ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನ್‍ನಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಪೊಲೀಸ್ ಸಿಬ್ಬಂದಿ ಮರಳಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾಲಿಬಾನ್ ಕಮಾಂಡರ್ಗಳಿಂದ ನಮಗೆ ಕರೆ ಬಂದ ನಂತರ ಶನಿವಾರದಿಂದ ನಾವು ಕೆಲಸಕ್ಕೆ ಮರಳಿದ್ದೇವೆ. ಎರಡು ವಾರಗಳ ನಂತರ ನಾವು ಮತ್ತೆ ಕೆಲಸಕ್ಕೆ ಬಂದಿದ್ದೇವೆ. ನಿನ್ನೆ ಅದ್ಭುತವಾಗಿತ್ತು, ಮತ್ತೆ ಕೆಲಸಕ್ಕೆ ಬಂದಿರುವುದು ಖುಷಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ರೈಲಿನಲ್ಲಿ 15 ಕೆಜಿ ಹಸಿ ಗಾಂಜಾ ಪತ್ತೆ!
Advertisement
Advertisement
ಹಿಂದಿನ ಸರ್ಕಾರಕ್ಕಾಗಿ ಕೆಲಸ ಮಾಡಿದ ಪೊಲೀಸ್ ಮತ್ತು ಇತರ ಭದ್ರತಾ ಇಲಾಖೆಯಲ್ಲಿ ಕೆಲಸ ಮಾಡಿದವರನ್ನು ಕ್ಷಮಿಸಿದ್ದೇವೆ ಎಂದು ತಾಲಿಬಾನ್ ಹೇಳಿದೆ. ಇದನ್ನೂ ಓದಿ: ನಿವಾಸದಲ್ಲಿದ್ದ ಮರಗಳಿಗೆ ಕೊಡಲಿ – ಮಂಡ್ಯ ಎಸ್‍ಪಿಯಿಂದ ಸರ್ವಾಧಿಕಾರಿ ಧೋರಣೆ
Advertisement
ಅಮೆರಿಕ ಸೇನೆ ಕಾಬೂಲ್ ವಿಮಾನ ನಿಲ್ದಾಣವನ್ನು ತೊರೆದ ಬಳಿಕ ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಗೈರು ಹಾಜರಿ ಹಾಕಿದ್ದರು. ಈಗ ತಾಲಿಬಾನ್ ಕಮಾಂಡರ್ಗಳಿಂದ ಕರೆ ಬಂದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.