ತುಮಕೂರು: ಶನಿವಾರದಂದು ಚಿರತೆ ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದ ತುಮಕೂರಿನ ಜಯನಗರದಲ್ಲಿ ಬೀದಿ ದೀಪಗಳೇ ಇರಲ್ವಂತೆ. ಚಿರತೆ ನುಗ್ಗಿದ ರಂಗನಾಥ್ ಮನೆಯ ಬೀದಿಯಲ್ಲೂ ಕಳೆದ 2-3 ದಿನದಿಂದ ಲೈಟ್ ಉರಿಯುತ್ತಿರಲಿಲ್ಲ. ಚಿರತೆ ಯಾವಾಗ ಅವಾಂತರ ಸೃಷ್ಟಿಸಿತೊ ಪಾಲಿಕೆಯವರು ದೀಪ ದುರಸ್ಥಿ ಮಾಡಿದ್ದಾರೆ.
Advertisement
ಚಿರತೆ ನೆಪದಲ್ಲಿ ಬೀದಿ ದೀಪಗಳಿಗೂ ಕಾಯಕಲ್ಪ ಸಿಕ್ಕಿದೆ. ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ಅಳವಡಿಸುವುದರಿಂದ ಪದೇ ಪದೇ ಕೆಟ್ಟು ಹೋಗುತ್ತವೆ. ತಿಂಗಳಾನುಗಟ್ಟಲೆ ರೀಪೇರಿ ಮಾಡೋದೇ ಇಲ್ಲ ಅಂತಾರೆ ಇಲ್ಲಿನ ನಿವಾಸಿ ವಿನುತ. ಪರಿಣಾಮ ರಾತ್ರಿ ವೇಳೆ ಪ್ರಾಣಿಗಳಷ್ಟೆ ಅಲ್ಲ ಕಳ್ಳರು ಬಂದು ಮನೆಗೆ ನುಗ್ಗಿದ್ರು ಗೊತ್ತಾಗದೇ ಬಡಾವಣೆ ಜನರು ಭಯದಿಂದ ಬದುಕುತ್ತಿದ್ದರು.
Advertisement
Advertisement
ಅಲ್ಲದೆ ಜಯನಗರದಲ್ಲಿ ಬರೀ ಗಿಡಗಂಟೆಗಳದ್ದೇ ದರ್ಬಾರ್. ಬಡಾವಣೆಯಲ್ಲಿರುವ ಖಾಲಿ ಸೈಟ್ ಗಳಲ್ಲಿ ಗಿಡಗಂಟೆಗಳು ತುಂಬಿಕೊಂಡಿವೆ. ಈ ಪೊದೆಗಳಲ್ಲಿ ಹಂದಿ, ನಾಯಿಗಳು ಸೇರಿದಂತೆ ವಿಷ ಜಂತುಗಳು ಸೇರಿಕೊಳ್ಳುತಿವೆ. ಹಾಗಾಗಿ ಆಹಾರ ಹುಡುಕಿ ಬರುವ ಚಿರತೆ, ಕರಡಿಗಳು ಈ ಪೊದೆಯೊಳಗೆ ಸೇರಿಕೊಳ್ಳುತ್ತವೆ. ಪಾಲಿಕೆಯಾಗಲಿ ಅಥವಾ ಸೈಟ್ ಮಾಲೀಕರಾಗಲಿ ತಮ್ಮ ನಿವೇಶನವನ್ನು ಕ್ಲೀನ್ ಮಾಡದೇ ಇದ್ದುದಕ್ಕೆ ಬಡಾವಣೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
https://www.youtube.com/watch?v=oFB8KfenrhU
https://www.youtube.com/watch?v=H1CCjKaUyoA
https://www.youtube.com/watch?v=yJW45zM7OJ4