ಮಂಡ್ಯ: ಒಕ್ಕಲಿಗರ (Vokkaliga) ತಾಳ್ಮೆ ಪರೀಕ್ಷೆ ಮಾಡಬೇಡಿ, ನಮಗೆ ರಾಮ-ಕೃಷ್ಣರಂತೆ ಬದುಕುವುದು ಗೊತ್ತು ಉಗ್ರ ನರಸಿಂಹನ ಅವತಾರ ತಾಳುವುದು ಗೊತ್ತು ಎಂದು ಸರ್ಕಾರಕ್ಕೆ, ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಶ್ರೀ (Nanjavadutha swamiji) ಎಚ್ಚರಿಕೆ ನೀಡಿದ್ದಾರೆ.
Advertisement
ಮಂಡ್ಯದ (Mandya) ಮದ್ದೂರಿನಲ್ಲಿ ಒಕ್ಕಲಿಗರ ಮೀಸಲಾತಿ (Reservation) ಹೋರಾಟದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಇದೀಗ ಹೋರಾಟ ಆರಂಭವಾಗಿದೆ. ಮಂಡ್ಯದ ಮದ್ದೂರಿನಲ್ಲಿ ನಮ್ಮ ಹೋರಾಟಕ್ಕೆ ಚಾಲನೆ ಸಿಕ್ಕಿದೆ. ನಮ್ಮದು 30 ವರ್ಷಗಳ ಹಿಂದಿನ ಬೇಡಿಕೆ. ಎಲ್ಲಾ ಸಮುದಾಯಗಳ ಹಿತ ಬಯಸುವವರು ಒಕ್ಕಲಿಗರು. ಆದರೆ ಒಕ್ಕಲಿಗರಿಗೆ ಮೀಸಲಾತಿ ತಾರತಮ್ಯ ಆಗಿದೆ. ನಾವು 16% ಜನಸಂಖ್ಯೆ ಇದ್ದರೂ ತಾರತಮ್ಯವಾಗಿದೆ. ಮೂವತ್ತರಡಿ 4% ನೀಡಿದ್ದಾರೆ. ಆದರೆ ಮೂವತ್ತರಡಿ ಅಡಿ ಬೇರೆ ಸಮುದಾಯಗಳನ್ನು ಸೇರಿಸಲಾಗಿದೆ. ಆ 4% ಕೂಡ ಒಕ್ಕಲಿಗರು ಬಳಸಿಕೊಳ್ಳಲು ಆಗುತ್ತಿಲ್ಲ. ಶೈಕ್ಷಣಿಕ, ಉದ್ಯೋಗಿಕವಾಗಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. 3ಎ ಮೀಸಲಾತಿ 4% ರಿಂದ 12% ಹೆಚ್ಚಿಸಿ. ನಗರಪ್ರದೇಶದಲ್ಲಿರುವ ಒಕ್ಕಲಿಗರಿಗೆ OBC ಮೀಸಲಾತಿ ನೀಡಬೇಕು. ಬೇರೆ ಬೇರೆ ಸಮುದಾಯಕ್ಕೆ ಮೀಸಲಾತಿ ಸ್ವಾಗತಾರ್ಹ, ಆದರೆ ನಮಗೂ ನಮ್ಮ ಪಾಲು ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಟಿ.ಬಿ ಜಯಚಂದ್ರ ಮನವಿ
Advertisement
Advertisement
ಒಕ್ಕಲಿಗರಲ್ಲಿ ಎಲ್ಲಾ ದೇವರ ಅಂಶವಿದೆ, ನಮಗೆ ರಾಮ-ಕೃಷ್ಣ ರಂತೆ ಬದುಕುವುದು ಗೊತ್ತು. ಉಗ್ರ ನರಸಿಂಹ ಅವತಾರ ತಾಳುವುದು ಗೊತ್ತು ಸರ್ಕಾರ ನಮ್ಮನ್ನು ಯಾವ ರೀತಿ ನಡೆಸಿಕೊಳ್ಳುತ್ತೋ ಆ ರೀತಿ ನಡೆಯುತ್ತೇವೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಮುಂದಿನ ದಿನಗಳ ಹೋರಾಟ ಯಾವ ರೂಪ ಬೇಕಾದರೂ ತಾಳಬಹುದು. ಚುನಾವಣೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ. ಎಲ್ಲಾ ಪಕ್ಷಗಳಿಗೂ ಒಕ್ಕಲಿಗ ಸಮುದಾಯ ಒತ್ತು ನೀಡಿದೆ. ಎಲ್ಲರೂ ಒಟ್ಟಾಗಿ ಸಮಸ್ಯೆ ಬಗೆಹರಿಸಬೇಕು. ಒಕ್ಕಲಿಗರು ಶಾಂತಸಾಗರ ಯಾವಾಗ ಬೇಕಾದರೂ ಅಲೆಗಳು ಎದ್ದೇಳಬಹುದು ಎಂದು ಸರ್ಕಾರಕ್ಕೆ ಶ್ರೀಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ನಾನು ಛೀ, ಥೂ ಅನ್ನಿಸಿಕೊಂಡು ಅಧಿಕಾರ ಮಾಡಿಲ್ಲ – ಸಿದ್ದರಾಮಯ್ಯ