ಕನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ಕಬ್ಜ (Kabzaa) ಸಿನಿಮಾ ತಮಿಳು ಚಿತ್ರರಂಗದಲ್ಲೂ ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ಚೆನ್ನೈನಲ್ಲಿ (Chennai) ನಡೆದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಟ ಉಪೇಂದ್ರ (Upendra), ನಟಿ ಶ್ರಿಯಾ ಶರಣ್ (Shriya Sharan), ಕೆ.ಪಿ ಶ್ರೀಕಾಂತ್ ಸೇರಿದಂತೆ ಚಿತ್ರತಂಡ ಹಲವಾರು ಸದಸ್ಯರು ಭಾಗಿಯಾಗಿದ್ದರು. ಕಬ್ಜ ಸಿನಿಮಾ ತಮಿಳಿನಲ್ಲೂ ರಿಲೀಸ್ ಆಗುತ್ತಿದ್ದು, ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ಉಪೇಂದ್ರ, ಸುದೀಪ್ ಅಭಿನಯದ ‘ಕಬ್ಜ’ ಅಲೆ ಜೋರಾಗಿದೆ. ಬರೀ ಬೆಂಗಳೂರಿನಲ್ಲಷ್ಟೇ ಅಲ್ಲ, ದೂರದ ಮುಂಬೈನಲ್ಲೂ ಅರ್ಕೇಶ್ವರನದ್ದೇ ಆರ್ಭಟ, ಭಾರ್ಗವ್ ಭಕ್ಷಿಯದ್ದೇ ಹವಾ ಆಗಿತ್ತು, ಇದೀಗ ಚೆನ್ನೈನಲ್ಲೂ ತನ್ನ ಖದರ್ ತೋರಿಸಿದೆ. ‘ಕಬ್ಜ’ ಚಿತ್ರದ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು
ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ಉಪೇಂದ್ರ ಚಿತ್ರದ ಪ್ರಚಾರ ಮಾಡುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವುದರ ಜತೆಗೆ, ಅಭಿಮಾನಿಗಳ ಈ ಪ್ರೀತಿ ನೋಡಿ ತಮ್ಮ ಕಣ್ತುಂಬಿ ಬಂದಿದೆ ಎಂದರು. ಚಿತ್ರವನ್ನು ನೋಡಿ ಹರಸಿ, ಹಾರೈಸಿ ಎಂದರು. ತಮ್ಮ ಸಿನಿಮಾದ ಬಗ್ಗೆ ನಿರ್ದೇಶಕ ಆರ್.ಚಂದ್ರು ಅಭಿಮಾನದಿಂದ ಮಾತುಗಳನ್ನು ಆಡಿದರು.
ನಾನಾ ಕಾರಣಗಳಿಂದಾಗಿ ಸಿನಿಮಾ ನಿರೀಕ್ಷೆ ಮೂಡಿಸಿದೆ. 1945 ರಿಂದ 1987 ರ ಕಾಲಘಟ್ಟದಲ್ಲಿ ನಡೆಯೋ ಕಥೆ ಸಿನಿಮಾದಲ್ಲಿ. ಒಂದು ಕಡೆ ಸ್ವತಂತ್ರ ಪೂರ್ವ ಮತ್ತೊಂದು ಕಡೆ ಸ್ವತಂತ್ರದ ನಂತರ ಭಾರತ ಹೇಗಿತ್ತು ಅನ್ನುವುದನ್ನು ತೋರಿಸಲಾಗಿದೆ. ‘ಕಬ್ಜ’ ಚಿತ್ರವು ಮಾರ್ಚ್ 17 ರಂದು ಜಗತ್ತಿನಾದ್ಯಂತ 50 ದೇಶಗಳ 4 ಸಾವಿರ ಪರದೆಗಳಲ್ಲಿ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.