ಭೋಪಾಲ್: ಕರ್ನಾಟಕ ರಾಜ್ಯದಲ್ಲಿ 200 ಯೂನಿಟ್ ವಿದ್ಯುತ್ ಉಚಿತ, ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ, ಮನೆಯೊಡತಿಗೆ 2,000 ರೂ. ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಯುವನಿಧಿ ಕಾರ್ಯಕ್ರಮದ ಅಡಿಯಲ್ಲಿ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆ – ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1,500 ರೂ. ಗ್ಯಾರಂಟಿಗಳನ್ನ ಘೋಷಣೆ ಮಾಡಿರುವ ರಾಷ್ಟ್ರೀಯ ಕಾಂಗ್ರೆಸ್ ಇದೀಗ ಮಧ್ಯ ಪ್ರದೇಶದಲ್ಲಿಯೂ ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ.
मध्य प्रदेश की जनता से कांग्रेस का वादा
????गैस सिलेंडर: 500 रुपए
????हर महिला को 1,500 रुपए प्रति महीना
????बिजली: 100 यूनिट माफ, 200 यूनिट हाफ
????किसानों का कर्ज माफ
????पुरानी पेंशन योजना लागू होगी
कर्नाटक में हमने वादा निभाया-अब MP में निभाएंगे
जय जनता-जय कांग्रेस ✋️
— Congress (@INCIndia) May 22, 2023
Advertisement
ಇದೇ ವರ್ಷ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿಯೂ ಜಯಭೇರಿ ಬಾರಿಸಲು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ 500 ರೂ.ಗಳಿಗೆ ಎಲ್‌ಪಿಜಿ, ಕೃಷಿ ಸಾಲ ಮನ್ನಾ ಸೇರಿದಂತೆ ಅಲ್ಲಿಯೂ 5 ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ. ಇದನ್ನೂ ಓದಿ: ಮಂಗಳವಾರದಿಂದ್ಲೇ 2 ಸಾವಿರ ರೂ.ನೋಟ್ ಹಿಂತೆಗೆತ- ವಿನಿಮಯಕ್ಕೆ ಬೇಕಿಲ್ಲ ದಾಖಲೆ
Advertisement
Advertisement
5 ಗ್ಯಾರಂಟಿಗಳು ಯಾವುವು?
500 ರೂ.ಗೆ ಗ್ಯಾಸ್ ಸಿಲಿಂಡರ್, ಪ್ರತಿ ಮಹಿಳೆಗೆ 1,500 ರೂ., 100 ಯೂನಿಟ್ ವಿದ್ಯುತ್ ಉಚಿತ, 200 ಯೂನಿಟ್ ಬಿಲ್ ಬಂದ್ರೆ ಅರ್ಧ ಹಣ ಕಟ್ಟಬೇಕು. ಕೃಷಿ ಸಾಲ ಮನ್ನಾ ಮಾಡಲಾಗುವುದು ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದೆ. ಇದನ್ನೂ ಓದಿ: `ಗ್ಯಾರಂಟಿ’ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ, 40% ಕಮಿಷನ್ ಆರೋಪ ತನಿಖೆಯಾಗಲಿ – ಬೊಮ್ಮಾಯಿ
Advertisement
ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜೂನ್ 12 ರಂದು ನರ್ಮದಾ ನದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಜಬಲ್ಪುರದಲ್ಲಿ ರೋಡ್ ಶೋ ಮತ್ತು ರ‍್ಯಾಲಿಯೊಂದಿಗೆ ಮಧ್ಯಪ್ರದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರ ಪ್ರಾರಂಭಿಸಲಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯಸಭಾ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.