ಬೆಳಗಾವಿ: ಜಿಲ್ಲೆಯಲ್ಲಿ ಆರೇ ತಿಂಗಳಲ್ಲಿ 322 ಶಿಶುಗಳ ಹಾಗೂ 29 ಬಾಣಂತಿಯರ ಸಾವು ಸಂಭವಿಸಿದ್ದು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಇದೊಂದು ಆಘಾತಕಾರಿ ವಿಚಾರ ತಕ್ಷಣವೇ ತನಿಖೆಯಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆಗ್ರಹಿಸಿದರೆ ಸದನದಲ್ಲಿ ಈ ವಿಚಾರ ಪ್ರಸ್ಥಾಪಿಸುವದಾಗಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
Advertisement
322 ಶಿಶುಗಳ ಹಾಗೂ 29 ಬಾಣಂತಿಯರ ಮರಣ, ಈ ಸಾವು ನ್ಯಾಯವೇ? ಬೆಳಗಾವಿಯ (Belagavi) ಸರ್ಕಾರಿ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ ಬರೊಬ್ಬರಿ 322 ಶಿಶುಗಳು ಹಾಗೂ 29 ಬಾಣಂತಿಯರು ಸಾವನ್ನಪ್ಪಿದ ಘಟನೆಯಿಂದ ಆರೋಗ್ಯ ಇಲಾಖೆ ಅಧಿಕಾರಿ ಹಾಗು ಸಿಬ್ಬಂದಿ ಹೈರಾಣಾಗಿದ್ದಾರೆ. ಸರಣಿ ಮಕ್ಕಳ ಸಾವುಗಳು ಸುದ್ದಿ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಶಿಶುಗಳ ಮರಣಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಆಡಿಟ್ ಹಾಗೂ ತನಿಖೆ ನಡೆಸಲಾಗುತ್ತದೆ ಎಂದು ಬೆಳಗಾವಿ ಆರೋಗ್ಯ ಇಲಾಖೆಯ ಪ್ರಭಾರಿ ಡಿಹೆಚ್‌ಒ ಗಡೇದ ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರದಿಂದ ಬೆಳಗಾವಿಯಲ್ಲಿ ಅಧಿವೇಶನ – ವಿಪಕ್ಷಗಳ ಬತ್ತಳಿಕೆಯಲ್ಲಿ ಸಾಲು ಸಾಲು ಅಸ್ತ್ರ
Advertisement
Advertisement
ನವಜಾತ ಶಿಶುಗಳ ಸಾವಿನ ಬಗ್ಗೆ ತನಿಖೆಯಾಗಬೇಕು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ತವರು ಜಿಲ್ಲೆಯಲ್ಲಿ ಇಂಥ ಘಟನೆಗಳು ನಡೆದಿವೆ. ಅಪೌಷ್ಟಿಕತೆಯಿಂದ ಸಾವುಗಳಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಸರಣಿ ಶಿಶುಗಳ ಮರಣವನ್ನು ನಾವು ಗಂಭೀರವಾಗಿ ಸ್ಚೀಕರಿಸಿದ್ದೇವೆ. ಈ ಕುರಿತು ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಇದನ್ನೂ ಓದಿ: Upper Krishna Project | ಪರ್ಸಂಟೇಜ್‌ಗಾಗಿ ಡಿಕೆಶಿ ನೀರಾವರಿ ಮಂತ್ರಿಯಾಗಿದ್ದಾರೆ: ಯತ್ನಾಳ್
Advertisement
ಒಂದೆಡೆ 322 ಶಿಶುಗಳ ಮರಣ ಇನ್ನೊಂದೆಡೆ 29 ಬಾಣಂತಿಯರ ಸಾವು ಇಲಾಖೆಯ ಕಾರ್ಯ ವೈಖರಿ ಮೇಲೆ ಸಂಶಯ ಹುಟ್ಟು ಹಾಕಿದೆ. ಕೆಲ ವೈದ್ಯರು ಈ ಅಂಕಿ – ಅಂಶ ಇನ್ನೂ ಹೆಚ್ಚು ಇದೆ ಎಂದು ಗುಸು ಗುಸು ಎನ್ನುತ್ತಿದ್ದಾರೆ. ಒಟ್ಟಾರೆ ಕಣ್ಣು ಬಿಟ್ಟು ಈ ಜಗತ್ತನ್ನು ನೋಡುವ ಮೊದಲೆ ಕಂದಮ್ಮಗಳು ಕಣ್ಣು ಮುಚ್ಚಿಕೊಳ್ಳುತ್ತಿರುವದು ವಿಷಾಧನಿಯ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಾಣಂತಿಯರು, ಮಕ್ಕಳ ಸಾವು ಪ್ರಕರಣ – ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ತನಿಖೆಗೆ ಹೆಬ್ಬಾಳ್ಕರ್ ಆದೇಶ