ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ರಾಜ್ಯದ ಅಡ್ವೊಕೇಟ್ ಜನರಲ್(ಎಜಿ) ದೀಪಿಂದರ್ ಸಿಂಗ್ ಪಟ್ವಾಲಿಯಾ ಇಂದು ಪಂಜಾಬ್‍ನ ಉನ್ನತ ಸರ್ಕಾರಿ ವಕೀಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Advertisement
ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ದೀಪಿಂದರ್ ಸಿಂಗ್ ಅವರು, ದೀರ್ಘಕಾಲದ ಸಾಂವಿಧಾನಿಕ ಸಮಾವೇಶವನ್ನು ಇಟ್ಟುಕೊಂಡು ಈ ನಿರ್ಧಾರವನ್ನು ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ದೀಪಿಂದರ್ ಸಿಂಗ್ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಎಜಿ ಆಗಿ ಆಯ್ಕೆ ಮಾಡಿದ್ದರು. ಆದರೆ ಈಗ ಕಾಂಗ್ರೆಸ್ ಪಂಜಾಬ್‍ನಲ್ಲಿ ಸೋತ ನಂತರ ದೀಪಿಂದರ್ ಸಿಂಗ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆ ಜಾರಿ: ಕಲಬುರಗಿ ಡಿಸಿ
Advertisement
Advertisement
ಎಜಿ ಸಾಂಪ್ರದಾಯಿಕವಾಗಿ ಸರ್ಕಾರ ಬದಲಾವಣೆಯಾಗುತ್ತಿದಂತೆ ರಾಜೀನಾಮೆ ನೀಡುತ್ತಾರೆ. ಏಕೆಂದರೆ ಅವರು ಆಡಳಿತ ಸರ್ಕಾರದ ಸಲಹೆಯ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತೆ.