ಕಾಬೂಲ್: ಅಫ್ಘಾನಿಸ್ತಾನ ತೊರೆಯಲು ಬಯಸುವವರನ್ನು ಭಾರತಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅರಿಂದಮ್ ಬಾಗ್‍ಚಿ ಹೇಳಿದ್ದಾರೆ.
Advertisement
ಅಫ್ಘಾನಿಸ್ತಾನ ಆಡಳಿತವನ್ನು ತಾಲಿಬಾನ್ ಕೈವಶ ಮಾಡಿಕೊಂಡ ನಂತರ ದೇಶ ತೊರೆಯಲು ಹಾತೊರೆಯುತ್ತಿರುವ ಜನರು ವಿಮಾನ ನಿಲ್ದಾಣದಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ. ಅಫ್ಘಾನಿಸ್ತಾನ ತೊರೆಯಲು ಬಯಸುವವರನ್ನು ಭಾರತಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅರಿಂದಮ್ ಬಾಗ್‍ಚಿ ಹೇಳಿದ್ದಾರೆ. ಕಾಬೂಲ್‍ನಿಂದ ಭಾರತಕ್ಕೆ ವಾಣಿಜ್ಯ ವಿಮಾನ ಸಂಚಾರ ಮರುಸ್ಥಾಪನೆ ಆದ ಮೇಲೆ ಹಿಂದೂ ಮತ್ತು ಸಿಖ್ಖರಿಗೆ ಆದ್ಯತೆ ನೀಡಲಾಗುವುದು ಎಂದು ಭಾರತ ಸರ್ಕಾರ ಭರವಸೆ ನೀಡಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್
Advertisement
Sad scenes from Kabul airport. Thousands trying to board a plane with capacity of few hundreds. Future is uncertain with Taliban at gates of airport. US shud never to forgiven for this act. Pray for Afghanistan. #Talibanpic.twitter.com/Jk8D3Wo5Sw
— Netbuzz Africa (@netbuzzafrica) August 16, 2021
Advertisement
ಕಾಬೂಲ್ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗಳಿಗೆ ತೊಡಕು ಉಂಟಾಗಿದೆ. ಅಫ್ಘಾನಿಸ್ತಾನದಲ್ಲಿರುವ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಸ್ಥಿತಿಗತಿಯ ಬಗ್ಗೆ ಸತತವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ
Advertisement
ಕಾಬೂಲ್‍ನ ಪರಿಸ್ಥಿತಿ ದಿನದಿಂದ ಹದಗೆಡುತ್ತಿದೆ. ಅಫ್ಘಾನಿಸ್ತಾನದ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೇವೆ. ಭಾರತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ನಿರ್ವಹಿಸುತ್ತಿದ್ದ ಹಲವು ಯೋಜನೆಗಳಿಗಾಗಿ ಅಲ್ಲಿನ ಸ್ಥಳೀಯರು ನೆರವಾಗಿದ್ದಾರೆ. ನಾವು ಅವರಿಗೆ ನೆರವಾಗಲು ಬದ್ಧರಾಗಿದ್ದೇವೆ ಎಂದು ಬಾಗ್‍ಚಿ ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತ – ಅಫ್ಘನ್ ದೇಶವನ್ನುದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಭಾಷಣ