Connect with us

Cinema

ಅಪಘಾತದ ಬಳಿಕ ದರ್ಶನ್ ಸಿನಿಮಾ ಶೂಟಿಂಗ್‍ಗೆ ರೀ-ಎಂಟ್ರಿ!

Published

on

 ಕೆಲ ದಿನಗಳಿಂದ ಕೈಗಾಗಿರುವ ಫ್ರಾಕ್ಚರ್ ನಿಂದಾಗಿ ವಿಶ್ರಾಂತಿ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಸಿನಿಮಾ ಶೂಟಿಂಗ್‍ಗೆ ಮರಳಿದ್ದಾರೆ.

ದರ್ಶನ್ ಕೈಯಲ್ಲಿ ಹಲವಾರು ಪ್ರಾಜೆಕ್ಟ್ ಗಳಿವೆ. ಯಾವುದೇ ಒಂದು ಅಡೆತಡೆಯಾದರೂ ಕೋಟಿ ಕೋಟಿ ನಷ್ಟ ಉಂಟಾಗುತ್ತೆ. ಇದನ್ನರಿತ ದರ್ಶನ್ ಮತ್ತೆ ಸಿನಿಮಾದಲ್ಲಿ ನಟಿಸುವುದ್ದಕ್ಕೆ ನಿರ್ಧರಿಸಿದ್ದಾರೆ. ದರ್ಶನ್ ಸ್ನೇಹಿತರು ಹಾಗೂ ಆಪ್ತರು ಹೇಳಿದಂತೆ ದರ್ಶನ್‍ಗೆ ಹೆಚ್ಚಿನ ವಿಲ್ ಪವರ್ ಇದೆ. ದೇಹದ ನೋವನ್ನು ವಿಲ್ ಪವರ್ ದೂರ ಮಾಡುತ್ತೆ. ಹೀಗಾಗಿ ಇನ್ನು ಕೆಲವೇ ದಿನದಲ್ಲಿ ದರ್ಶನ್ ಮತ್ತೆ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿಯಾಗ್ತಾರೆ.

ದರ್ಶನ್‍ಗೆ ಅಪಘಾತವಾಗೋದಕ್ಕೂ ಮೊದಲೇ `ಯಜಮಾನ’ ಚಿತ್ರದ ಟಾಕೀ ಭಾಗದ ಶೂಟಿಂಗ್ ಸಂಪೂರ್ಣ ಮುಗಿಸಿದ್ದರು. ‘ಒಡೆಯ’ ಸಿನಿಮಾದ ಒಂದು ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದರು. ಅಪಘಾತವಾದ ಮರುದಿನದಿಂದ ಒಡೆಯ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ಶುರುವಾಗಬೇಕಿತ್ತು. ನಂತರ ಅದು ಪೋಸ್ಟ್ ಪೋನ್ ಆಯ್ತು. ಆದರೆ ಈ ಗ್ಯಾಪ್‍ನಲ್ಲಿ `ಯಜಮಾನ’ ಚಿತ್ರದ ಸಂಪೂರ್ಣ ಕೆಲಸವನ್ನು ಮುಗಿಸಿಕೊಡೋಕೆ ದರ್ಶನ್ ನಿರ್ಧರಿಸಿದ್ದಾರೆ.

ಯಜಮಾನ ಚಿತ್ರದ ಎರಡು ಹಾಡಿನ ಚಿತ್ರೀಕರಣ ಈ ತಿಂಗಳು ನಡೆಯಬೇಕಿತ್ತು. ನಂತರದಲ್ಲಿ ದರ್ಶನ್ ಡಬ್ಬಿಂಗ್ ಕಾರ್ಯ ಮುಗಿಸಿವುದ್ದಕ್ಕೆ ನಿರ್ಧರಿಸಿದ್ದರು. ಆದರೆ ದರ್ಶನ್ ತಂಡದ ಸಮಯ ವೇಸ್ಟ್ ಮಾಡದೇ ಮುಂದಿನ ವಾರವೇ ಡಬ್ಬಿಂಗ್ ಕೆಲಸ ಶುರುಮಾಡುವುದ್ದಕ್ಕೆ ಯೋಚಿಸಿದ್ದರು. ಅಲ್ಲಿಗೆ ಒಂದೇ ತಿಂಗಳೊಳಗೆ ದರ್ಶನ್ ಸಿನಿಮಾ ಕೆಲಸ ಶುರು ಮಾಡಿದಂತಾಯ್ತು. ಹೀಗಾಗಿ ಅಂದುಕೊಂಡ ಸಮಯದಲ್ಲಿ ಶೂಟಿಂಗ್ ಮುಗಿಸಿಕೊಡೋಕೆ ದರ್ಶನ್ ಯೋಚಿಸಿ ಈ ತಿಂಗಳೊಳಗೆ `ಯಜಮಾನ’ ಚಿತ್ರದ ಡಬ್ಬಿಂಗ್ ಕಾರ್ಯವನ್ನ ಮುಗಿಸಿಕೊಡಲಿದ್ದಾರೆ.

