ಕಾಬೂಲ್: ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 8 ಜನ ಮೃತಪಟ್ಟಿರುವ ಘಟನೆ ಅಫ್ಘಾನಿಸ್ತಾನದ ಪೂರ್ವ ನಂಗರ್ ಹಾರ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪವಿತ್ರ ರಮ್ಜಾನ್ ತಿಂಗಳ ನಿಮಿತ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ದುಷ್ಕರ್ಮಿಗಳು ಸರಣಿ ಬಾಂಬ್ ಸ್ಪೋಟ ನಡೆಸಿದ್ದಾರೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಸುಮಾರು 45ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ನಗರ್ ಹಾರ್ ಪ್ರಾಂತೀಯ ರಾಜ್ಯಪಾಲರ ವಕ್ತಾರ ಅತ್ತಹುಲ್ಲಾ ಖೋಗ್ಯಾನಿ ಮಾಹಿತಿ ನೀಡಿದ್ದಾರೆ.
Advertisement
#AfghanistanBlasts: The blasts occurred at a football stadium in the city that was hosting a cricket match at the start of the holy month of Ramzan, Sohrab Qaderi, a member of the provincial council saidhttps://t.co/KcWh4Uj3ZD
— Firstpost (@firstpost) May 19, 2018
Advertisement
ಬಾಂಬ್ ಸ್ಪೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಪೂರ್ವ ಅಫ್ಘಾನಿಸ್ಥಾನ ಭಾಗದಲ್ಲಿ ತಾಲಿಬಾನ್ ಹಾಗೂ ಐಸಿಸ್ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಹೀಗಾಗಿ ಅವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಖೋಗ್ಯಾನಿ ತಿಳಿಸಿದ್ದಾರೆ.