ಧಾರವಾಡ: ಬುಧವಾರ ಸಂಜೆ ಧಾರವಾಡ (Dharwad) ಬೇಲೂರು ಕೈಗಾರಿಕಾ ಪ್ರದೇಶದ ಹೈಕೋರ್ಟ್ ಪೀಠದ ಬಳಿ ಗ್ಯಾಸ್ ಟ್ಯಾಂಕರ್ (Tanker) ಲೀಕೇಜ್ ಆಗಿತ್ತು. ಇದರಿಂದ ಇಡಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಗುರುವಾರ ಆ ಗ್ಯಾಸ್ ಟ್ಯಾಂಕರ್ ಲೀಕೇಜ್ ತಡೆದು, ಟ್ಯಾಂಕರ್ ಸ್ಥಳಾಂತರ ಮಾಡಲಾಗಿದ್ದು, ರಾತ್ರಿಯಿಡೀ ವಿದ್ಯುತ್ ಇಲ್ಲದೆ ಕಳೆದಿದ್ದ ಅಲ್ಲಿನ ಜನ ಈಗ ನಿಟ್ಟುಸಿರು ಬಿಡುವಂತೆ ಆಗಿದೆ.
ಧಾರವಾಡದಲ್ಲಿ ನಿರಂತರ 18 ಗಂಟೆಗಳ ಕಾಲ ಜೀವ ಕೈಯಲ್ಲಿ ಹಿಡಿದು ಕ್ಷಣ ಕ್ಷಣ ಕಳೆದಿದ್ದ ನೂರಾರು ಹಳ್ಳಿಯ ಜನ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ.4ರ ಧಾರವಾಡದ ಬೇಲೂರು ಹೈಕೋರ್ಟ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿನ್ನೆ ಹೆಚ್‌ಪಿ ಕಂಪನಿಯ ಟ್ಯಾಂಕರ್ ಸಿಲುಕಿ ಬಿಟ್ಟಿತ್ತು. ಅಂಡರ್‌ಪಾಸ್‌ನ ಮೇಲ್ಭಾಗದ ರಸ್ತೆಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗೋದಕ್ಕೆ ಆರಂಭವಾಗಿತ್ತು.
Advertisement
Advertisement
ಇದನ್ನು ಸಮರೋಪಾದಿಯಲ್ಲಿ ತಹಬದಿಗೆ ತರಲು ಸುಮಾರು 18 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಬೇಕಾಯ್ತು. ಸಣ್ಣದೊಂದು ಕಿಡಿ ಹಾರಿದ್ದರು ಕೂಡಾ ದೊಡ್ಡ ಅನಾಹುತ ಸಂಭವಿಸೋ ಸಾಧ್ಯತೆ ಇತ್ತು. ಹೀಗಾಗಿ ವಿದ್ಯುತ್ ಕಡಿತಗೊಳಿಸಿ, ಜನರಿಗೆ ಯಾವುದೇ ರೀತಿಯ ಬೆಂಕಿ ಹೊತ್ತಿಸದಂತೆ ಸೂಚಿಸಲಾಗಿತ್ತು. ಇದರಿಂದಾಗಿ ಅಮಾವಾಸ್ಯೆ ರಾತ್ರಿ ನಮಗೆ ಕರಾಳವಾಗಿ ಹೋಯ್ತಾ? ಅನ್ನೋ ಆತಂಕದಲ್ಲಿಯೇ ಜನ ರಾತ್ರಿ ಕಳೆದರು.
