ದೊರೆ, ಬಂಗಾರದ ಮನೆ, ‘ಅಮೆರಿಕಾ ಅಮೆರಿಕಾ’ (America America) ಚಿತ್ರಗಳ ಮೂಲಕ ಮೋಡಿ ಮಾಡಿದ್ದ ನಟಿ ಹೇಮಾ ಪ್ರಭಾತ್ (Hema Prabath) ಮತ್ತೆ ನಟನೆಗೆ ಮರಳಿದ್ದಾರೆ. ಆದರೆ ಈ ಸಿನಿಮಾ ಬದಲು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಜನಪ್ರಿಯ ಸೀರಿಯಲ್‌ವೊಂದಕ್ಕೆ ಹೇಮಾ ಸಾಥ್ ನೀಡಿದ್ದಾರೆ.
90ರ ದಶಕದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಚೆಲುವೆಯಾಗಿ ಹೇಮಾ ಕನ್ನಡಿಗರ ಮನಗೆದ್ದಿದ್ದರು. ಬಳಿಕ ಮದುವೆ, ಸಂಸಾರ ಅಂತ ನಟಿ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದರು.
ಮೈಸೂರಿನ ಬೆಡಗಿ ಸ್ಪಂದನಾ ಸೋಮಣ್ಣ, ಅಶ್ವೀನ್ ನಟನೆಯ ‘ಕರಿಮಣಿ’ (Karimani) ಎಂಬ ಸೀರಿಯಲ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಕರಿಮಣಿ ಧಾರಾವಾಹಿಯಲ್ಲಿ ಹೇಮಾ ನಟಿಸುತ್ತಿದ್ದಾರೆ. ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ.
ಅಂದಹಾಗೆ, 5 ವರ್ಷಗಳ ಹಿಂದೆ ರಕ್ಷಾ ಬಂಧನ (Raksha Bandhana) ಎಂಬ ಸೀರಿಯಲ್ ಕಡೆಯದಾಗಿ ನಟಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ‘ಕರಿಮಣಿ’ (Karimani) ಸೀರಿಯಲ್‌ಗೆ ಹೇಮಾ ಬಂದಿರೋದು ವಿಶೇಷ. ಇದನ್ನೂ ಓದಿ:ಡ್ರೋನ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ- ಫೇಕ್ ಪ್ರಮೋಟರ್ ವಿರುದ್ಧ ವಿನಯ್ ಕಿಡಿ
ಹೇಮಾ ಪ್ರಭಾತ್ ಅವರು ಅದೆಷ್ಟೇ ಸಿನಿಮಾ ಮಾಡಿದ್ರು ಕೂಡ ಇಂದಿಗೂ ಅವರನ್ನು ಕರೆಯೋದು ರಮೇಶ್ ಅರವಿಂದ್ (Ramesh Aravind) ನಾಯಕಿ ಎಂದೇ ಹೈಲೆಟ್ ಆಗಿದ್ದಾರೆ. ‘ಅಮೆರಿಕಾ ಅಮೆರಿಕಾ’ ಚಿತ್ರದಲ್ಲಿ ಭೂಮಿಕಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಈಗ ಮತ್ತೆ ಹೇಮಾ ಕಿರುತೆರೆ ಬಂದಿರೋದು ಫ್ಯಾನ್ಸ್ ಖುಷಿ ಕೊಟ್ಟಿದೆ.