ಕಾಬೂಲ್: ವಿವಾಹಿತ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳು (Woman) ಓಡಿ ಹೋಗಿದ್ದಕ್ಕೆ ಅಫ್ಘಾನಿಸ್ತಾನದ (Afghanistan) ತಾಲಿಬಾನ್ (Taliban) ಸರ್ಕಾರ ಮಹಿಳೆಗೆ ಸಾರ್ವಜನಿಕವಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ವಿಧಿಸಿತ್ತು. ಆದರೆ ಮಹಿಳೆ ಆ ಶಿಕ್ಷೆಯಿಂದ ಅವಮಾನವನ್ನು ಎದುರಿಸುವ ಬದಲು ತಾನೇ ನೇಣಿಗೆ ಶರಣಾಗಿದ್ದಾಳೆ.
ಘಟನೆ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ನಡೆದಿದ್ದು, ಸ್ಥಳೀಯವಾಗಿ ಯಾವುದೇ ಮಹಿಳಾ ಕಾರಾಗೃಹ (Women’s Prison) ಇಲ್ಲ ಎಂಬ ಕಾರಣಕ್ಕೆ ವಿವಾಹಿತ ಪುರುಷನೊಂದಿಗೆ ಓಡಿ ಹೋಗಿದ್ದ ಮಹಿಳೆಗೆ ಸಾರ್ವಜನಿಕವಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆಯನ್ನು ತಾಲಿಬಾನ್ ಸರ್ಕಾರ ವಿಧಿಸಿತ್ತು.
Advertisement
Advertisement
ಮಹಿಳೆಯೊಂದಿಗೆ ಮನೆಯಿಂದ ಓಡಿ ಹೋಗಿದ್ದ ವಿವಾಹಿತ ವ್ಯಕ್ತಿಯನ್ನು ಕಳೆದ ಗುರುವಾರವೇ ಗಲ್ಲಿಗೇರಿಸಲಾಗಿತ್ತು. ಬಳಿಕ ಮಹಿಳೆಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ವಿಧಿಸಿದ್ದರಿಂದ ಆಕೆ ಅವಮಾನವನ್ನು ಎದುರಿಸಲು ಹಿಂದೇಟು ಹಾಕಿ, ತಾನೇ ತನ್ನ ಸ್ಕಾರ್ಫ್‌ನಿಂದ ಕುಣಿಕೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ನಾಯಿ ಸಾಕುವಂತಿಲ್ಲ – ಗಾಜಿಯಾಬಾದ್‌ನಲ್ಲಿ ಮೂರು ತಳಿಯ ನಾಯಿಗಳು ಬ್ಯಾನ್
Advertisement
Advertisement
ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿ ಮಹಿಳೆಯರ ಸ್ವಾತಂತ್ರ್ಯ ಮೊಟಕುಗೊಳ್ಳುತ್ತಲೇ ಬಂದಿದೆ. ಹೆಣ್ಣು ಮಕ್ಕಳು 6ನೇ ತರಗತಿಯ ಬಳಿಕ ವಿದ್ಯಾಭ್ಯಾಸ ಮಾಡುವುದನ್ನು ನಿಷೇಧಿಸಿದೆ. ಮಹಿಳೆಯರು ಹಾಗೂ ಹುಡುಗಿಯರು ಶಿಕ್ಷಣ, ಕೆಲಸ, ಸಾರ್ವಜನಿಕವಾಗಿ ಭಾಗವಹಿಸುವಿಕೆ, ಆರೋಗ್ಯದ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮ್ಯಾಜಿಕ್ ಫೀಲ್ಡಿಂಗ್, ಶಮಿ ಮಾರಕ ಬೌಲಿಂಗ್ – ಭಾರತಕ್ಕೆ 6 ರನ್‌ಗಳ ರೋಚಕ ಜಯ