ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ. ಈ ಹಿನ್ನೆಲೆ 3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಭೀತಿ ಎದುರಾಗಿದೆ.
Advertisement
ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಕಾವೇರಿ ಕೊಳ್ಳದ ಜನರು ಪ್ರವಾಹದ ಭೀತಿಯನ್ನು ಎದುರಿಸುವ ಸ್ಥಿತಿ ಬಂದೊದಗಿದೆ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಕಾರೇಕುರ, ಮಜ್ಜಿಗೆ ಪುರ, ಬಲಮುರಿ, ಹೊಂಗಹಳ್ಳಿ, ಪಾಲಹಳ್ಳಿ, ಶ್ರೀರಂಗಪಟ್ಟಣ, ಎಣ್ಣೆಹೊಳೆ ಕೊಪ್ಪಲು, ರಾಮಪುರ, ಮೇಳಾಪುರ, ಚಂದಗಾಲು, ಹಂಗರಹಳ್ಳಿ, ಮರಳಗಾಲ, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಮಹದೇವಪುರ ಸೇರಿದಂತೆ 40ಕ್ಕೂ ಅಧಿಕ ಗ್ರಾಮಗಳ ಜಮೀನುಗಳು ಜಲಾವೃತವಾಗಿವೆ. ಇದನ್ನೂ ಓದಿ: ಪಾಕಿಸ್ತಾನಿ ಸಹೋದರಿಯಿಂದ ಮೋದಿಗೆ ಬಂತು ರಕ್ಷಾ ಬಂಧನ – 2024ರ ಚುನಾವಣೆಗೆ ಹಾರೈಕೆ
Advertisement
Advertisement
ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮ ವಾಹಿನಿ, ಗೋಸಾಯ್ ಘಾಟ್, ಬಿಜಿ ಹೊಳೆ ಸಮೀಪದ ದೇವಸ್ಥಾನಗಳು, ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟಗಳು ಜಲಾವೃತವಾಗಿವೆ. ಇದಲ್ಲದೇ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮುಳುಗಡೆಯ ಅಂಚಿಗೆ ಬಂದಿದೆ. 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬರುತ್ತಿರುವ ಕಾರಣ 200 ವರ್ಷಗಳ ಇತಿಹಾಸವಿರುವ ವೆಲ್ಲೆಸ್ಲಿ ಸೇತುವೆ ಅಪಾಯದ ಅಂಚಿನಲ್ಲಿದೆ. ಹೀಗಾಗಿ ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 1,837 ಮಂದಿಗೆ ಕೊರೊನಾ ಸೋಂಕು – 4 ಸಾವು
Advertisement
ಕಾವೇರಿ ನದಿ ಪಾತ್ರದ ಎಲ್ಲಾ ಪ್ರವಾಸಿ ಸ್ಥಳಗಳು ಬಂದ್ ಆಗಿದ್ದು, ನದಿಯಿಂದ 1 ಕಿ.ಮೀ ವ್ಯಾಪ್ತಿಯ ವರೆಗೆ ನಿಷೇಧ ಹೇರಲಾಗಿದೆ.