ಬೆಂಗಳೂರು: ಕಳೆದ 9 ವರ್ಷಗಳಿಂದ ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
Advertisement
ಅಂಥೋನಿ ರಾಜ್(44) ಬಂಧಿತ ಆರೋಪಿ. 2010ರಲ್ಲಿ ಟ್ರ್ಯಾಕ್ಟರ್ ಚಲಾಯಿಸ್ತಿದ್ದ ಆರೋಪಿ ಪಾದಚಾರಿಗಳಾದ ಗಂಡ, ಹೆಂಡತಿ ಮತ್ತು ಎಂಟು ವರ್ಷದ ಮಗುಗೆ ಗುದ್ದಿದ್ದ. ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು. ಈ ಸಂಬಂಧ ಐಪಿಸಿ ಸೆಕ್ಷನ್ 279(ವೇಗ ವಾಹನ ಸವಾರಿ), 304 ಎ(ನಿರ್ಲಕ್ಷದಿಂದ ಸಾವು) ಅಡಿ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ರೈತ ಮಹಿಳೆ ಮೇಲೆ ಲೇಡಿ ಪಿಎಸ್‍ಐ ದರ್ಪ
Advertisement
ಈ ಸಂಬಂಧ 2012ರಲ್ಲಿ ಆರೋಪಿಗೆ 10 ತಿಂಗಳು 15 ದಿನಗಳ ಕಾಲ ಜೈಲು ಶಿಕ್ಷೆಯಾಗಿತ್ತು. ಅಂಥೋನಿ ರಾಜ್ ಅಷ್ಟರಲ್ಲಿ ತಲೆಮರೆಸಿಕೊಂಡಿದ್ದ. ಆತ ಸತತ 9 ವರ್ಷಗಳಿಂದ ಪೊಲೀಸರಿಗೆ ಸಿಗದೆ ಓಡಾಡ್ತಿದ್ದನು. ಇದೀಗ ಅಂಥೋನಿ ಸಿಕ್ಕಿದ್ದು, ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಅತಿಯಾಗಿ ಮದ್ಯಪಾನ ಮಾಡ್ತಿದ್ದ ಅಂಥೋನಿ ರಿಹ್ಯಾಬಿಲಿಟೇಷನ್ ಸೆಂಟರ್ ನಲ್ಲಿದ್ದ. ಪೊಲೀಸರು ಕುಡುಕನ ಸೋಗಿನಲ್ಲಿ ರಿಹ್ಯಾಬಿಲಿಟೇಷನ್ ಸೆಂಟರ್ ಯಿಂದಲೇ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಇದನ್ನೂ ಓದಿ: ಅವಧಿಗೂ ಮುನ್ನವೇ ಪೂರ್ಣಗೊಳ್ಳಲಿದೆ ಏಷ್ಯಾದ ಉದ್ದ ಸುರಂಗ ರಸ್ತೆ
ಏನಿದು ಘಟನೆ?
ಅಂಥೋನಿ 10 ವರ್ಷಗಳ ಹಿಂದೆ ಟ್ರಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಬಾಪೂಜಿ ಕ್ಲಿನಿಕ್ ಹೋಗಿ ಬರ್ತಿದ್ದ ವೇಳೆ ಟ್ರಾಕ್ಟರ್ ಸಿಕ್ಕಿ ಕೌಸಲ್ ಕುಮಾರ್(8) ಎನ್ನುವ ಮಗು ಸಾವನ್ನಪ್ಪಿತ್ತು. ಈ ಘಟನೆ ಬಾಪೂಜಿ ನಗರ ಐದನೇ ಮುಖ್ಯರಸ್ತೆಯಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿಗೆ 10 ತಿಂಗಳು 15 ದಿನ ಜೈಲು ಶಿಕ್ಷೆಯಾಗಿತ್ತು. ಆದರೆ ಆರೋಪಿ ಪರಾರಿಯಾಗಿದ್ದು, ಕೊನೆಗೂ ಸೋಮನಹಳ್ಳಿ ಸೆಂಟ್ ಮದರ್ ತೆರೆಸ್ ರಿಹಾಬ್ ಸೆಂಟರ್ ನಲ್ಲಿರೋದಾಗಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ನಂತರ ರಿಹ್ಯಾಬಿಲಿಷೇಷನ್ ನಲ್ಲಿ ಪೊಲೀಸ್ ಪೇದೆಯನ್ನು ಸೇರಿಸೋ ನೆಪದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಅಂಥೋನಿ ಸಿಕ್ಕಿಬಿದ್ದಿದ್ದ.