Advertisement
ನಿನ್ನೆ ಸಂಜೆ 6:20ರ ಹೊತ್ತಿಗೆ ಈ ಟ್ಯಾಂಕರ್ ಅಂಡರ್‌ಪಾಸ್ ಅಡಿ ಸಿಲುಕಿತ್ತು. ಸಾಮಾನ್ಯವಾಗಿ ಯಾವುದೇ ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಬರೋದೇ ಇಲ್ಲ. ಆದರೆ ಚಾಲಕನ ಸಣ್ಣದೊಂದು ಮೈಮರೆವು ಈ ಅವಘಡಕ್ಕೆ ಕಾರಣವಾಗಿದೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿರೋ ಹೆಚ್‌ಪಿಸಿಎಲ್ ಘಟಕಕ್ಕೆ ಮುಂಬೈನಿಂದ ಬಂದಿರೋ ಈ ಟ್ಯಾಂಕರ್ ತಲುಪಬೇಕಿತ್ತು. ಆದರೆ ಚಾಲಕ ಮೈಮರೆತು ತೀರಾ ಮುಂದೆ ಬಂದು ಬಿಟ್ಟಿದ್ದ. ಹೀಗಾಗಿ ಹೈಕೋರ್ಟ್ ಮುಂದೆ ಎಡಕ್ಕೆ ಟರ್ನ್ ತೆಗೆದುಕೊಂಡು ಸರ್ವಿಸ್ ರಸ್ತೆಗೆ ಇಳಿದ ಚಾಲಕ ಬಳಿಕ ಈ ಅಂಡರ್‌ಪಾಸ್ ಮೂಲಕ ಆಚೆ ರಸ್ತೆ ಸೇರಲು ಪ್ರಯತ್ನಿಸಿದ್ದಾನೆ. ಇದನ್ನೂ ಓದಿ: ಉಡುಪಿ ಕಾಲೇಜಿನ ವೀಡಿಯೋ ಪ್ರಕರಣ- ಗುಜರಾತ್ FSLಗೆ ರವಾನೆ ಸಾಧ್ಯತೆ
Advertisement
ಈ ವೇಳೆ ರಸ್ತೆಯ ಮೇಲ್ಭಾಗ ಟ್ಯಾಂಕರ್‌ಗೆ ತಾಗಿದೆ. ಆ ಕ್ಷಣವೇ ಟ್ಯಾಂಕರ್ ಮೇಲ್ಭಾಗದಲ್ಲಿನ ವಾಲ್ವ್‌ಗೆ ಹಾನಿ ಆಗಿದೆ. ವಾಲ್ವ್ ಬಳಿಯಿಂದಲೇ ಗ್ಯಾಸ್ ಸೋರಿಕೆ (Gas Leak) ಶುರುವಾಗಿ ಬಿಟ್ಟಿದೆ. ಆ ಕ್ಷಣವೇ ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಬೇಲೂರು ಘಟಕದ ಅಗ್ನಿಶಾಮಕ ದಳದ ಸಿಬ್ಬಂದಿ ಕೇವಲ 10 ನಿಮಿಷದಲ್ಲಿ ಸ್ಥಳಕ್ಕೆ ಬಂದಿದ್ದಾರೆ.
ಸುಮಾರು 18 ಟನ್ ಸಾಮರ್ಥ್ಯದ ಗ್ಯಾಸ್ ಇದ್ದ ಕಾರಣಕ್ಕೆ ಬೇಗ ಖಾಲಿ ಮಾಡುವುದೇ ಸವಾಲಾಗಿತ್ತು. ಹೀಗಾಗಿ ನಿಧಾನವಾಗಿ ಅದೆಲ್ಲ ಗ್ಯಾಸ್ ಖಾಲಿ ಆಗೋವರೆಗೂ ಕಾದ ಎಲ್ಲರೂ, ಬೆಳಗ್ಗೆ 11ರ ಹೊತ್ತಿಗೆ ಸ್ವಲ್ಪ ಗ್ಯಾಸ್ ಖಾಲಿಯಾದಾಗ ಟ್ಯಾಂಕರ್ ಮೇಲ್ಭಾಗಕ್ಕೆ ತೆರಳಿ ವಾಲ್ವ್ ಸರಿಪಡಿಸಿದ್ದಾರೆ. ಉಳಿದ ಗ್ಯಾಸ್ ಅನ್ನು ಮತ್ತೊಂದು ಖಾಲಿ ಟ್ಯಾಂಕರ್‌ಗೆ ತುಂಬಿಸಿ, ಅಲ್ಲಿಂದ ತೆರವು ಮಾಡಿದ್ದಾರೆ.
ಇದೆಲ್ಲವೂ ಆಗೋ ಹೊತ್ತಿಗೆ ಸುಮಾರು 20 ಗಂಟೆಗಳು ಕಳೆದು ಹೋಗಿದ್ದವು. ಇಷ್ಟು ಸುದೀರ್ಘ ಅವಧಿ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಸದ್ಯ ರಸ್ತೆ ಸಂಚಾರವೂ ಸುಗಮವಾಗಿದೆ. ಸದ್ಯ ಚಾಲಕನ ಸಣ್ಣ ತಪ್ಪು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದರಿಂದ ಪ್ರಯಾಣಿಕರು ಹಾಗೂ ಸಾವಿರಾರು ಲಾರಿ ಚಾಲಕರು ಪರದಾಟ ನಡೆಸಿದ್ದಾರೆ. ಅಲ್ಲದೇ ಕೈಗಾರಿಕೆ ಬಂದ್ ಮಾಡುವ ಸ್ಥಿತಿಯೂ ಬಂದಿತ್ತು. ಸದ್ಯ ಎಲ್ಲ ಪ್ರಯತ್ನ ಸಫಲವಾಗಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ ಎನ್ನುವುದೇ ನೆಮ್ಮದಿಯ ವಿಷಯ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ
Web Stories