ಮಡಿಕೇರಿ: ವಿರಾಜಪೇಟೆ ಪುರಸಭೆಯಲ್ಲಿ (Virajpet Municipality) ನಡೆದ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ 18 ವರ್ಷಗಳ ಬಳಿಕ ಕಾಂಗ್ರೆಸ್ (Congress) ಗದ್ದುಗೆ ಏರಿದೆ.
ಎರಡನೇ ಅವಧಿ ಅಧ್ಯಕ್ಷರಾಗಿ ದೇಚಮ್ಮ ಕಾಳಪ್ಪ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಫೌಝಿಯಾ ತಬುಸಂ ಆಯ್ಕೆಯಾಗಿದ್ದಾರೆ. ವಿರಾಜಪೇಟೆ ಪುರಸಭೆ ಒಟ್ಟು 18 ಸ್ಥಾನ ಬಲ ಹೊಂದಿದೆ. ದೇಚಮ್ಮ ಕಾಳಪ್ಪ 11 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪುರಸಭೆಯಲ್ಲಿ ಬಿಜೆಪಿಯ 8, ಕಾಂಗ್ರೆಸ್‌ನ 6, ಜೆಡಿಎಸ್ 1 ಹಾಗೂ ಮೂವರು ಪಕ್ಷೇತರ ಸದಸ್ಯರಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಕಾನೂನು ಅರಿವು ಕಾರ್ಯಾಗಾರ
ಬಿಜೆಪಿಯ (BJP) ಜೂನಾ ಸುನೀತಾ 8 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಕರ್ತವ್ಯ ನಿರ್ವಹಿಸಿದರು. ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಚುನಾವಣೆಯಲ್ಲಿ ಭಾಗಿಯಾಗಿದ್ದರು. ಪೊನ್ನಣ್ಣನವರನ್ನು ಹೊತ್ತು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಪುರಸಭೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಅಧಿಕ ಮಂದಿ ಅಸ್ವಸ್ಥ