನತೆ ತೀವ್ರ ಬೆನ್ನಲ್ಲೇ 3 ಸೇನಾ ಮುಖ್ಯಸ್ಥರೊಂದಿಗೆ ಮೋದಿ ಸಭೆ
ಈ ಮೊದಲೇ ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದ್ದ ಪಾಕ್, ಆಪರೇಷನ್ ಸಿಂಧೂರದ ಬಳಿಕ ಸಾಲಕ್ಕಾಗಿ ಭಿಕ್ಷೆ ಬೇಡುವಂತಾಗಿದೆ. ಇದೀಗ ತನ್ನ ಮಿತ್ರರಾಷ್ಟ್ರಗಳ ಬಳಿ ಹಣಕಾಸಿನ ನೆರವು ನೀಡುವಂತೆ ಅಂಗಲಾಚಿದೆ. ಜೊತೆಗೆ ಅಧಿಕೃತ ಎಕ್ಸ್ ಖಾತೆಯಲ್ಲಿ ಬಹಿರಂಗವಾಗಿ ಫಂಡ್‌ಗಾಗಿ ಬೇಡಿಕೊಂಡಿದೆ. ಇನ್ನೊಂದು ಕಡೆ ಸೇನಾ ಸಂಘರ್ಷ ನಡೆಯುತ್ತಿರುವಾಗ ಪಾಕ್ ಆರ್ಥಿಕ ಸಚಿವಾಲಯ ಎಟಿಎಂ ವಿತ್‌ಡ್ರಾ ಮಿತಿಯನ್ನು ಕೇವಲ 3 ಸಾವಿರ ರೂ.ಗೆ ಇಳಿಸಿದೆ. ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಬ್ಯಾಂಕ್‌ಗಳಿಂದ ಹಣ ವಿತ್ ಡ್ರಾ ಮಾಡದಂತೆ ಮನವಿ ಮಾಡುತ್ತಿದೆ.
ಆರ್ಥಿಕ ಸಂಕಷ್ಟದ ಜೊತೆಗೆ ಈಗ ಜಲಕಂಟಕವೂ ಶುರುವಾಗಿದೆ. ಭಾರಿ ಮಳೆಯಿಂದಾಗಿ ಭಾರತ ಸಲಾಲ್, ಬಗ್ಲಿಹಾರ್ ಡ್ಯಾಂನ ಹಲವು ಗೇಟ್‌ಗಳಿಂದ ನೀರು ರಿಲೀಸ್ ಮಾಡಿದೆ. ಈ ಮೂಲಕ ಚೆನಾಬ್ ನೀರು ಪಾಕಿಸ್ತಾನಕ್ಕೆ ಹರಿಯುವಂತೆ ಮಾಡಿದ್ದು, ಪಾಕಿಸ್ತಾನಕ್ಕೆ ಪ್ರವಾಹ ಭೀತಿ ಶುರುವಾಗಿದೆ.ಇದನ್ನೂ ಓದಿ: ಭಾರತ-ಪಾಕ್ ಗಡಿಯಲ್ಲಿರುವ 24 ವಿಮಾನ ನಿಲ್ದಾಣಗಳು ಮೇ 15ರವರೆಗೆ ಬಂದ್