ತಾಷ್ಕೆಂಟ್: ಕಳೆದ ಕೆಲ ತಿಂಗಳ ಹಿಂದೆ ಗ್ಯಾಂಬಿಯಾ (Gambia) ದೇಶದ ಸುಮಾರು 70 ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ (Cough Syrup) ಕಾರಣ ಎಂದು ಆರೋಪ ಹೊರಿಸಲಾಗಿತ್ತು. ಇದೀಗ ಉಜ್ಬೇಕಿಸ್ತಾನವೂ (Uzbekistan) ಕೂಡಾ ತನ್ನ ದೇಶದ ಸುಮಾರು 18 ಮಕ್ಕಳ ಸಾವಿನಲ್ಲಿ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ನ ಪಾತ್ರವಿದೆ ಎಂದು ಆರೋಪಿಸಿದೆ.
ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದೇಶದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ ಹೇಳಿಕೊಂಡಿದೆ. ಸಾವನ್ನಪ್ಪಿದ 18 ಮಕ್ಕಳು ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಡಾಕ್-1 ಮ್ಯಾಕ್ಸ್ ಅನ್ನು ಸೇವಿಸಿದ್ದಾರೆ ಎಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿದೆ.
Advertisement
Advertisement
ಸಿರಪ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ ಎಥಿಲೀನ್ ಗ್ಲೈಕೋಲ್ ಎಂಬ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳದೇ ಪೋಷಕರು ಮಕ್ಕಳಿಗೆ ಕೆಮ್ಮಿನ ಸಿರಪ್ ಅನ್ನು ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚಿನ ಡೋಸ್ ನೀಡಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?
Advertisement
ವರದಿಗಳ ಪ್ರಕಾರ, ಶೀತ ಹಾಗೂ ಜ್ವರ ಇದ್ದ ಮಕ್ಕಳಿಗೆ ಈ ಸಿರಪ್ ನೀಡಲಾಗುತ್ತದೆ. ಇದೀಗ 18 ಮಕ್ಕಳ ಸಾವಿನ ಬಳಿಕ ದೇಶದ ಎಲ್ಲಾ ಔಷಧಾಲಯಗಳಿಂದ ಡಾಕ್-1 ಮ್ಯಾಕ್ಸ್ ಮಾತ್ರೆಗಳು ಹಾಗೂ ಸಿರಪ್‌ಗಳನ್ನು ಹಿಂಪಡೆಯಲಾಗಿದೆ.
Advertisement
ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ನೋಯ್ಡಾ ಮೂಲದ ಡ್ರಗ್ ಮೇಕರ್ ತಯಾರಿಸಿರುವ ಸಿರಪ್‌ನೊಂದಿಗೆ ಸಂಬಂಧವಿರುವ ಶಂಕೆಯ ಮೇಲೆ ಭಾರತ ತನಿಖೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಸೆಂಬ್ಲಿ ಎಲೆಕ್ಷನ್ ಮೇಲೆ ಬಿಜೆಪಿ ಚಾಣಾಕ್ಯನ ಕಣ್ಣು- ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