ಢಾಕಾ: ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧದ ಪಂದ್ಯದಲ್ಲಿ ಭಾರತ (Team India) ಸೋಲು ಅನುಭವಿಸಿದೆ.
Shame on Rohit Sharma Abusing an Youngster , Feel for Washington Sundar????????#ViratKohli???? , #INDvsBAN , #INDvsBangladesh , Rohit , Siraj , Deepak Chahar , @BCCI , @ImRo45 pic.twitter.com/edX1mWzmgr
— Rɪsʜᴀʙʜ ???????? ???????????????? (@Pant_life) December 4, 2022
Advertisement
ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರೂ ಬೌಲಿಂಗ್ ವಿಭಾಗದಲ್ಲಿ ಎದುರಾಳಿಗಳನ್ನು ಕಟ್ಟಿಹಾಕಿತ್ತು. ಆದ್ರೆ ಗೆಲುವಿನ ಸನಿಹದಲ್ಲಿದ್ದಾಗಲೇ ಕೆ.ಎಲ್ ರಾಹುಲ್ (KL Rahul) ಹಾಗೂ ವಾಷಿಂಗ್ಟನ್ ಸುಂದರ್ (Washington Sundar) ಕೈಚೆಲ್ಲಿದ ಎರಡು ಕ್ಯಾಚ್‌ಗಳು ತಂಡದ ಸೋಲಿಗೆ ಕಾರಣವಾಯಿತು. ಇದನ್ನೂ ಓದಿ: ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್ ಆಲ್‌ರೌಂಡರ್ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಜಯ
Advertisement
ಟೀಂ ಇಂಡಿಯಾದ (Team India) ಬ್ಯಾಟಿಂಗ್ ವೈಫಲ್ಯ ಹಾಗೂ ಕಳಪೆ ಫೀಲ್ಡಿಂಗ್ ಬಗ್ಗೆಯೂ ಈಗ ಹಲವು ಪ್ರಶ್ನೆಗಳು ಎದ್ದಿವೆ. ಕೆ.ಎಲ್ ರಾಹುಲ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಹಲವು ಆಟಗಾರರ ಕಳಪೆ ಫೀಲ್ಡಿಂಗ್ ಕೂಡ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಗಿದೆ.
Advertisement
Advertisement
43ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದ ಮೆಹಿದಿ ಹಸನ್ ಮಿರಾಜ್ ನೀಡಿದ ಸುಲಭದ ಕ್ಯಾಚ್ ಅನ್ನು ಕೆ.ಎಲ್. ರಾಹುಲ್ ಕೈಚೆಲ್ಲಿದರು. ನಂತರದ ಕ್ಯಾಚ್‌ನಲ್ಲಿ ವಾಷಿಂಗ್ಟನ್ ಸುಂದರ್ ಕನಿಷ್ಠ ಪ್ರಯತ್ನವನ್ನೂ ಮಾಡದ ಕಾರಣ ಕಳಪೆ ಫೀಲ್ಡಿಂಗ್ ನೋಡಿ ರೋಹಿತ್ ಶರ್ಮಾ (Rohit Sharma) ಕ್ರೀಡಾಂಗಣದಲ್ಲೇ ಕೆಂಡಾಮಂಡಲವಾದರು. ತಾಳ್ಮೆ ಕಳೆದುಕೊಂಡ ಹಿಟ್‌ಮ್ಯಾನ್ ಕೆಟ್ಟ ಪದ ಬಳಸಿದರು. ಇದನ್ನೂ ಓದಿ: ಕ್ರಿಕೆಟ್‌ನಲ್ಲೂ ಮೀಸಲಾತಿ ತರಬೇಕು – ನಟ ಚೇತನ್
ರೋಹಿತ್ ಶರ್ಮಾ ಅವರು ಬಳಸಿದ ಪದ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಕ್ಯಾಪ್ಟನ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಹಿರಿಯ ಆಟಗಾರರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು, ಹೀಗೆ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ವೀಡಿಯೋವನ್ನು ಟ್ವಿಟ್ಟರ್‌ನಿಂದ ಡಿಲೀಟ್ ಮಾಡಲಾಗಿದೆ.
ಈ ಕುರಿತು ಮ್ಯಾಚ್ ಮುಗಿದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ನಾವು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ, 186 ಸ್ಕೋರ್ ಉತ್ತಮವಾದುದಲ್ಲ. ಆದರೆ ಬೌಲಿಂಗ್‌ನಲ್ಲಿ ಚೆನ್ನಾಗಿ ಮಾಡಿದ್ದೇವೆ. ಕೊನೆಯವರೆಗೂ ಬೌಲರ್‌ಗಳು ತಮ್ಮ ಹಿಡಿತ ಸಾಧಿಸಿದ್ದರು. ಕೊನೆಯ ಅಂತಿಮ ಕೆಲವು ಓವರ್‌ಗಳಲ್ಲಿ ತಂಡವು ಉತ್ತಮವಾಗಿ ಆಡಬಹುದಿತ್ತು. 10 ವಿಕೆಟ್‌ಗಳನ್ನೂ ಪಡೆಯಬಹುದಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಬಾಂಗ್ಲಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾದೇಶ 46 ಓವರ್‌ಗಳಲ್ಲಿ 187 ರನ್ ಗಳಿಸಿ 1 ವಿಕೆಟ್ ರೋಚಕ ಜಯ ಸಾಧಿಸಿತು.