InternationalLatestMain Post

ಪಾಕಿಸ್ತಾನಿ ಸಹೋದರಿಯಿಂದ ಮೋದಿಗೆ ಬಂತು ರಕ್ಷಾ ಬಂಧನ – 2024ರ ಚುನಾವಣೆಗೆ ಹಾರೈಕೆ

ಇಸ್ಲಾಮಾಬಾದ್: ರಕ್ಷಾ ಬಂಧನದ ಶುಭ ಸಂದರ್ಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ಅವರು ರಾಖಿ ಕಳುಹಿಸಿದ್ದಾರೆ. ಅಲ್ಲದೇ 2024 ರ ಸಾರ್ವತ್ರಿಕ ಚುನಾವಣೆಗೆ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಮರ್ ಮೊಹ್ಸಿನ್ ಶೇಖ್, ಈ ಬಾರಿ ನನ್ನ ಸಹೋದರ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಇದಕ್ಕಾಗಿ ನಾನು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಮೋದಿ ಈ ಬಾರಿ ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾನು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇನೆ. ಕಸೂತಿ ವಿನ್ಯಾಸದೊಂದಿಗೆ ರೇಷ್ಮೆಯ ರಿಬ್ಬನ್ ಬಳಸಿ ನಾನೇ ಈ ರಾಖಿಯನ್ನು ತಯಾರಿಸಿದ್ದೇನೆ. ಇದರೊಂದಿಗೆ ಪತ್ರವನ್ನೂ ಬರೆದಿದ್ದು, ಅವರ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ್ದೇನೆ. 2024ರ ಚುನಾವಣೆಗೆ ಶುಭ ಹಾರೈಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: CWG 2022: ನಿಖತ್ ಜರೀನ್‌ಗೆ ಒಲಿದ ಚಿನ್ನ – ಬಾಕ್ಸಿಂಗ್‌ನಲ್ಲಿ ಭಾರತಕ್ಕಿಂದು ಹ್ಯಾಟ್ರಿಕ್ ಗೋಲ್ಡ್

ನರೇಂದ್ರ ಮೋದಿ ಅವರು 2024ರ ಚುನಾವಣೆಯಲ್ಲೂ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಈ ಬಗ್ಗೆ ಯಾವುದೇ ಸಂದೇಹವಿಲ್ಲ. ಅವರು ಮತ್ತೆ ಪ್ರಧಾನಿಯಾಗಲು ಅರ್ಹರು. ಆ ಸಾಮರ್ಥ್ಯವನ್ನೂ ಅವರು ಹೊಂದಿದ್ದು, ಪ್ರತಿ ಬಾರಿಯೂ ಅವರು ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಕಮರ್ ಮೋಹ್ಸಿನ್ ಶೇಖ್ ಅವರು ಕಳೆದ ವರ್ಷವೂ ರಕ್ಷಾ ಬಂಧನದ ನಿಮಿತ್ತ ಪ್ರಧಾನಿ ಮೋದಿ ಅವರಿಗೆ ರಾಖಿ ಹಾಗೂ ಪತ್ರವನ್ನು ಕಳುಹಿಸಿದ್ದರು. ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಕೆ.ಎಲ್.ರಾಹುಲ್

Live Tv

Leave a Reply

Your email address will not be published.

Back to top button