ಪುಣೆ: ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಇಂಗ್ಲೆಂಡ್, ಪಾಕಿಸ್ತಾನವನ್ನು ಸೋಲಿಸಿದ್ದ ಅಫ್ಘಾನಿಸ್ತಾನ (Afghanistan) ಈಗ ಶ್ರೀಲಂಕಾಕ್ಕೂ (Sri Lanka) ಶಾಕ್ ನೀಡಿದೆ. ಲಂಕಾ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಅಫ್ಘಾನ್ ಈಗ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಸೋತು ಬ್ಯಾಟ್ ಆರಂಭಿಸಿದ ಶ್ರೀಲಂಕಾ 49.3 ಓವರ್‌ಗಳಲ್ಲಿ 241 ರನ್‌ಗಳಿಗೆ ಸರ್ವಪತನ ಕಂಡಿತು. 242 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ 45.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 242 ರನ್ ಹೊಡೆಯುವ ಮೂಲಕ ಟೂರ್ನಿಯಲ್ಲಿ ಮೂರನೇ ಜಯ ಸಾಧಿಸಿತು. ಈ ಮೂಲಕ ಸೆಮಿಫೈನಲ್ ಪ್ರವೇಶವನ್ನು ಜೀವಂತವಾಗಿಟ್ಟುಕೊಂಡಿದೆ.
Advertisement
Advertisement
ಅಫ್ಘಾನ್ ತಂಡ ಖಾತೆ ತೆರೆಯವ ಮುನ್ನವೇ ರಹಮಾನುಲ್ಲಾ ಗುರ್ಬಾಜ್ ಔಟಾದರು. ಮೊದಲ ಓವರ್‌ನಲ್ಲಿ ಶಾಕ್ ಸಿಕ್ಕಿದರೂ ನಂತರ ಇಬ್ರಾಹಿಂ ಜದ್ರಾನ್ ಮತ್ತು ರಹಮತ್ ಶಾ ಎರಡನೇ ವಿಕೆಟಿಗೆ 73 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.
Advertisement
ಇಬ್ರಾಹಿಂ ಜದ್ರಾನ್ 39 ರನ್ (57 ಎಸೆತ, 4 ಬೌಂಡರಿ, 1 ಸಿಕ್ಸರ್), ರಹಮತ್ ಶಾ 62 ರನ್ (74 ಎಸೆತ, 7 ಬೌಂಡರಿ) ಹೊಡೆದು ಔಟಾದರು. ಮುರಿಯದ 4ನೇ ವಿಕೆಟಿಗೆ ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ 104 ಎಸೆತಗಳಲ್ಲಿ 111 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಹಶ್ಮತುಲ್ಲಾ ಶಾಹಿದಿ 58 ರನ್ (74 ಎಸೆತ, 2 ಬೌಂಡರಿ, 1 ಸಿಕ್ಸರ್), ಅಜ್ಮತುಲ್ಲಾ 73 ರನ್ (63 ಎಸೆತ, 6 ಬೌಂಡರಿ, 3 ಸಿಕ್ಸರ್) ಹೊಡೆದರು.
Advertisement
— Afghanistan Cricket Board (@ACBofficials) October 30, 2023
ಲಂಕಾ ಪರ ಪಾತುಂ ನಿಸ್ಸಾಂಕ 46 ರನ್ (60 ಎಸೆತ, 5 ಬೌಂಡರಿ), ನಾಯಕ ಕುಸಲ್ ಮೆಂಡಿಸ್ 39 ರನ್ (50 ಎಸೆತ, 3 ಬೌಂಡರಿ), ಸಮರವಿಕ್ರಮ 36 ರನ್(40 ಎಸೆತ, 3 ಬೌಂಡರಿ) ಹೊಡೆದರೆ ಕೊನೆಯಲ್ಲಿ ಮಹೇಶ್ ತಿಕ್ಷಣ 29 ರನ್(31 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆಯುವ ಮೂಲಕ ಲಂಕದ ಸ್ಕೋರ್ 240 ರನ್‌ಗಳ ಗಡಿಯನ್ನು ದಾಟಿತ್ತು. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಪಾಕ್ ಕಳಪೆ ಪ್ರದರ್ಶನ – ಮೊದಲನೇಯ ದೊಡ್ಡ ವಿಕೆಟ್ ಪತನ
ಫಜಲ್ಹಕ್ ಫಾರೂಕಿ 4 ವಿಕೆಟ್, ಮುಜಿಬ್ ಉರ್ ರಹಮಾನ್ 2 ವಿಕೆಟ್ ಕಿತ್ತರೆ, ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಕಿತ್ತರು.
ಸೆಮಿಫೈನಲ್ ಪ್ರವೇಶಿಸುತ್ತಾ?
ಅಫ್ಘಾನಿಸ್ತಾನಕ್ಕೆ ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು ಮೂರು ಪಂದ್ಯವನ್ನು ಉತ್ತಮ ನೆಟ್ ರನ್ ರೇಟ್‌ನೊಂದಿಗೆ ಗೆದ್ದರೆ ಸೆಮಿಫೈನಲ್ (Semi Final) ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಒಂದು ಪಂದ್ಯ ಸೋತರೂ ಬೇರೆ ತಂಡಗಳ ಫಲಿತಾಂಶದ ಮೇಲೆ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ. ಆಸ್ಟ್ರೇಲಿಯಾ ನ್ಯೂಜಿಲೆಂಡ್‌ಗಳಿಗೂ ಮೂರು ಪಂದ್ಯಗಳಿವೆ. ಈ ಪೈಕಿ ಆಸ್ಟ್ರೇಲಿಯಾ ನೆಟ್ ರನ್ ರೇಟ್ ಕಡಿಮೆ ಇದೆ.
ನ.3 ರಂದು ನೆದರ್‌ಲ್ಯಾಂರ್ಡ್ಸ್, ನ.7 ರಂದು ಆಸ್ಟ್ರೇಲಿಯಾ, ನ.10 ರಂದು ದಕ್ಷಿಣ ಆಫ್ರಿಕಾದ ವಿರುದ್ಧ ಅಫ್ಘಾನಿಸ್ತಾನ ಪಂದ್ಯ ಆಡಲಿದೆ.
Web Stories