ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬರೋಬ್ಬರಿ 11 ತಿಂಗಳ ಬಳಿಕ ಇಂದು ಭೇಟಿಯಾಗಲಿದ್ದಾರೆ.
ಇಂದು ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಅವರನ್ನು ಸ್ವಾಗತಿಸಲು ಯಡಿಯೂರಪ್ಪ ಅವರೇ ಯಲಹಂಕಕ್ಕೆ ತೆರಳಿದ್ದಾರೆ. ಇದರಲ್ಲಿರುವ ವಿಶೇಷತೆ ಎಂದರೆ ಮೋದಿ ಅವರನ್ನು ಯಡಿಯೂರಪ್ಪ ಅವರು ಕಳೆದ ವರ್ಷ ಸಿಎಂ ಆಗಿದ್ದಾಗ ಜುಲೈ ತಿಂಗಳಲ್ಲಿ ಭೇಟಿ ಮಾಡಿದ್ದರು. ಆದರೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂದಿನಿಂದ 2 ದಿನ ಪ್ರಧಾನಿ ರಾಜ್ಯ ಪ್ರವಾಸ – 20 ಗಂಟೆಯಲ್ಲಿ 10 ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ
ಯಡಿಯೂರಪ್ಪ ಅವರು ಮೋದಿ ಅವರನ್ನು ಬರೋಬ್ಬರಿ 11 ತಿಂಗಳ ಬಳಿಕ ಭೇಟಿಯಾಗುತ್ತಿರುವ ಹಿನ್ನೆಲೆ ಬಹಳ ಉತ್ಸಾಹಕರಾಗಿದ್ದಾರೆ. ಈ ಹಿನ್ನೆಲೆ ಯಲಹಂಕಕ್ಕೆ ತೆರಳಿ ಮೋದಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ.