ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಕಳೆದ 5 ವರ್ಷಗಳ ಬಳಿಕ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಮಳೆ ದಾಖಲೆ ಸೃಷ್ಟಿಸಿದೆ.
ಹೌದು, ಈ ಹಿಂದೆ 2017ರಲ್ಲಿ 170 ಮಿ.ಮೀ. ಮಳೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿತ್ತು. ಇದೀಗ 5 ವರ್ಷದ ಬಳಿಕ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗಿದ್ದು, ಹೊಸ ದಾಖಲೆಯಾಗಿದೆ. ಈ ವರ್ಷ ಇಲ್ಲಿವರೆಗೆ 166 ಮಿ.ಮೀ. ಮಳೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ
Advertisement
Advertisement
2011ರಲ್ಲಿ 110 ಮಿ.ಮೀ. ಮಳೆ ಸುರಿದು ದಾಖಲೆ ಬರೆದಿತ್ತು. ಆದರೆ ನಿನ್ನೆ ಒಂದೇ ದಿನ 11 ಮಿ.ಮೀ. ಮಳೆ ಸುರಿದಿದೆ. ಮುಂದಿನ 5 ದಿನ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದ್ದು, ಎಲ್ಲೆಡೆ ಅಲರ್ಟ್ ಘೋಷಿಸಲಾಗಿದ್ದು, ಸದ್ಯ ಸಾರ್ವಕಾಲಿಕ ದಾಖಲೆಯಾಗುವ ಸಾಧ್ಯತೆ ಇದೆ. ಜನವರಿಯಿಂದಲೇ ಈ ಬಾರಿ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ.
Advertisement
Advertisement
ನಗರದಲ್ಲಿ ಮುಂಗಾರು ಮಳೆ
ನಗರದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ವಾಡಿಕೆಗಿಂತ ಶೇ. 11ರಷ್ಟು ಹೆಚ್ಚು ಮಳೆಯಾಗಿದ್ದು, ಅಕ್ಟೋಬರ್ 1 ರಿಂದ ಅಕ್ಟೋಬರ್ 15 ರವರೆಗೆ 123 ಮಿ.ಮೀ ಅಂದರೆ ವಾಡಿಕೆಗಿಂತ ಶೇ. 40ರಷ್ಟು ಹೆಚ್ಚು ಮಳೆಯಾಗಲಿದೆ. ಇದನ್ನೂ ಓದಿ: ಸ್ವಿಟ್ಜರ್‌ಲೆಂಡ್ ನಲ್ಲಿ ಬುರ್ಖಾ ಬ್ಯಾನ್‌ಗೆ ಪ್ರಸ್ತಾವನೆ – ನಿಯಮ ಉಲ್ಲಂಘಿಸಿದ್ರೆ 83 ಸಾವಿರ ದಂಡ
ಶನಿವಾರವು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಎಚ್. ಗೊಲ್ಲರ್ 3.75 ಮೀ.ಮೀ. ವಿದ್ಯಾ ಪೀಠ 3.3 ಮೀ.ಮೀ, ಸಂಪಂಗಿರಾಮನಗರ .3.9 ಮೀ.ಮೀ, ಕೆಂಗೇರಿ 3.1 ಮೀ.ಮೀ, ಹೆಮ್ಮಿಗೆಪುರ 2.8 ಮೀ.ಮೀ ಮಳೆ ದಾಖಲಾಗಿದೆ.
ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮೈಸೂರು ಬೆಂಗಳೂರು ಹೆದ್ದಾರಿ ಮತ್ತೆ ಜಲಾವೃತವಾಗಿದೆ. ಮಂಡ್ಯದ ಬೂದನೂರು ಕೆರೆ ಹೊಡೆದ ಪರಿಣಾಮ ಹೆದ್ದಾರಿಗೆ ನೀರು ನುಗ್ಗಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದರಿಂದ ವೀಕೆಂಡ್‍ನಲ್ಲಿ ಮೈಸೂರಿಗೆ ಹೆಚ್ಚು ವಾಹನಗಳು ಸಂಚಾರ ಮಾಡುವುದರಿಂದ ಬೆಂಗಳೂರು-ಮೈಸೂರು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಬರುವ ವಾಹನಗಳು ಮದ್ದೂರು ಬಳಿ ಡೈವರ್ಟ್ ಆಗಿ ಮದ್ದೂರು – ಕೆಎಂ ದೊಡ್ಡಿ ಮಾರ್ಗವಾಗಿ ಮೈಸೂರು ತಲುಪುವ ವ್ಯವಸ್ಥೆ ಮಾಡಿದರೆ, ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳಿಗೆ ಮಂಡ್ಯ ಬಳಿ ಡೈವರ್ಟ್ ಆಗಿ ಮಳವಳ್ಳಿ- ಮದ್ದೂರು ಮಾರ್ಗವಾಗಿ ಬೆಂಗಳೂರು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.