ಬೆಂಗಳೂರು: ಕೋರಮಂಗಲದ (Koramangala) ಕೆಫೆಯಲ್ಲಿ ಅಗ್ನಿ (Fire) ಅವಘಡ ಸಂಭವಿಸಿದ ಬೆನ್ನಲ್ಲೇ ಬಿಬಿಎಂಪಿ (BBMP) ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಲ್ಲಿಯವರೆಗೆ ನಗರದ 54 ಪಬ್‌ಗಳಿಗೆ (Pub) ಬೀಗ ಹಾಕಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ನಗರದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 6 ದಿನಗಳಿಂದ ಒಟ್ಟು 1,058 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ 492 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
Advertisement
Advertisement
ಬುಧವಾರ ಒಂದೇ ದಿನ 234 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದು, ಅವುಗಳ ಪೈಕಿ 122 ಕ್ಕೆ ನೋಟಿಸ್ ನೀಡಿದೆ. 6 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಬೀಗ ಹಾಕಿ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಬಂಧನ
Advertisement
Advertisement
ಯಾವತ್ತು ಎಷ್ಟು ರೆಸ್ಟೋರೆಂಟ್‌ಗೆ ನೋಟಿಸ್?
ಶುಕ್ರವಾರ (ಅ.20) – 12, ಶನಿವಾರ (ಅ.21) – 21, ಭಾನುವಾರ (ಅ.22) – 10, ಸೋಮವಾರ (ಅ.23) – 5, ಬುಧವಾರ (ಅ.25) – 6 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗೆ ನೋಟಿಸ್ ನೀಡಿ ಬೀಗ ಜಡಿಯಲಾಗಿದೆ. ಇದನ್ನೂ ಓದಿ: `ಕೈ ಕಮಲ’ ಕ್ರೆಡಿಟ್ ಗಲಾಟೆ – ಬಿಜೆಪಿ ಶಾಸಕ ಚಾಲನೆ ನೀಡಿದ್ದ ಕಾಮಗಾರಿಗೆ ಮತ್ತೆ ಭೂಮಿ ಪೂಜೆ
Web Stories