ನವದೆಹಲಿ: ಬುಧವಾರ ಬೆಳಗ್ಗೆ ಗೃಹಿಣಿಯೊಬ್ಬರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಪತಿಯೇ ಶೂಟೌಟ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳ ಗುಂಡೇಟಿಗೆ ಪತ್ನಿ ಪ್ರಿಯಾ ಮೆಹ್ರಾ ಬಲಿಯಾಗಿದ್ದಾಳೆ ಎಂದು ನಾಟಕವಾಡಿದ್ದ ಪತಿ ಪಂಕಜ್ ಕೊನೆಗೂ ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಕೊಲೆ ಮಾಡಿದ್ದು ಯಾಕೆ?
ಪಂಕಜ್ ರಹಸ್ಯವಾಗಿ ಎರಡನೇ ಮದುವೆಯಾಗಿದ್ದನು. ಆಕೆಯ ಜೊತೆಯಲ್ಲಿಯೇ ಇರಬೇಕು ಎಂದು ಬಯಸಿದ್ದ. ಎರಡನೇ ಸಂಸಾರಕ್ಕೆ ಮೊದಲ ಪತ್ನಿ 34 ವರ್ಷದ ಪ್ರಿಯಾ ಅಡ್ಡಿಯಾಗಿದ್ದಾಳೆ ಎಂದು ತಿಳಿದು ಮಗುವಿನ ಮುಂದೆಯೇ ಆಕೆ6ಯ ಮುಖ ಮತ್ತು ಕುತ್ತಿಗೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಿಯಾ ಇನ್ನು ಜೀವಂತವಾಗಿದ್ದರು. ಆಕೆ ಕಣ್ಣುಗಳನ್ನು ಮಿಟುಕಿಸುತ್ತಿದ್ದರು. ಆದರೆ ಅರ್ಧಗಂಟೆಯ ನಂತರ ಪ್ರಿಯಾ ಮೃತಪಟ್ಟಿದ್ದಾರೆ ಎಂದು ಪಂಕಜ್ ತಂಗಿ ಸಬೀನಾ ತಿಳಿಸಿದರು.
ಪಂಕಜ್ ಕಳೆದ ವರ್ಷ ದೆಹಲಿಯ ಉತ್ತರ ಭಾಗದಲ್ಲಿ ಒಂದು ರೆಸ್ಟೊರೆಂಟ್ ತೆರೆದಿದ್ದ. ಆದರೆ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾದ್ದರಿಂದ ರೆಸ್ಟೊರೆಂಟ್ ಅನ್ನು ಮುಚ್ಚಲಾಗಿದೆ. ಇದರಿಂದ ಉದ್ದೇಶ ಪೂರಕವಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪಂಕಜ್ ಮೊದಲು ವಿಚಾರಣೆ ನಡೆಸಿದಾಗ, ಬಡ್ಡಿದಾರರ ಬಳಿ ಸುಮಾರು 5 ಲಕ್ಷ ರೂ. ಸಾಲವನ್ನು ಪಡೆದಿದ್ದೆ. ಆದರೆ ಅದನ್ನು ಹಿಂದಿರುಗಿಸಲು ತಡವಾಗಿದ್ದರಿಂದ ಬಡ್ಡಿ ಕೊಟ್ಟವರು ಚಕ್ರ ಬಡ್ಡಿ ಸೇರಿಸಿ 40 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಮೊತ್ತದ ಹಣವನ್ನು ನೀಡಲು ನಾನು ನಿರಾಕರಿಸಿದ್ದೆ. ಈ ಕಾರಣಕ್ಕೆ ಈ ದಾಳಿ ನಡೆದಿರಬಹುದು ಎಂದು ಹೇಳಿದ್ದನು.
ಇದನ್ನು ಓದಿ: ದುಷ್ಕರ್ಮಿಗಳ ಗುಂಡಿಗೆ ಪತಿ, ಮಗುವಿನ ಮುಂದೆಯೇ ಗೃಹಿಣಿ ಬಲಿ