ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ದತ್ತಪೀಠದಲ್ಲಿನ (Dattapita) ದತ್ತಜಯಂತಿಗೆ (Datta Jayanti) ಕಾಫಿನಾಡ ಜಿಲ್ಲಾಡಳಿತ ತಯಾರಾಗಿದೆ. ಅತ್ತ ಹಿಂದೂಗಳು 47 ವರ್ಷದ ಹೋರಾಟದ ಫಲವಾಗಿ ದತ್ತಪೀಠದಲ್ಲಿ ಹಿಂದೂ ಅರ್ಚಕರ ಪೂಜೆ ಕಂಡು ಪುಳಕಿತರಾಗಿದ್ದಾರೆ. ಸೋಮವಾರದಿಂದ 3 ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಕಾಫಿನಾಡ (Chikkamagaluru) ಖಾಕಿಗಳು ಹೈ ಅಲರ್ಟ್ ಘೋಷಿಸಿದ್ದಾರೆ.
ದತ್ತಪೀಠದಲ್ಲಿ ಹಿಂದೂ ಅರ್ಚಕರು ಪೂಜೆ ನಡೆಸಿದ್ದಾರೆ. ಮತ್ತೊಂದೆಡೆ ಕಾಫಿನಾಡು ಕೇಸರಿನಾಡಾಗಿ ಕಂಗೊಳಿಸಿದೆ. ಜಿಲ್ಲಾದ್ಯಂತ ಕಾಫಿನಾಡ ಖಾಕಿಗಳು ಹೈ ಅಲರ್ಟ್ ಆಗಿದ್ದಾರೆ. ಓರ್ವ ಎಸ್‌ಪಿ, 4 ಎಎಸ್‌ಪಿ, 17 ಡಿವೈಎಸ್‌ಪಿ, 39 ಇನ್ಸ್ಪೆಕ್ಟರ್, 156 ಸಬ್ ಇನ್ಸ್ಪೆಕ್ಟರ್, 285 ಎಎಸ್‌ಐ, 2050 ಕಾನ್ಸ್ಟೇಬಲ್, 200 ಲೇಡಿ ಪೋಲೀಸ್, 500 ಹೋಂ ಗಾರ್ಡ್, 15 ಕೆಎಸ್‌ಆರ್‌ಪಿ, 25 ಡಿಆರ್, ಹೀಗೆ ಒಟ್ಟು 4,500 ಪೊಲೀಸರು ಜಿಲ್ಲೆಯಾದ್ಯಂತ ರೂಟ್ ಮಾರ್ಚ್ ನಡೆಸಿದ್ದಾರೆ. 150ಕ್ಕೂ ಹೆಚ್ಚು ಸಿಸಿಟಿವಿ ಜೊತೆ 25 ಚೆಕ್ ಪೋಸ್ಟ್ಗಳನ್ನು ಭದ್ರತೆಗಾಗಿ ಇರಿಸಲಾಗಿದೆ.
ಕಳೆದ 47 ವರ್ಷಗಳಿಂದ ದತ್ತಪೀಠದ ಉಮೇದುವಾರಿಕೆ ಹಾಗೂ ಹಿಂದೂ ಅರ್ಚಕರಿಗಾಗಿ ಹೋರಾಡುತ್ತಿದ್ದ ಹಿಂದೂ ಸಂಘಟನೆಗಳಿಗೆ ಈ ಬಾರಿ ಹಿಂದೂ ಅರ್ಚಕರಿಂದ ಪೂಜೆ ನೋಡುವ ಭಾಗ್ಯ ಲಭಿಸಿದೆ. ಇಂದಿನಿಂದ 3 ದಿನ ಸರ್ಕಾರ ನೇಮಿಸಿರುವ ತಾತ್ಕಾಲಿಕ ಅರ್ಚಕರಿಂದ ದತ್ತಾತ್ರೇಯ ಸ್ವಾಮಿಗೆ ಪೂಜಾ-ಕೈಂಕರ್ಯಗಳು ನಡೆಯಲಿವೆ. ಇಂದು ದತ್ತಪೀಠಕ್ಕೆ ಭೇಟಿ ನೀಡಿದ್ದ ಅರ್ಚಕರಾದ ಶ್ರೀಧರ್ ಹಾಗೂ ಸಂದೀಪ್ ದತ್ತಾತ್ರೇಯ ಸ್ವಾಮಿಗೆ ಪೂಜೆಗೈದು ಬಂದಿದ್ದಾರೆ. ಇದನ್ನೂ ಓದಿ: Himachal Pradesh Exit Poll Result: ಬಿಜೆಪಿ ಕಾಂಗ್ರೆಸ್ ಮಧ್ಯೆ ನೆಕ್ ಟು ನೆಕ್ ಫೈಟ್
ಈ ನಡುವೆ ಮಾತನಾಡಿರುವ ಶಾಸಕ ಸಿಟಿ ರವಿ, ನಮ್ಮ ಮೊದಲ ಹಂತದ ಹೋರಾಟದಲ್ಲಿ ಜಯ ಕಂಡಿದ್ದೇವೆ. ಇನ್ಮುಂದೆ ದತ್ತಪೀಠವೇ ಬೇರೆ, ದರ್ಗಾವೇ ಬೇರೆ ಎಂಬ 2ನೇ ಹಂತದ ಹೋರಾಟ ಆರಂಭವಾಗಲಿದೆ ಎಂದಿದ್ದಾರೆ.
ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹೆಚ್ಚುವರಿ ಪೊಲೀಸರು ಬಂದೋಬಸ್ತ್ಗೆ ಬೆನ್ನೆಲುಬಾಗಿದ್ದಾರೆ. ನಗರ ಸೇರಿದಂತೆ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ 25 ಚೆಕ್ ಪೋಸ್ಟ್ಗಳನ್ನ ತೆರೆಯಲಾಗಿದೆ. ಹಲವರಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಸಮಾಜದ ಶಾಂತಿ ಕದಡಿ, ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದರೆ ನಿರ್ಧಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳೋದಾಗಿ ಡಿಸಿ ಹಾಗೂ ಎಸ್‌ಪಿ ಖಡಕ್ಕಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದಾಗುವ ಸುಳಿವು – ಸಿಎಂ ನಿರ್ಧರಿಸುತ್ತಾರೆ ಎಂದ ದೇವೇಂದ್ರ ಫಡ್ನವಿಸ್