ಪಾಟ್ನಾ: ಬಿಜೆಪಿ ಪಕ್ಷಕ್ಕೆ ಮೂರು ಶಾಸಕರು ಹೊಸದಾಗಿ ಸೇರ್ಪಡೆಯಾಗಿದ್ದ ಬೆನ್ನಲ್ಲೇ ಬಿಹಾರದ ಸಚಿವರೊಬ್ಬರ ಮನೆಯ ಹೊರಗಡೆಯಿದ್ದ ನಾಮಫಲಕ ನಾಪತ್ತೆಯಾಗಿದೆ. ಈ ಸುದ್ದಿ ಬಿಹಾರದಲ್ಲಿ ಸಂಚಲನ ಮೂಡಿಸಿದೆ.
ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥರಾಗಿರುವ ಬಿಹಾರ ಸಚಿವ ಮುಖೇಶ್ ಸಹಾನಿ ಅವರ ಮನೆ ಮುಂದೆ ಇದ್ದ ಅವರ ನಾಮಫಲಕ ನಾಪತ್ತೆಯಾಗಿದೆ. ಅದರಲ್ಲಿಯೂ ಈ ಸುದ್ದಿಯಲ್ಲಿರುವ ವಿಶೇಷತೆ ಎಂದರೆ 3 ಶಾಸಕರು ಬಿಜೆಪಿ ಪಕ್ಷಕ್ಕೆ ಸೇರಿದ ಬಳಿಕ ಮುಖೇಶ್ ಮನೆಯಲ್ಲಿ ಈ ಅಚ್ಚರಿ ಘಟನೆ ನಡೆದಿದ್ದು, ಬಿಹಾರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ
ಮುಖೇಶ್ ಅವರ ಪಕ್ಷ ಬಿಹಾರದಲ್ಲಿ ಬಿಜೆಪಿ ಮತ್ತು ಸಿಎಂ ನಿತೀಶ್ ಕುಮಾರ್ ಅವರ ಜನತಾ ದಳ(ಯುನೈಟೆಡ್)ದ ಮೈತ್ರಿಕೂಟದಲ್ಲಿತ್ತು. ಆದರೆ ಬಿಹಾರದ ಬಿಜೆಪಿ ಮುಖ್ಯಸ್ಥ ಮತ್ತು ಸಂಸದ ಸಂಜಯ್ ಜೈಸ್ವಾಲ್ ಅವರು, ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಅಲಯನ್ಸ್ ಅಥವಾ ಎನ್‍ಡಿಎ ಜೊತೆ ಇನ್ನು ಮುಂದೆ ಮೈತ್ರಿ ನಡೆಸುವುದಿಲ್ಲವೆಂದು ಹೇಳಿಕೆ ಕೊಟ್ಟರು. ಈ ಹೇಳಿಕೆ ಕೊಟ್ಟ ಒಂದು ದಿನದ ನಂತರ ಮುಖೇಶ್ ಅವರ ನಾಮಫಲಕ ಕಾಣಿಯಾಗಿದೆ.
ಮುಖೇಶ್ ಅವರ ಪಕ್ಷ ಕಳೆದ ಚುನಾವಣೆಯಲ್ಲಿ ಭಾರೀ ಹಿನ್ನೆಡೆಯಾದ ಪರಿಣಾಮ ಅವರ ಪಕ್ಷದಲ್ಲಿದ್ದ ಮೂವರು ಶಾಸಕರು ಬುಧವಾರ ಬಿಜೆಪಿಗೆ ಸೇರಿದರು. ಈ ಹಿನ್ನೆಲೆ ಮುಖೇಶ್ ಅವರು, ಬಿಹಾರ ಬಿಜೆಪಿ ಪಕ್ಷಗಳು ಮೊದಲಿನಿಂದಲೂ ಅವರನ್ನು ಒಡೆಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಶಿ ದೇವಸ್ಥಾನ, ಜ್ಞಾನವಾಪಿ ಮಸೀದಿ ಭೂ ವಿವಾದ – ಮಾ 29 ರಿಂದ ನಿತ್ಯ ವಿಚಾರಣೆ
ರಾಜು ಸಿಂಗ್, ಮಿಶ್ರಿ ಲಾಲ್ ಯಾದವ್ ಮತ್ತು ಸ್ವರ್ಣ ಸಿಂಗ್ ಈ ಮೂವರು ಶಾಸಕರು ಮುಖೇಶ್ ಅವರ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದರು. ಈ ವೇಳೆ ಬಿಜೆಪಿ ಪಕ್ಷವು ಮುಖೇಶ್ ಅವರಿಗೆ ಬಿಹಾರ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದೆ. ಆದರೆ ಗುರುವಾರ ಮುಖೇಶ್ ಅವರು ರಾಜೀನಾಮೆ ನೀಡುವುದನ್ನು ನಿರಾಕರಿಸಿದ್ದರು.