ಯಜಮಾನ ಡಬ್ಬಿಂಗ್ ಕೆಲಸಕ್ಕೇನೋ ದಾರಿ ಕಂಡುಕೊಂಡಾಯ್ತು. ಸಾಮಾನ್ಯವಾಗಿ ಮೂಳೆ ಫ್ರ್ಯಾಕ್ಚರ್ ಒಳಗಾದಾಗ ಕೈ ಅಲ್ಲಾಡಿಸಬಾರದು ಎಂದೇ ಸಿಮೆಂಟ್ ಬ್ಯಾಂಡೇಜ್ ಹಾಕಿರುತ್ತಾರೆ. ವೈದ್ಯರ ಸಲಹೆಯ ಮೇರೆಗೆ ಇನ್ನೂ ಒಂದು ತಿಂಗಳು ದರ್ಶನ್ ಬ್ಯಾಂಡೇಜ್ ತೆಗೆಯುವಂತೆ ಇಲ್ಲವೇ ಇಲ್ಲ. ಏಕೆಂದರೆ ಶೂಟಿಂಗ್‍ಗೆ ಒಮ್ಮೆ ಹೋದ ಮೇಲೆ ಫೈಟ್ ಡ್ಯಾನ್ಸ್ ಮಾಡಬೇಕು. ಸದ್ಯ ದರ್ಶನ್ ನವೆಂಬರ್ 20ರಿಂದ ಚಿತ್ರೀಕರಣಕ್ಕೆ ಎಂಟ್ರಿಯಾಗಲಿದ್ದಾರೆ.

ಯಜಮಾನ ಚಿತ್ರದ ಬಾಕಿ ಎರಡು ಹಾಡನ್ನು ಯುರೋಪ್‍ನಲ್ಲಿ ಚಿತ್ರೀಕರಿಸೋಕೆ ಯೋಜನೆ ನಡೆದಿದೆ. ಚಿತ್ರೀಕರಣದ ದಿನಾಂಕಕ್ಕೆ ದಾಸ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನವೆಂಬರ್ ತಿಂಗಳೊಳಗೆ ಯಜಮಾನ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಡಲಿದ್ದಾರೆ. ಈಗಾಗಲೇ ಯಜಮಾನದ ನಿರ್ಮಾಪಕ ಬಿ ಸುರೇಶ್ ತಂಡ ಯುರೋಪ್ ದೇಶಗಳನ್ನು ಸುತ್ತಿ ಹಾಡು ಚಿತ್ರೀಕರಿಸುವ ಜಾಡು ಹುಡುಕಿಕೊಂಡು ಬಂದಿದೆ. ಸ್ವೀಡನ್ ಮುಂತಾದ ನಗರಗಳಲ್ಲಿ ಅದರ ಚಿತ್ರೀಕರಣ ನಡೆಯುತ್ತೆ.

ಇಷ್ಟು ದಿನ ದರ್ಶನ್ ಕೈಗೆ ಬ್ಯಾಂಡೇಜ್ ಹಾಕಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ದರ್ಶನ್ ಮುಂದಿನ ಸಿನಿಮಾಗಳ ಶೂಟಿಂಗ್ ಶೆಡ್ಯೂಲ್ ಪಕ್ಕಾ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಪ್ಲ್ಯಾನ್ ಆದ ಚಿತ್ರಗಳ ಸ್ಕ್ರಿಪ್ಟ್ ಕೇಳಿ ಫೈನಲ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *