ಇತ್ತೀಚೆಗಷ್ಟೇ ಐಸ್ ಕ್ಯಾಂಡಿ ಇಡ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಇಡ್ಲಿ ವಡಾ ಪಾವ್‍ನ ಫೋಟೋ ವೈರಲ್ ಆಗುತ್ತಿದೆ.
ಸುರೇಶ್ ರೈ ಧೀಮಾನ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಇಡ್ಲಿಯನ್ನು ಪಾವ್‍ನಂತೆ ಉರಿದು, ಅದರ ಮಧ್ಯದಲ್ಲಿ ಆಲೂಗಡ್ಡೆ ಸ್ಟಫಿಂಗ್ ಜೊತೆ ಕೆಂಪು ಮಸಾಲ ಬೆರೆಸಿ ತುಂಬಿರುವುದನ್ನು ಕಾಣಬಹುದಾಗಿದೆ.
Advertisement
A picture of idli vada pav is going viral online and has prompted several reactions from netizens. The internet is actually divided over it. pic.twitter.com/PqgcSdxw3U
— Suresh Rai Dhiman (@SureshRaiDhima1) October 24, 2021
Advertisement
ಇಡ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಖಾದ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಸಾಂಬಾರ್ ಮತ್ತು ಚಟ್ನಿ ಜೊತೆಗೆ ಜನ ಸವಿಯುತ್ತಾ ಆನಂದಿಸುತ್ತಾರೆ. ಇನ್ನೂ ವಡಾಪಾವ್ ಮಹಾರಾಷ್ಟ್ರದ ಸ್ಥಳೀಯ ಆಹಾರ ಭಕ್ಷ್ಯವಾಗಿದ್ದು, ಈ ಎರಡರ ಮಧ್ಯೆ ಸ್ಪೈಸಿ ಆಲೂಗಡ್ಡೆ ಸ್ಟಫಿಂಗ್ ಅನ್ನು ತುಂಬಿ ಕೆಂಪು ಚಟ್ನಿ ಹಾಗೂ ಪಾನಿಯರಮ್ ಜೊತೆಗೆ ಬಡಿಸಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇದೀಗ ಈ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗುತ್ತಿದೆ.
Advertisement
Advertisement
ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಇಡ್ಲಿ ವಡಾಪಾವ್ ನೋಡಿ ಫಿದಾ ಆಗಿದ್ದು, ಹಲವಾರು ರೀತಿ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ
ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಐಸ್ ಕ್ಯಾಂಡಿ ಇಡ್ಲಿ ಫೋಟೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡು, ಬೆಂಗಳೂರು ಭಾರತದ ಇನೋವೇಶನ್ ಕ್ಯಾಪಿಟಲ್, ಹಲವು ಅನಿರೀಕ್ಷಿತ ವಲಯಗಳಲ್ಲಿ ಇದರ ಕ್ರಿಯೇಟಿವಿಟಿಯನ್ನು ತಡೆಯಲು ಎಂದಿಗೂ ಸಾಧ್ಯವಿಲ್ಲ. ಐಸ್ ಕಡ್ಡಿಯ ಮೇಲೆ ಇಡ್ಲಿ, ಸಾಂಬಾರ್ ಹಾಗೂ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವುದು. ಯಾರು ಇದರ ಪರವಾಗಿದ್ದೀರಿ, ಯಾರು ಇದರ ವಿರುದ್ಧವಾಗಿದ್ದೀರಿ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಪ್ರಶ್ನಿಸಿದ್ದರು.
ಹೀಗೆ ಪ್ರಶ್ನಿಸುತ್ತಿದ್ದಂತೆ ಹಲವರು ವಿವಿಧ ರೀತಿಯಲ್ಲಿ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದರು. ಅಲ್ಲದೇ ಈ ಇಡ್ಲಿ ಕುರಿತು ದೇಶಾದ್ಯಂತ ಚರ್ಚೆ ನಡೆದಿತ್ತು ಮತ್ತು ಪರ ವಿರೋಧದ ಕಾಮೆಂಟ್‍ಗಳು ಕೂಡ ಹರಿದು ಬಂದಿತ್ತು. ಇದನ್ನೂ ಓದಿ: ಬಿಸಿಯಾದ ನವಣೆ ಉಪ್ಪಿಟ್ಟು ಮಾಡಿ ಸವಿಯಿರಿ