ಬಾಲಿವುಡ್ ಅಂಗಳದಲ್ಲಿ ಸದ್ಯ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ‘ಅನಿಮಲ್’ (Animal) ಸಿನಿಮಾ 500 ಕೋಟಿ ರೂಪಾಯಿಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ಅಷ್ಟೇ ಅಲ್ಲ, ಚಿತ್ರದಲ್ಲಿ ನಟಿಸಿದ ನಟಿ ತೃಪ್ತಿ ದಿಮ್ರಿ (Tripti Dimri) ಕೂಡ ಕ್ಲಿಕ್ ಆಗಿದ್ದಾರೆ. ಇದರ ನಡುವೆ ಹೊಸ ಸಿನಿಮಾಗೆ ನಾಯಕಿಯಾಗಿ ಸೆಲೆಕ್ಟ್ ಆಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
ಇದೀಗ ಕಾರ್ತಿಕ್ ಆರ್ಯನ್ (Karthik Aryan) ಮುಂದಿನ ಚಿತ್ರಕ್ಕೆ ತೃಪ್ತಿ ದಿಮ್ರಿ ನಾಯಕಿಯಾಗಿದ್ದಾರೆ. ಆಶಿಕಿ ಪಾರ್ಟ್ 1 ಮತ್ತು 2 ಸಂಚಲನ ಸೃಷ್ಟಿಸಿತ್ತು. ಈಗ ಆಶಿಕಿ-3 ಚಿತ್ರಕ್ಕೆ ಚಾಲನೆ ನೀಡಲು ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯೊಂದು ಮುಂದಾಗಿದೆ. ಕಾರ್ತಿಕ್ ಆರ್ಯನ್- ತೃಪ್ತಿ ಜೋಡಿಯಾಗಿ ನಟಿಸಲು ಫೈನಲ್ ಆಗಿದೆ. 2024ರ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ.
ಮೊದಲ ಬಾರಿಗೆ ಕಾರ್ತಿಕ್ ಜೊತೆ ತೃಪ್ತಿ ನಟಿಸುತ್ತಿರೋ ಕಾರಣ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇಬ್ಬರ ಜೋಡಿ ಪ್ರೇಕ್ಷಕರಿಗೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡಬಹುದು ಎಂದು ಕಾತರದಿಂದ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ದರ್ಶನ್ ಸಿನಿಮಾದಲ್ಲಿ ತೆಲುಗು ನಟ ಚಿರಂಜೀವಿ
ರಣ್‌ಬೀರ್ ಕಪೂರ್ (Ranbir Kapoor) ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಿದ ಮೇಲೆ ನಟಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ರಶ್ಮಿಕಾ ಮಂದಣ್ಣಗಿಂತ (Rashmika Mandanna) ತೃಪ್ತಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಾಲಿವುಡ್ ಸಿನಿಮಾಗಳಿಗೆ ನಟಿಸಲು ತೃಪ್ತಿಗೆ ಬೇಡಿಕೆ ಸೃಷ್ಟಿಯಾಗಿದೆ.