ನವದೆಹಲಿ: ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಸೋತಿದ್ದು ಮಾತ್ರವಲ್ಲ ಆಸ್ಟ್ರೇಲಿಯಾ ಈಗ ಐಸಿಸಿ ನೀಡುವ 3.25 ಕೋಟಿ ರೂ. ಬಹುಮಾನವನ್ನೂ ಕಳೆದುಕೊಂಡಿದೆ.
ಹೌದು. ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಕಾರಣ ಆಸ್ಟ್ರೇಲಿಯಾ ಐಸಿಸಿ ಬಹುಮಾನವನ್ನು ಕಳೆದುಕೊಂಡಿದೆ.
Advertisement
ಮಂಗಳವಾರ ಭಾರತ ವಿರುದ್ಧ 8 ವಿಕೆಟ್‍ಗಳಿಂದ ಸೋತಿದ್ದ ಆಸ್ಟ್ರೇಲಿಯಾ 108 ರೇಟಿಂಗ್ ಸಂಪಾದಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 107 ರೇಟಿಂಗ್‍ನೊಂದಿಗೆ ಮೂರನೇ ಸ್ಥಾನದಲ್ಲಿದಲ್ಲಿತ್ತು. ಆದರೆ ಬುಧವಾರ ದಕ್ಷಿಣ ಆಫ್ರಿಕಾ ಪಂದ್ಯವನ್ನು ಡ್ರಾ ಮಾಡಿಕೊಂಡ ಪರಿಣಾಮ ಅಂಕ ಪಟ್ಟಿಯಲ್ಲಿ ಏರಡನೇ ಸ್ಥಾನಕ್ಕೆ ಏರಿದೆ.
Advertisement
ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡಿ ಪುರಸ್ಕರಿಸುತ್ತದೆ. ಹೀಗಾಗಿ ಈ ಬಾರಿ ದಕ್ಷಿಣ ಆಫ್ರಿಕಾಗೆ 5ಲಕ್ಷ ಡಾಲರ್(ಅಂದಾಜು 3.25 ಕೋಟಿ ರೂ.) ಬಹುಮಾನ ಸಿಕ್ಕಿದರೆ, ಆಸ್ಟ್ರೇಲಿಯಾಗೆ 2 ಲಕ್ಷ ಡಾಲರ್(ಅಂದಾಜು 1.3 ಕೋಟಿ ರೂ.) ಬಹುಮಾನ ಸಿಕ್ಕಿದೆ. 101 ರೇಟಿಂಗ್‍ನೊಂದಿಗೆ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ಗೆ 1 ಲಕ್ಷ ಡಾಲರ್(65 ಲಕ್ಷ ರೂ.) ಬಹುಮಾನ ಸಿಕ್ಕಿದೆ.
Advertisement
ನ್ಯೂಜಿಲೆಂಡ್ ಒಂದು ವೇಳೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದರೆ ಆಸ್ಟ್ರೇಲಿಯಾಗೆ ಎರಡನೇ ಶ್ರೇಯಾಂಕ ಸಿಗುತಿತ್ತು. ಮೂರು ಟೆಸ್ಟ್ ಸರಣಿಯ ಮೊದಲ ಮತ್ತು ಕೊನೆಯ ಟೆಸ್ಟ್ ಡ್ರಾ ಕಂಡಿದ್ದರೆ, ಎರಡನೇ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 8 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು.
Advertisement
ಟೀಂ ಇಂಡಿಯಾಗೆ ಎಷ್ಟು ಬಹುಮಾನ?
122 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿರುವ ಭಾರತಕ್ಕೆ 10 ಲಕ್ಷ ಡಾಲರ್(ಅಂದಾಜು 6.51 ಕೋಟಿ ರೂ) ಬಹುಮಾನ ಸಿಕ್ಕಿದೆ. ಐಸಿಸಿ ಈ ಬಹುಮಾನದ ಜೊತೆ ತವರಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಟೀಂ ಇಂಡಿಯಾಗೆ ಬಿಸಿಸಿಐನಿಂದಲೂ ಬಹುಮಾನ ಸಿಕ್ಕಿದೆ.
ತಂಡದ ಪ್ರತಿ ಸದಸ್ಯರಿಗೆ 50 ಲಕ್ಷ ರೂ. ಮುಖ್ಯ ಕೋಚ್ ಅನಿಲ್ ಕುಂಬ್ಳೆಗೆ 25 ಲಕ್ಷ ರೂ. ಸಹಾಯಕ ಸಿಬ್ಬಂದಿಗೆ 15 ಲಕ್ಷ ರೂ. ನೀಡುವುದಾಗಿ ಬಿಸಿಸಿಐ ಪ್ರಕಟಿಸಿದೆ.
ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಐಸಿಸಿಯ ಗಾರ್ಫೀಲ್ಡ್ ಸೋಬಾರ್ಸ್ ಪ್ರಶಸ್ತಿ ಆರ್ ಅಶ್ವಿನ್‍ಗೆ ಸಿಕ್ಕಿದೆ.
ಇದನ್ನೂ ಓದಿ: ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