-ನಾವೆಲ್ಲರೂ ಒಂದೇ, ಧರ್ಮ-ಕೋಮಿಗೊಂದು ಕಾನೂನು ಏಕೆ?
ಚಿಕ್ಕಮಗಳೂರು: ಸಿಟಿ ರವಿಗೆ (CT Ravi) ಟ್ರೀಟ್ಮೆಂಟ್ ಕೊಡಬೇಕು ಅಂತ ಹೇಳಿರೋ ಡಿಕೆಶಿ (DK Shivakumar) ಯಾವ ರೀತಿಯ ಟ್ರೀಟ್ಮೆಂಟ್ ಕೊಡುತ್ತಾರೆ, ಕೊತ್ವಾಲ್ ರಾಮಚಂದ್ರನ ರೀತಿಯ ಟ್ರೀಟ್ಮೆಂಟಾ ಎಂದು ಭಯವಾಗಿದೆ. ಸಿಎಂಗೆ ರಕ್ಷಣೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಡಿಕೆಶಿ ವಿರುದ್ಧ ಸಿ.ಟಿ.ರವಿ ಹರಿಹಾಯ್ದಿದ್ದಾರೆ.
Advertisement
ಚಿಕ್ಕಮಗಳೂರಿನ (Chikkamagaluru) ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮಾತನಾಡಿದ ಅವರು, ಡಿಕೆಶಿಗೆ ಅಧಿಕಾರದ ಅಹಂ ಭಾವದಲ್ಲಿ ಎಲ್ಲರಿಗೂ ಟ್ರೀಟ್ಮೆಂಟ್ ಕೊಡುವಂತಹ ಹುಮ್ಮಸ್ಸು ಬಂದಿರಬಹುದು. ನಾನು ಸಂಘದ ಸ್ವಂಯಂ ಸೇವಕ. ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್ಮೆಂಟ್ ಕೊಡುತ್ತಾರೆ. ಅವರದ್ದು ಕೊತ್ವಾಲ್ ಮಾದರಿಯ ಟ್ರೀಟ್ಮೆಂಟಾ ಎಂದು ನನಗೆ ಭಯವಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷರಾಗಿ ಪ್ರೋ.ರಾಜೀವ್ ಗೌಡ ನೇಮಕ
Advertisement
Advertisement
ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಅವರು ನಮ್ಮ ದೇಶದ ಅತೀ ಶ್ರೀಮಂತ ಶಾಸಕ. ಅವರ ಕೈಯಲ್ಲಿ ಬೆಂಗಳೂರಿನ ಉಸ್ತುವಾರಿ, ಬೆಂಗಳೂರು ಅಭಿವೃದ್ಧಿ, ನೀರಾವರಿ ಎಲ್ಲಾ ಇಲಾಖೆಗಳಿವೆ. ನಾನು ಸೋತಿರುವವನು. ನನ್ನ ಟಾರ್ಗೆಟ್ ಮಾಡಿ ಅವರು ಸಿಎಂ ಆಗಲು ಸಾಧ್ಯವಿಲ್ಲ. ಅವರು ಟಾರ್ಗೆಟ್ ಮಾಡಲಿಕ್ಕೆ ಬೇರೆಯವರಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ರಾಯಚೂರಿಗೆ ಏಮ್ಸ್ ತರಲು ಸರ್ಕಾರ ಪ್ರಯತ್ನಿಸುತ್ತಿದೆ: ಡಾ.ಶರಣ ಪ್ರಕಾಶ್ ಪಾಟೀಲ್
Advertisement
ಸರ್ಕಾರ ಬಿದ್ದರೂ ಬೀಳಬಹುದು:
ನನಗಿರುವ ಮಾಹಿತಿ ಪ್ರಕಾರ ಗ್ರಾ.ಪಂ ಮಟ್ಟದಲ್ಲಿ ನಡೆಯುವ ಅಧಿಕಾರ ಹಂಚಿಕೆ ಮಾದರಿಯಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ತೀರ್ಮಾನವೂ ಆಗಿದೆ. ಸಚಿವ ಮುನಿಯಪ್ಪ ಅವರೇ ಇದನ್ನು ಹೇಳಿದ್ದಾರೆ ಎಂದರೆ ಏನೋ ಒಳ ಒಪ್ಪಂದ ನಡೆದಿರಬೇಕು. ಏನೆಂದು ನನಗೆ ಗೊತ್ತಿಲ್ಲ. ಅಸಹನೆಯ ಆಕ್ರೋಶಕ್ಕೆ ತುತ್ತಾಗಿ ಸರ್ಕಾರ ಲೋಕಸಭೆ ಚುನಾವಣೆ ಆಸು-ಪಾಸಿಗೆ ಬಿದ್ದರೂ ಬೀಳ ಬಹುದು. ಈ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ. ಆದರೆ ಬಸನಗೌಡ ಯತ್ನಾಳರಿಗೆ (Basanagouda Patil Yatnal) ಈ ಬಗ್ಗೆ ನಿಖರ ಮಾಹಿತಿ ಇರಬಹುದು. ಅದಕ್ಕೆ ಅವರು ಇದನ್ನು ಹೇಳಿರಬಹುದು ಎಂದರು. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ
ಒಂದು ಸರ್ಕಾರಕ್ಕೆ ಒಂದೆರೆಡು ತಿಂಗಳಲ್ಲಿ ಜನಾಕ್ರೋಶ ನಿರ್ಮಾಣವಾಗುವುದಿಲ್ಲ. ಈಗಲೇ ಹಳ್ಳಿಗಳಲ್ಲಿ ಪವರ್ ಕಟ್ ಆರಂಭವಾಗಿದೆ. ಉಚಿತ ವಿದ್ಯುತ್ ಜೊತೆಗೆ ಪವರ್ ಕಟ್ ಕೊಡುಗೆಯನ್ನೂ ಕೊಡುತ್ತಿದ್ದಾರೆ. ಮಳೆಗಾಲದಲ್ಲಿ ಯಾವ ಕಾಲದಲ್ಲೂ ಪವರ್ ಕಟ್ ಆಗುತ್ತಿರಲಿಲ್ಲ. ಜನರಿಗೆ ಅಸಹನೆ ನಿರ್ಮಾಣವಾಗುತ್ತಿದೆ. ಅದರ ಆಕ್ರೋಶ ಎಂತಹ ಬಲಾಢ್ಯರನ್ನೂ ಬಲಿ ತೆಗೆದುಕೊಳ್ಳುತ್ತದೆ. ಈ ಸರ್ಕಾರ ಬಂದು 3 ತಿಂಗಳು ಪೂರ್ಣವಾಗಿಲ್ಲ. ಅದಕ್ಕೆ ಮುಂಚೆಯೇ 30 ಜನ ಶಾಸಕರು ಆಕ್ರೋಶವ್ಯಕ್ತಪಡಿಸಿ ನಾವು ಕೊಡುವ ಪತ್ರಕ್ಕೆ ಬೆಲೆ ಇಲ್ಲ. ದಲ್ಲಾಳಿಗಳ ಮೂಲಕ ಕೆಲಸ ಆಗುತ್ತಿದೆ ಎಂದು ಪತ್ರ ಬರೆದಿರಬಹುದು. ಬಸವರಾಜ ರಾಯರೆಡ್ಡಿ (Basavaraj Rayareddy) ಅವರು ಕರಪ್ಟ್ ಬ್ರಾಂಡ್ ಕರ್ನಾಟಕ ಎಂದು ಗುರುತಿಸಿಕೊಳ್ಳುತ್ತಿರುವ ಬಗ್ಗೆ ತಮ್ಮ ಅಸಹನೆ ಹೊರಹಾಕಿದ್ದು ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ಕೊಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಉರ್ದು ಶಾಲೆಯಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ – ರಾಷ್ಟ್ರ ಪ್ರೇಮಿಗಳ ಆಕ್ರೋಶ
ಧರ್ಮ-ಕೋಮಿಗೆ ಒಂದೊಂದು ಕಾನೂನು ಏಕೆ?
ನಾವು ಜಾತ್ಯತೀತರು. ಎಲ್ಲರೂ ಸಮಾನರು ಎಂದು ಹೇಳುತ್ತೇವೆ. ಸಂವಿಧಾನದ ಮೂಲ ಪೀಠಿಕೆಯಲ್ಲಿ ಸಮಾನತೆಯ ಪ್ರಸ್ತಾಪವಿದೆ. ಕಾನೂನು ಏಕೆ ಮತಕ್ಕೊಂದು, ಕೋಮಿಗೊಂದು ಇರಬೇಕು? ಏಕೆ ಸಮಾನ ಇರಬಾರದು ಎಂದು ಪ್ರಶ್ನೆ ಮಾಡಿದರು. ಓಲೈಕೆಯ ರಾಜನೀತಿಗೆ ಕಡಿವಾಣ ಬೀಳಬೇಕು. ಈ ನಿಟ್ಟಿನಲ್ಲಿ ಸಮಾನ ನಾಗರಿಕ ಸಂಹಿತೆ ಕಾಯ್ದೆ ಬರಬೇಕು. ಸಂವಿಧಾನ ಕೂಡ ದೇಶದ ಎಲ್ಲರೂ ಸಮಾನರೂ ಎಂಬ ಆಶಯವನ್ನು ಎತ್ತಿ ಹಿಡಿದಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಸಮಾನ ನಾಗರಿಕ ಸಂಹಿತೆ ಬರಬೇಕೆಂಬ ಆಶಯವನ್ನು ಹೊರಹಾಕಿದರು. ಇದನ್ನೂ ಓದಿ: ಮೂಲ ಸೌಕರ್ಯ ಕೊರತೆ – ಸಚಿವ ಕೆ.ವೆಂಕಟೇಶ್‌ಗೆ ರೈತರಿಂದ ಫುಲ್ ಕ್ಲಾಸ್
ಸಮಾನ ನಾಗರಿಕ ಸಂಹಿತೆ ಸಂವಿಧಾನದಲ್ಲಿ ಉಲ್ಲೇಖವಾಗಿದ್ದು, 3ರಿಂದ 4 ಬಾರಿ ಸುಪ್ರೀಂಕೋರ್ಟ್ ಕೂಡ ನಾಗರಿಕ ಸಂಹಿತೆ ಅನುಷ್ಠಾನದತ್ತ ಹೆಜ್ಜೆ ಹಾಕಬೇಕೆಂದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಸ್ವಯಂ ಮಾತನಾಡಿದ ನಂತರ ಚರ್ಚೆಯ ವಿಷಯವಾಗಿದೆ ಎಂದರು. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿಯ ಎಡವಟ್ಟು – ಧ್ವಜಾರೋಹಣ ವೇಳೆ ಅಂಬೇಡ್ಕರ್ ಫೋಟೋ ಇಡದ್ದಕ್ಕೆ ಆಕ್ರೋಶ
Web Stories