ಚಂಡೀಗಢ: ಈ ವರ್ಷ ಆಗಸ್ಟ್ ಕೊನೆಯಲ್ಲಿ ನೋಯ್ಡಾದಲ್ಲಿದ್ದ (Noida) ಭಾರೀ ಎತ್ತರದ ಸೂಪರ್‌ಟೆಕ್ ಅವಳಿ ಕಟ್ಟಡ (Twin Tower) ನೆಲಸಮದ (Demolish) ಬಳಿಕ ಇದೀಗ ಗುರುಗ್ರಾಮದ (Gurugram) ಬೃಹತ್ ಕಟ್ಟಡವೊಂದು ಇದೇ ರೀತಿಯ ಭವಿಷ್ಯವನ್ನು ಎದುರಿಸಲು ಸಿದ್ಧವಾಗಿದೆ. ಗುರುಗ್ರಾಮದಲ್ಲಿರುವ ಚಿಂಟೆಲ್ಸ್ ಪ್ಯಾರಾಡಿಸೊ (Chintels Paradiso) ಸೊಸೈಟಿಯಲ್ಲಿರುವ ಬೃಹತ್ ಕಟ್ಟಡವೊಂದನ್ನು ಕೆಡವಲು ಇದೀಗ ನಿರ್ಧರಿಸಲಾಗಿದೆ.
ನೋಯ್ಡಾದ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸಿದ ರೀತಿಯಲ್ಲಿಯೇ ಸ್ಫೋಟಕ ಹಾಗೂ ಯಂತ್ರಗಳನ್ನು ಬಳಸಿಕೊಂಡು ಚಿಂಟೆಲ್ಸ್ ಪ್ಯಾರಾಡಿಸೊ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿರುವ ಟವರ್ ಡಿ (Tower D) ಅನ್ನು ಶೀಘ್ರದಲ್ಲೇ ಕೆಡವಲು ಗುರುಗ್ರಾಮದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಬಗ್ಗೆ ನಗರದ ಆಡಳಿತ ನೋಯ್ಡಾದ ಆಡಳಿತವನ್ನು ಸಂಪರ್ಕಿಸಿದೆ ಎಂಬುದಾಗಿ ವರದಿಯಾಗಿದೆ.
Advertisement
Advertisement
ಕಟ್ಟಡ ಕೆಡವಲು ಕಾರಣವೇನು?
ಗುರುಗ್ರಾಮದ ಚಿಂಟೆಲ್ಸ್ ಪ್ಯಾರಾಡಿಸೊ ಅಪಾರ್ಟ್ಮೆಂಟ್‌ನ ಟವರ್ ಡಿ ಕಟ್ಟಡದ ಒಂದು ಭಾಗ ಇತ್ತೀಚೆಗೆ ಕುಸಿದು, ‘ಕಿಲ್ಲರ್’ ಟವರ್ (Killer Tower) ಎಂದು ಕುಖ್ಯಾತಿಗಳಿಸಿತ್ತು. ಈ ವರ್ಷ ಫೆಬ್ರವರಿ 10ರಂದು ಈ ಕಟ್ಟಡದ 6ನೇ ಮಹಡಿಯ ಮೇಲ್ಛಾವಣಿ ಕುಸಿದು, ಇಬ್ಬರು ಸಾವನ್ನಪ್ಪಿದ್ದರು, ಹಲವರು ಗಾಯಗೊಂಡಿದ್ದರು. ಇದನ್ನೂ ಓದಿ: ತಿರುಪತಿ ತಿಮ್ಮಪ್ಪ ಈಗ 10 ಟನ್ ಚಿನ್ನ, 15 ಸಾವಿರ ಕೋಟಿಯ ಒಡೆಯ
Advertisement
ಈ ಮಾರಣಾಂತಿಕ ಘಟನೆಯ ಬಳಿಕ ಐಐಟಿ ದೆಹಲಿಯ ತಜ್ಞರ ತಂಡವನ್ನು ಕಟ್ಟಡದ ತನಿಖೆಗೆ ಕಳುಹಿಸಲಾಯಿತು. ಟವರ್ ಡಿ ಕಟ್ಟಡವನ್ನು ನಿರ್ಮಿಸಲು ಬಳಸಿರುವ ಗುಣಮಟ್ಟದ ವಸ್ತುಗಳಿಂದಾಗಿ ಇದು ಅಪಾಯಕಾರಿಯಾದ ರಚನೆಯನ್ನು ಹೊಂದಿದೆ ಎಂದು ತೀರ್ಮಾನಿಸಲಾಗಿದೆ.
Advertisement
ಇದೀಗ ಬೃಹತ್ ಕಟ್ಟಡದ ಮತ್ತು ಅಪಾರ್ಟ್ಮೆಂಟ್ ಹತ್ತಿರದ ನಿವಾಸಿಗಳೊಂದಿಗೆ ಅಧಿಕಾರಿಗಳು ಒಪ್ಪಂದ ಮಾಡಿಕೊಂಡು ನೋಯ್ಡಾ ಅವಳಿ ಕಟ್ಟಡ ನೆಲಸಮದ ಮಾದರಿಯಲ್ಲಿಲ್ಲೇ ಟವರ್ ಡಿ ಅನ್ನು ಕೆಡವಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ 4.5 ತೀವ್ರತೆಯ ಭೂಕಂಪ – ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಕಂಪನದ ಅನುಭವ