ನವದೆಹಲಿ: ಮುಂಬೈ ಮೂಲದ ಯುವತಿ ಶ್ರದ್ಧಾವಾಕರ್ ಹತ್ಯೆ ಪ್ರಕರಣದ (Shraddha Walker Murder Case) ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾ (Aftab Amin Poonawala) ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಸಾಕೇತ್ ಜಿಲ್ಲಾ ನ್ಯಾಯಲಯದ (Court) ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ (Court) ಮುಂದಿನ 14 ದಿನಗಳಿಗೆ ನ್ಯಾಯಂಗ ಬಂಧನವನ್ನು ವಿಸ್ತರಣೆ ಮಾಡಿತು. ಅಫ್ತಾಬ್ ಬುದ್ಧಿವಂತ ಯುವಕನಾಗಿದ್ದು ತನಿಖೆಯಲ್ಲಿ ಪೊಲೀಸರು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ. ಆಗಾಗ್ಗೆ ಹೇಳಿಕೆ ಬದಲಿಸುತ್ತಾನೆ ಮತ್ತು ಹೊಸ ಮಾಹಿತಿಯನ್ನು ನೀಡುತ್ತಿದ್ದಾನೆ ಇವುಗಳ ಆಧಾರದ ಮೇಲೆ ತನಿಖೆ ನಡೆಸಬೇಕಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಹತ್ಯೆ ಮರು ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಜೈಲಿನಲ್ಲಿ ಇಬ್ಬರು ಕೈದಿಗಳ ಜೊತೆಗೆ ಅಫ್ತಾಬ್ ಇದ್ದು ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಮಂಪರು ಪರೀಕ್ಷೆ ಮತ್ತು ಫಾಲಿಗ್ರಾಫ್ ಪರೀಕ್ಷೆ ಅಂತ್ಯವಾಗಿದ್ದು, ಅದನ್ನು ಆಧರಿಸಿ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ. ತನಿಖೆಯ ದೃಷ್ಟಿಯಿಂದ ಅಫ್ತಾಬ್ ಅವಶ್ಯಕತೆ ಇದೆ ಎಂದು ದೆಹಲಿ ಪೊಲೀಸರ ಪರ ವಕೀಲರು ವಾದ ಮಂಡಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್ – ನಾನು ಸಿಎಂ ಆಗ್ಬೋದು ಅಂದ ಪ್ರತಿಭಾ ಸಿಂಗ್
ಅಫ್ತಾಬ್ ಅಮಿನ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾವಾಕರ್ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿ ಪೀಸ್ ಪೀಸ್ ಮಾಡಿ ದೆಹಲಿಯ ಕಾಡಿನಲ್ಲಿ ಎಸೆದಿದ್ದ, ಶ್ರದ್ಧಾ ಪೋಷಕರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರಿಗೆ ಅಫ್ತಾಬ್ ಭೀಕರವಾಗಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು.