Wednesday, 18th July 2018

Recent News

ಕುತೂಹಲಕ್ಕೆ ಕಾರಣವಾಯ್ತು ರಾಜಮೌಳಿಯ ಟ್ವಿಟ್ಟರ್ ಫೋಟೋ

ಮುಂಬೈ: ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ ಈ ಪ್ರಶ್ನೆಯನ್ನು ಹುಟ್ಟುಹಾಕಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ರಾಜಮೌಳಿ ಈಗ ಒಂದು ಫೋಟೋವನ್ನು ಪ್ರಕಟಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ಕುತೂಹಲವನ್ನು ಹುಟ್ಟಿಸಿದ್ದಾರೆ.

ಬಾಹುಬಲಿ ಮುಗಿದ ಬಳಿಕ ಮುಂದೆ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಎನ್ನುವಂತೆ ರಾಜಮೌಳಿ ಅವರು ಟ್ವಿಟ್ಟರ್ ನಲ್ಲಿ ಟಾಲಿವುಡ್ ಸ್ಟಾರ್‍ಗಳಾದ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಜೊತೆ ಇರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.

ರಾಜಮೌಳಿ ಟ್ವೀಟ್ ಮಾಡಿರುವ ಫೋಟೋಗೆ ಏನನ್ನೂ ಬರೆಯದೇ ಬರಿ ಚುಕ್ಕಿಗಳನ್ನಿಟ್ಟು ಕೊನೆಗೆ ಸ್ಮೈಲಿಯ ಇಮೋಜಿವೊಂದನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ನಿಮ್ಮ ಮುಂದಿನ ಚಿತ್ರದಲ್ಲಿ ಈ ಸ್ಟಾರ್ ನಟರು ಇರುತ್ತಾರ ಎನ್ನುವ ಪ್ರಶ್ನೆಯನ್ನು ರಾಜಮೌಳಿ ಅವರಲ್ಲಿ ಕೇಳುತ್ತಿದ್ದಾರೆ.

ಆದರೆ ರಾಜಮೌಳಿ ಇದೂವರೆಗೆ ತಮ್ಮ ಮುಂದಿನ ಚಿತ್ರದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಈ ಹಿಂದೆ ವೆಬ್ ಸೈಟ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಾನು ಸೋಶಿಯಲ್ ಡ್ರಾಮಾ ಕುರಿತ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಈ ಚಿತ್ರವನ್ನು ದಾನಯ್ಯ ಅವರು ನಿರ್ಮಾಣ ಮಾಡಲಿದ್ದಾರೆ ಎಂದು ತಿಳಿಸಿದ್ದರು.

ರಾಜಮೌಳಿ ಅವರ ಮಗಧೀರ ಸಿನಿಮಾದಲ್ಲಿ ರಾಮ್‍ಚರಣ್ ತೇಜ ಅಭಿನಯಿಸಿದ್ದರು. ಜ್ಯೂನಿಯರ್ ಎನ್‍ಟಿಆರ್ ನಟಿಸಿರುವ ಸ್ಟುಡೆಂಟ್ ನಂಬರ್ 1, ಸಿಂಹಾದ್ರಿ ಮತ್ತು ಯಮದೊಂಗ ಸಿನಿಮಾಗಳನ್ನು ರಾಜ್‍ಮೌಳಿ ಅವರೇ ನಿರ್ದೇಶಿಸಿದ್ದರು.

Leave a Reply

Your email address will not be published. Required fields are marked *