ಲಕ್ನೋ: ಸಾಕು ನಾಯಿಗಳೇ (Pet Dog) ಜನರ ಮೇಲೆ ದಾಳಿ ನಡೆಸುವಂತಹ ಪ್ರಕರಣಗಳು ಹೆಚ್ಚುತ್ತಿದ್ದಂತೆ ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್ (Ghaziabad) ಆಡಳಿತ ತನ್ನ ನಿವಾಸಿಗಳಿಗೆ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ ಎಂದಿದೆ. ಮಾತ್ರವಲ್ಲದೇ ಆಕ್ರಮಣಕಾರಿ ಸ್ವಭಾವವುಳ್ಳ ಪಿಟ್‌ಬುಲ್ (Pitbull), ರಾಟ್‌ವೀಲರ್ (Rottweiler) ಹಾಗೂ ಡೋಗೊ ಅರ್ಜೆಂಟಿನೋ (Dogo Argentino) ತಳಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವುದನ್ನು ನಿಷೇಧಿಸಿದೆ.
ಸಾಕುಪ್ರಾಣಿ ಮಾಲೀಕರಿಗೆ ನವೆಂಬರ್ 1 ರಿಂದ ತಮ್ಮ ನಾಯಿಗಳಿಗೆ ಪರವಾನಗಿಯನ್ನು ನೀಡಲು ಪ್ರಾರಂಭಿಸಲಿದೆ. ಮಾಲೀಕರು 2 ತಿಂಗಳುಗಳೊಳಗೆ ತಮ್ಮ ನಾಯಿಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
Advertisement
Advertisement
ಬಹುಮಹಡಿ ಕಟ್ಟಡದ ನಿವಾಸಿಗಳು ತಮ್ಮ ಸಾಕು ಪ್ರಾಣಿಗಳನ್ನು ಹೊರಗೆ ಕರೆಗೊಯ್ಯುವ ಸಂದರ್ಭ ಲಿಫ್ಟ್‌ಗಳನ್ನು ಬಳಸಬೇಕಾಗುತ್ತದೆ. ಮಾತ್ರವಲ್ಲದೇ ತಮ್ಮ ಸಾಕು ನಾಯಿಗಳನ್ನು ಸಾರ್ವಜನಿಕ ಪ್ರದೇಶಗಳಿಗೆ ಕರೆದೊಯ್ಯುವಾಗ ಅವುಗಳಿಗೆ ಮೌತ್ ಗಾರ್ಡ್ ಅನ್ನು ಕಡ್ಡಾಯವಾಗಿ ಹಾಕಬೇಕು ಎಂದು ಆದೇಶಿಸಿದೆ. ಇದನ್ನೂ ಓದಿ: ಈ ಕ್ಷಣಕ್ಕೆ ನಾನು ಬಹಳ ದಿನದಿಂದ ಕಾಯುತ್ತಿದ್ದೆ: ಸೋನಿಯಾ ಗಾಂಧಿ
Advertisement
ಪಿಟ್‌ಬುಲ್, ರಾಟ್‌ವೀಲರ್ ಮತ್ತು ಡೊಗೊ ಅರ್ಜೆಂಟಿನೊ ತಳಿಗಳು ಉಗ್ರವಾದ ಸ್ವಭಾವ ಹೊಂದಿರುವುದಾಗಿದ್ದು, ಈ ನಾಯಿಗಳನ್ನು ಸಾಕಲು ಯಾವುದೇ ಅನುಮತಿ ಹಾಗೂ ಪರವಾನಗಿ ನೀಡಲಾಗುವುದಿಲ್ಲ. ಯಾರಾದರೂ ಈ ತಳಿಯ ನಾಯಿಗಳನ್ನು ಹೊಂದಿದ್ದರೆ ಅಥವಾ ಖರೀದಿಸಿದರೆ ಮುಂದೊದಗಬಹುದಾದ ಅಪಾಯಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ. ಈ ಎಲ್ಲಾ 3 ತಳಿಯ ನಾಯಿಗಳನ್ನು ಗಾಜಿಯಾಬಾದ್‌ನಲ್ಲಿ ನಿಷೇಧಿಸಲಾಗಿದೆ ಎಂದು ಬಿಜೆಪಿ ನಾಯಕ ಮತ್ತು ಜಿಎಂಸಿ ಕೌನ್ಸಿಲರ್ ಸಂಜಯ್ ಸಿಂಗ್ ತಿಳಿಸಿದರು.
Advertisement
ಕೆಲ ದಿನಗಳಿಂದ ಗಾಜಿಯಾಬಾದ್‌ನ ವಸತಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ನಾಯಿ ಕಚ್ಚುವಿಕೆಯ ಹಲವಾರು ಘಟನೆಗಳು ವರದಿಯಾಗಿದೆ. ಈ ಹಿನ್ನೆಲೆ ನಗರದ ಮುನ್ಸಿಪಲ್ ಕಾರ್ಪೊರೇಷನ್ ಸಾಕು ಪ್ರಾಣಿ ಮಾಲೀಕರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಮಳಲಿಯಲ್ಲಿರುವುದು ಮಂದಿರವೋ? ಮಸೀದಿಯೋ – ಇಂದು ತೀರ್ಪು ಪ್ರಕಟ ಸಾಧ್ಯತೆ