ಬಳ್ಳಾರಿ: ಇಲ್ಲೊಂದು ಜೋಡಿ ಪರಸ್ಪರ 5 ವರ್ಷಗಳ ಕಾಲ ಪ್ರೀತಿಸಿ ಒಬ್ಬರಿಗೊಬ್ಬರನ್ನ ಅರ್ಥಮಾಡಿಕೊಂಡು ಮದ್ವೆಯಾಗಿದ್ದಾರೆ. ಮೊದಲು ಹುಡ್ಗಿಯ ಕಡೆಯವರು ವಿರೋಧಿಸಿ ನಂತರ ಸುಮ್ಮನಾದರು. ಆದ್ರೆ ನಮ್ಮ ಮಾತು ಕೇಳದೆ ಹೇಗೆ ಮದ್ವೆ ಆಗಿದ್ದೀರಾ ಅಂತಾ ಅದೇ ಸಮಾಜದ ಮುಖಂಡರು ಆ ಪ್ರೇಮಿಗಳಿಗೆ ಕಾಟ ಕೊಡ್ತಿದ್ದಾರೆ.
ಮಾಹೀನ್ ಮತ್ತು ಮಾನಸಿ ಪ್ರೀತಿಸಿ ಮದುವೆಯಾದ ಜೋಡಿ. ಬಳ್ಳಾರಿಯಲ್ಲಿ ಎದುರು ಬದುರು ಮನೆಯಲ್ಲಿ ವಾಸವಿದ್ದ ಕಾರಣ ಪರಿಚಯ ಪ್ರೇಮಕ್ಕೆ ತಿರುಗಿದೆ. 5 ವರ್ಷ ಲವ್ ಮಾಡಿ ದೂರದ ಔರಾಂಗಬಾದ್‍ನಲ್ಲಿ ಮದ್ವೆಯಾಗಿದ್ದಾರೆ.
ಇವರಿಬ್ಬರ ಮದುವೆಗೆ ಹುಡ್ಗಿ ಪೋಷಕರ ವಿರೋಧವಿದೆ. ಹುಡ್ಗನ ಕುಟುಂಬಕ್ಕೆ ಕಾಟ ಶುರುವಾಗಿದೆ. ಕೊನೆಗೆ ಹುಡ್ಗಿ ಮನೆಯವ್ರು ಸುಮ್ಮನಾದ್ರೂ ಸಮುದಾಯದ ಮುಖಂಡರು ಸುಮ್ಮನಾಗಿಲ್ಲ. ಹುಡ್ಗನ ಮನೆ ಮೇಲೆ ದಾಳಿ ಮಾಡಿದ ಗುಂಪು ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಮಾಹೀನ್ ಪೋಷಕರ ಮೇಲೆ ಹಲ್ಲೆ ನಡೆಸಿ, ಸಮುದಾಯದಿಂದ ಬಹಿಷ್ಕಾರ ಹಾಕಿದ್ದಾರೆ.
ಈ ಬಗ್ಗೆ ಹೊಸಪೇಟೆ ಠಾಣೆಗೆ ದೂರು ನೀಡಿದ್ರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ. ಬದ್ಲಿಗೆ ಪ್ರಭಾವಿಗಳ ಒತ್ತಡಕ್ಕೆ ಮಣಿದು, ಇವ್ರ ಮೇಲೆ ಶಾಂತಿಭಂಗದ ಕೇಸ್ ದಾಖಲಿಸಿದ್ದಾರೆ.