ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ (NewDelhi) ತನ್ನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚುವುದಾಗಿ ಅಫ್ಘಾನಿಸ್ತಾನ ಸರ್ಕಾರ (Afghanistan Government) ಹೇಳಿದೆ.
ಆತಿಥೇಯ ಸರ್ಕಾರದಿಂದ ಬೆಂಬಲದ ಕೊರತೆ ಮತ್ತು ಅಫ್ಘಾನಿಸ್ತಾನದ (Afghanistan) ಹಿತಾಸಕ್ತಿಗಳನ್ನು ಪೂರೈಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಬಿಟ್‌ಕಾಯಿನ್ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್ ಬ್ಲಾಸ್ಟ್ – ಬೆದರಿಕೆ
Advertisement
Advertisement
ನವದೆಹಲಿಯಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು (Afghanistan Embassy) ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವ ಈ ನಿರ್ಧಾರ ಪ್ರಕಟಿಸಲು ಆಳವಾದ ದುಃಖ, ವಿಷಾದ ಮತ್ತು ನಿರಾಶೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ರಾಯಭಾರ ಕಚೇರಿಯು ಆತಿಥೇಯ ಸರ್ಕಾರದಿಂದ ನಿರ್ಣಾಯಕ ಬೆಂಬಲದ ಗಮನಾರ್ಹ ಅನುಪಸ್ಥಿತಿಯನ್ನು ಅನುಭವಿಸಿದೆ ಇದು ನಮ್ಮ ಸಾಮರ್ಥ್ಯಕ್ಕೆ ಅಡ್ಡಿಯಾಗಿದೆ ಎಂದು ಹೇಳಿದೆ.
Advertisement
ಸಂಪನ್ಮೂಲಗಳು ಮತ್ತು ಅಧಿಕಾರದಲ್ಲಿನ ಮಿತಿಗಳ ಹೊರತಾಗಿಯೂ ಕಾಬೂಲ್‌ನಲ್ಲಿ ಕಾನೂನುಬದ್ಧ ಸರ್ಕಾರದ ಅನುಪಸ್ಥಿತಿಯಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡಿದೆ. ರಾಯಭಾರ ಕಚೇರಿಯ ಕಾರ್ಯಾಚರಣೆಯ ಅವಧಿಯುದ್ದಕ್ಕೂ ಬೆಂಬಲ ನೀಡಿದಕ್ಕಾಗಿ ಭಾರತದಲ್ಲಿರುವ ಅಫ್ಘಾನ್ ನಾಗರಿಕರಿಗೆ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ನೌಕಾಪಡೆ 8 ಮಾಜಿ ಸಿಬ್ಬಂದಿಯ ಮರಣದಂಡನೆಗೆ ವಿರೋಧ – ಭಾರತದ ಮನವಿ ಸ್ವೀಕರಿಸಿದ ಕತಾರ್
Advertisement
ಸೆಪ್ಟೆಂಬರ್ 30 ರಂದು ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ, ಅಕ್ಟೋಬರ್ 1 ರಂದು, ರಾಯಭಾರ ಕಚೇರಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ನವೆಂಬರ್ 23 ರಿಂದ ಜಾರಿಗೆ ಬರುವಂತೆ ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ನಡ್ವೆ ಇಂದಿನಿಂದ ಕದನ ವಿರಾಮ – 13 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಸಿದ್ಧತೆ