Latest
ಸನ್ನಿ ಲಿಯೋನ್ ಎಂದಿದ್ದ ಆ್ಯಂಕರ್ ಕಾಲೆಳೆದ ಕಾಂಡೋಮ್ ಕಂಪನಿ!

ಮುಂಬೈ: ರಾಷ್ಟ್ರೀಯ ಸುದ್ದಿ ವಾಹಿನಿ ನಿರೂಪಕ ಎಕ್ಸಿಟ್ ಪೋಲ್ ದಂದು ನಟ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಹೆಸರು ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಸನ್ನಿ ಲಿಯೋನ್ ಹೆಸರು ಹೇಳಿದ್ದಕ್ಕೆ ಕಾಂಡೋಮ್ ಕಂಪನಿ ನಿರೂಪಕರ ಕಾಲೆಳೆದಿದೆ.
ನಿರೂಪಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮ್ಯಾನ್‍ಫೋರ್ಸ್ ಕಂಪನಿ, “ಡಿಯರ್ ಅರ್ನಬ್, ನಾವು ಅರ್ಥ ಮಾಡಿಕೊಳ್ಳುತ್ತೇವೆ. ಸನ್ನಿ ನಮ್ಮ ಮನಸ್ಸಿನಲ್ಲೂ ಯಾವಾಗಲೂ ಇರುತ್ತಾರೆ” ಎಂದು ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಕಾಂಡೋಮ್ ಕಂಪನಿ ಟ್ವೀಟ್‍ನಿಂದ ನಿರೂಪಕ ಮತ್ತಷ್ಟು ಟ್ರೋಲ್ ಆಗುತ್ತಿದ್ದಾರೆ.
Sunny on our mind. #SunnyLeone #TheNationKnows #ManforceCondoms #sunny pic.twitter.com/8L2Qt3y913
— Manforce Condoms (@ManforceIndia) May 23, 2019
ಈ ವೈರಲ್ ವಿಡಿಯೋ ಬಗ್ಗೆ ಸನ್ನಿ ಲಿಯೋನ್ ಕೂಡ ಪ್ರತಿಕ್ರಿಯಿಸಿದ್ದರು. ಸನ್ನಿ ಲಿಯೋನ್ ತಮ್ಮ ಟ್ವಿಟ್ಟರಿನಲ್ಲಿ, “ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿ ಇದ್ದೇನೆ?” ಎಂದು ಟ್ವೀಟ್ ಮಾಡಿ ನಿರೂಪಕನ ಕಾಲೇಳೆದಿದ್ದರು. ಸನ್ನಿ ಲಿಯೋನ್ ಪ್ರತಿಕ್ರಿಯೆಗೆ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ರೀ-ಟ್ವೀಟ್ ಮಾಡಿದ್ದರು.
Leading by How many votes ???? 😉 😜
— sunnyleone (@SunnyLeone) May 23, 2019
ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್‍ನ ಗುರ್ದಾಸ್‍ಪುರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸನ್ನಿ ಡಿಯೋಲ್ ಈ ಚುನಾವಣೆಯಲ್ಲಿ 82,459 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸನ್ನಿ ಡಿಯೋಲ್ ಅವರು ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಕಾ ವಿರುದ್ಧ ಸ್ಪರ್ಧಿಸಿದ್ದರು.
Hahaha pic.twitter.com/6i1vdYxOSv
— Geeta Mohan گیتا موہن गीता मोहन (@Geeta_Mohan) May 23, 2019
