ತುಮಕೂರು: ಪ್ರಧಾನಿ ನರೇಂದ್ರ ಮೋದಿ ತುಮಕೂರು (Tumkuru) ಜಿಲ್ಲೆಗೆ ಭೇಟಿ ಕೊಡುತ್ತಿದ್ದಂತೆ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಜೋಶ್ ಹೆಚ್ಚಾಗಿರುವುದು ಕಾಣುತ್ತಿದೆ. ಒಂದಿಷ್ಟು ಕ್ಷೇತ್ರವನ್ನು ಅನಾಯಸವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡ ಬಿಜೆಪಿ ಮುಖಂಡರು ಅಂತಹ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಲಾಬಿ ಶುರುಮಾಡಿಕೊಂಡಿದ್ದಾರೆ.
ಶಿರಾ ಕ್ಷೇತ್ರವನ್ನೂ ಸುಲಭವಾಗಿ ಕಬ್ಜಾ ಮಾಡಿಕೊಳ್ಳಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಈ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ಶಾಸಕರು ಇದ್ದರೂ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ್ ಈ ಬಾರಿ ತನಗೆ ಟಿಕೆಟ್ ಕೊಡಬೇಕು ಎಂದು ಫೈಟ್ ಶುರು ಮಾಡಿದ್ದಾರೆ. ಬಿಜೆಪಿಯ ಸಂಘಟನಾತ್ಮಕ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ್ ಈ ಭಾಗದ ಪ್ರಭಾವಿ ನಾಯಕ. ಶಿರಾ ಕ್ಷೇತ್ರದಲ್ಲಿ ಪಕ್ಷವನ್ನು ನಾನು ಕಟ್ಟಿ ಬೆಳೆಸಿದ್ದೇನೆ. ಕಳೆದ ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ. ಈ ಬಾರಿ ನನಗೆ ಟಿಕೆಟ್ ಕೊಡಬೇಕು ಎಂದು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.
Advertisement
Advertisement
ಶಿರಾ (Sira) ಕ್ಷೇತ್ರದಲ್ಲಿ ಬಿಜೆಪಿ (BJP) ನೆಲೆ ಕಂಡಿದ್ದು ನನ್ನಿಂದ, ಪ್ರಧಾನಿ ಮೋದಿ (Narendra Modi) ಆಗಮನದಿಂದಾಗಿ ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಬಲಗೊಂಡಿದೆ. ಶಿರಾ ಕ್ಷೇತ್ರವನ್ನು ಕಷ್ಟ ಇಲ್ಲದೇ ಗೆಲ್ಲುತ್ತೇವೆ. ಹಾಗಾಗಿ ನನಗೆ ಟಿಕೆಟ್ ನೀಡಬೇಕು ಎಂದು ಬಿ.ಕೆ.ಮಂಜುನಾಥ್ ಒತ್ತಾಯಿಸಿದ್ದಾರೆ. ಟಿಕೆಟ್ ನೀಡುವಂತೆ ಈಗಾಗಲೇ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಬಿ.ಕೆ.ಮಂಜುನಾಥ್ ತಿಳಿಸಿದ್ದಾರೆ. ಸರ್ವೆ ಮಾಡಿ ಟಿಕೆಟ್ ಕೊಡುವ ಭರವಸೆ ಹೈಕಮಾಂಡ್ ನೀಡಿದ್ದು, ಸರ್ವೆಯಲ್ಲೂ ನಾನು ಮುಂದಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಬಿ.ಕೆ.ಮಂಜುನಾಥ್ ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಯಾದ ಕೊರಟಗೆರೆ, ಮಧುಗಿರಿ, ಪಾವಗಡ ಹಾಗೂ ಶಿರಾ ಕ್ಷೇತ್ರದ ಜಿಲ್ಲಾಧ್ಯಕ್ಷ. ಈ ಭಾಗದಲ್ಲಿ ಕಮಲವನ್ನೂ ಗಟ್ಟಿಗೊಳಿಸಿದ್ದವರೂ ಹೌದು. ಸ್ವತಃ ಜಿಲ್ಲಾಧ್ಯಕ್ಷರೇ ಹಾಲಿ ಶಾಸಕರಿದ್ದರೂ ಟಿಕೆಟ್ ಕೇಳುತ್ತಿರುವುದು ಬಿಜೆಪಿಗೆ ಇರಿಸು ಮುರುಸಾಗಿದೆ. ಇದನ್ನೂ ಓದಿ: Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ
Advertisement
ಬಿ.ಕೆ.ಮಂಜುನಾಥ ಮಾತನಾಡಿ, ಶಾಸಕ ಡಾ. ರಾಜೇಶ್ ಗೌಡರು ಒಳ್ಳೆಯ ವ್ಯಕ್ತಿ ಎಂದಿದ್ದಾರೆ. ಜೊತೆಗೆ ಶಿರಾ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಮದಲೂರು ಕೆರೆಗೆ ನೀರು ಹರಿಸುವ ಭರವಸೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವನ್ನು ಅವರು ಸರ್ಕಾರದ ಸಹಕಾರದಿಂದ ಮಾಡಿದ್ದಾರೆ. ವಿಶೇಷವಾಗಿ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪನ ಕಟ್ಟೆ ನಿರ್ಮಾಣನೂ ಮಾಡಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕೆಲಸಕ್ಕೆ ನಾವೆಲ್ಲ ಕೈ ಜೋಡಿಸಿದ್ದೇವೆ ಎಂದರು. ನಾನು ಟಿಕೆಟ್ ಕೇಳುತ್ತಿರುವುದರಿಂದಾಗಿ ನಮ್ಮಿಬ್ಬರ ವೈಮನಸ್ಸು ಇದೆ ಎಂದಲ್ಲ. ನಾನು ನನ್ನ ಹಕ್ಕನ್ನು ಪ್ರತಿಪಾದಿಸಿದ್ದೇನೆ ಎಂದರು. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k