ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಸಂಭವಿಸಿದ ಪ್ರಬಲ ಭೂಕಂಪದಿಂದ (Earthquake) ಸಾವನ್ನಪ್ಪಿದವರ ಸಂಖ್ಯೆ 2060ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಭೂಕಂಪದಿಂದ ಸುಮಾರು 12 ಗ್ರಾಮಗಳು ನಾಶವಾಗಿವೆ. ಅಲ್ಲಿನ ಸಾವಿರಾರು ಮನೆಗಳು ನೆಲಸಮವಾಗಿವೆ. ನೂರಾರು ಜನ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗೆ ಸತತ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಭೂಕಂಪದ ಕೇಂದ್ರ ಬಿಂದು ಹೆರಾತ್ ನಗರದ ವಾಯುವ್ಯಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (United States Geological Survey) ಹೇಳಿದೆ. ನಗರದಲ್ಲಿ ಕನಿಷ್ಠ ಐದು ಪ್ರಬಲ ಕಂಪನಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ. ಅಲ್ಲದೇ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್
Advertisement
Advertisement
ಹೆರಾತ್‍ನಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿದ್ದು, ಇದರಿಂದ ಭೂಕಂಪ ಪೀಡಿತ ಪ್ರದೇಶಗಳಿಂದ ವಿವರಗಳನ್ನು ಪಡೆಯುವುದು ಕಷ್ಟವಾಗಿದೆ. ಇದರಿಂದಾಗಿಯೂ ಸಹ ಪರಿಹಾರ ಕಾರ್ಯದಲ್ಲಿ ವಿಳಂಬವಾಗುತ್ತಿದೆ. ಇದರ ನಡುವೆಯೂ ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
ಅಫ್ಘಾನಿಸ್ತಾನದ ಸರ್ಕಾರ ಅಲ್ಲಿನ ಶ್ರೀಮಂತರು, ಹಾನಿಗೊಳಗಾದ ಜನರ ನೆರವಿಗೆ ಕೈಜೋಡಿಸಬೇಕು ಎಂದು ಕೇಳಿಕೊಂಡಿದೆ. ಇದನ್ನೂ ಓದಿ: ಮನ್‌ಮುಲ್ ಮೆಗಾ ಡೈರಿ ಘಟಕದಲ್ಲಿ ಅಗ್ನಿ ಅವಘಡ
Web Stories