ಕಾಬೂಲ್: ತಾಲಿಬಾನ್ ತೆಕ್ಕೆಯಲ್ಲಿರುವ ಅಫ್ಘಾನಿಸ್ತಾನದಲ್ಲಿ ಇನ್ನೂ 450 ಭಾರತೀಯರು ಸಿಲುಕಿಕೊಂಡಿದ್ದು, ಅವರನ್ನು ಭಾರತಕ್ಕೆ ವಾಪಸ್ ಕರೆತರುವುದೇ ಈಗ ಸರ್ಕಾರಕ್ಕೆ ಸವಾಲಾಗಿದೆ. ಅಮೆರಿಕ ಮತ್ತು ಇತರೆ ರಾಯಭಾರ ಕಚೇರಿಗಳ ಮೂಲಕ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ.
Advertisement
ಕಾಬೂಲ್ ಏರ್‌ಪೋರ್ಟ್ ಅಮೆರಿಕ ಸೈನಿಕರ ನಿಯಂತ್ರಣದಲಿದ್ರೂ ಏರ್‌ಪೋರ್ಟ್ ಹೊರಗಿನ ಭದ್ರತೆ ಅಮೆರಿಕ ಸೈನಿಕರ ಕೈಯಲ್ಲಿ ಇಲ್ಲ. ಹೀಗಾಗಿ ಭಾರತೀಯರನ್ನು ಏರ್‌ಪೋರ್ಟಿಗೆ ಕರೆತರಲು ಸಾಧ್ಯವಾಗ್ತಿಲ್ಲ. ಪ್ರತಿ ಚೆಕ್‍ಪೋಸ್ಟ್ ಗಳಲ್ಲೂ ಬಂದೂಕುಧಾರಿ ತಾಲಿಬಾನಿಗಳು ತಪಾಸಣೆ ಮಾಡಿ, ಏರ್‌ಪೋರ್ಟ್‌ಗೆ ಬಿಡದೇ ಹಾಗೆಯೇ ವಾಪಸ್ ಕಳಿಸ್ತಿದ್ದಾರೆ. ಹೀಗಾಗಿ ತಾಲಿಬಾನಿಗಳ ಅಧಿಕೃತ ಒಪ್ಪಿಗೆ ಸಿಗದ ಹೊರತು ಮನೆಯಿಂದ ಹೊರಬೀಳದಿರಲು ಕಾಬೂಲ್‍ನಲ್ಲಿರುವ ಭಾರತೀಯರು ನಿರ್ಧರಿಸಿದ್ದಾರೆ. ಹೀಗೆ ಕಾಯ್ತಾ ಇರೋರಲ್ಲಿ 20ರಿಂದ 30 ಮಂದಿ ಕನ್ನಡಿಗರು ಇದ್ದಾರೆ ಎನ್ನಲಾಗಿದ್ದು, ಈ ಪೈಕಿ ಏಳು ಮಂದಿಯ ವಿವರಗಳು ಲಭ್ಯ ಆಗಿವೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಾಕ್ಷಸಿ ಆಡಳಿತ – ರಸ್ತೆ ರಸ್ತೆಗಳಲ್ಲಿ ಕ್ರೌರ್ಯ, ವಿರೋಧಿಗಳ ಸಂಹಾರ
Advertisement
Advertisement
ಪಬ್ಲಿಕ್ ಟಿವಿ ಜೊತೆ ಕಾಬೂಲ್ ಏರ್‌ಪೋರ್ಟ್ ಹೊರಭಾಗದಿಂದ ಮಾತನಾಡಿದ ತೀರ್ಥಹಳ್ಳಿ ಮೂಲದ ಫಾದರ್ ರಾಬರ್ಟ್ ರೊಡ್ರಿಗೇಸ್, ತಾವು ಎದುರಿಸ್ತಿರುವ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಪಾಕಿಸ್ತಾನದವರನ್ನು ಬಿಟ್ಟು ಕಳಿಸ್ತಿದ್ದಾರೆ. ಆದ್ರೆ ಭಾರತೀಯರನ್ನು ವಾಪಸ್ ಕಳಿಸಲು ತಾಲಿಬಾನಿಗಳು ಸುಲಭಕ್ಕೆ ಒಪ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ತಾಲಿಬಾನಿಗಳ ಜೊತೆ ಸಂಪರ್ಕ ಸಾಧಿಸಿ ಭಾರತೀಯರನ್ನು ಕರೆತರಲು ಮೋದಿ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸ್ತಿದೆ. ನಾಳೆಯೊಳಗೆ ಎಲ್ಲರನ್ನು ಏರ್‌ಲಿಫ್ಟ್ ಮಾಡುವ ಸಂಭವ ಇದೆ. ಇದನ್ನೂ ಓದಿ: ದೆಹಲಿಯ ಆಸ್ಪತ್ರೆಗಳ ಮೇಲೆ ಅಫ್ಘಾನಿಸ್ತಾನ ಅವಲಂಬಿತವಾಗಿದೆ: ಪರಿಸ್ಥಿತಿ ಬಿಚ್ಚಿಟ್ಟ ಜಾನ್
Advertisement
ಕಾಬೂಲ್‍ನಲ್ಲಿ ಕನ್ನಡಿಗರು ಅತಂತ್ರ..!
* ರಾಬರ್ಟ್ ರೊಡ್ರಿಗೇಸ್, ತೀರ್ಥಹಳ್ಳಿ
* ಸಿಸ್ಟರ್ ಥೆರೆಸಾ ಕ್ರಾಸ್ಟಾ, ಮಂಗಳೂರು
* ಹಿರೇಖ್ ದೇವ್‍ನಾಥ್, ಮಾರತ್‍ಹಳ್ಳಿ, ಬೆಂಗಳೂರು
* ತನ್ವೀರ್, ಬಳ್ಳಾರಿ
* ಅಶ್ವಥಿ, ಬೆಂಗಳೂರು
* ವಿನ್ಸೆಂಟ್, ಮಂಗಳೂರು
* ಫಾ. ಜೆರೋಮ್ ಸಿಕ್ವೇರಾ, ಸಿದ್ದನಕಟ್ಟೆ, ದಕ್ಷಿಣ ಕನ್ನಡ
ಇತ್ತ ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಪೆ ಮೂಲದ ಜಾನ್ ಸ್ವಗ್ರಾಮಕ್ಕೆ ಮರಳಿದ್ದಾರೆ. ಜಾನ್ ವಿಮಾನದಲ್ಲಿ ಕುಳಿತ ಒಂದು ಗಂಟೆಯೊಳಗೆ ತಾಲಿಬಾನ್ ಉಗ್ರರು ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದರು. ಈ ಮೂಲಕ ಇಡೀ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ರು. ಒಂದು ವೇಳೆ, ಒಂದು ಗಂಟೆ ತಡವಾಗಿದ್ದಲ್ಲಿ ಜಾನ್‍ಗೆ ಮಲ್ಪೆಗೆ ಬರಲು ಸಾಧ್ಯ ಆಗ್ತಿರಲಿಲ್ಲ. ಈಗಲೂ ಅಲ್ಲಿ ಪ್ರಾಣಭಯದೊಂದಿಗೆ ಒದ್ದಾಡಬೇಕಿತ್ತು. ಆ ದೇವರೇ ನನ್ನನ್ನು ಕರೆಸಿಕೊಂಡರು ಎಂದು ಜಾನ್ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಜಾನ್ ಸುರಕ್ಷಿತವಾಗಿ ವಾಪಸ್ ಆಗಿದ್ದಕ್ಕೆ ಕುಟುಂಬಸ್ಥರು ಖುಷಿಯಾಗಿದ್ದಾರೆ.