– ಜದ್ರಾನ್ ಸ್ಫೋಟಕ ಶತಕ, ಕೊನೆಯಲ್ಲಿ ಬೌಲರ್‌ಗಳ ಕಮಾಲ್
ಲಾಹೋರ್: ಇಬ್ರಾಹಿಂ ಜದ್ರಾನ್ ಅವರ ಸ್ಫೋಟಕ ಶತಕ, ಕೊನೆಯಲ್ಲಿ ಬೌಲರ್‌ಗಳ ಬಿಗಿಯಾದ ಬೌಲಿಂಗ್‌ನಿಂದ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ 8 ರನ್‌ಗಳ ರೋಚಕ ಜಯ ಸಾಧಿಸಿದೆ. ರೋಚಕ ಕಾದಾಟದಲ್ಲಿ ಸೋತ ಇಂಗ್ಲೆಂಡ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ನಿರ್ಗಮಿಸಿದೆ.
Advertisement
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 7 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಕೊನೆಯವರೆಗೂ ಜಯಗಳಿಸಲು ಹೋರಾಡಿತು. ಅಂತಿಮವಾಗಿ 49.5 ಓವರ್‌ಗಳಲ್ಲಿ 317 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಬೆಂಕಿ ಬ್ಯಾಟಿಂಗ್‌ಗೆ ದಾಖಲೆಗಳು ಭಗ್ನ – ಇತಿಹಾಸ ನಿರ್ಮಿಸಿದ ಇಬ್ರಾಹಿಂ ಜದ್ರಾನ್
Advertisement
Joe Root scores a vital 100* against Afghanistan, playing a crucial knock for England in a challenging situation 👏#ChampionsTrophyOnJioStar 👉 #AFGvENG | LIVE NOW on Star Sports 2 & Sports18-1
📺📱 Start Watching FREE on JioHotstar! pic.twitter.com/aVvLeFQ3yL
— Star Sports (@StarSportsIndia) February 26, 2025
Advertisement
ಬಿ ಗುಂಪಿನಲ್ಲಿ ಮೊದಲ ಜಯದೊಂದಿಗೆ ಅಫ್ಘಾನಿಸ್ತಾನ ಈಗ 2 ಅಂಕ ಸಂಪಾದಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಎರಡು ತಂಡಗಳಿಗೆ ಒಂದೊಂದು ಅಂಕವನ್ನು ನೀಡಲಾಗಿದೆ. ಹೀಗಾಗಿ ಈ ಎರಡು ತಂಡಗಳು 3 ಅಂಕ ಸಂಪಾದಿಸಿದ್ದರೂ ರನ್ ರೇಟ್ ಚೆನ್ನಾಗಿರುವ ಕಾರಣ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ.
Advertisement
ಮುಂದೆ ಆಫ್ಘಾನಿಸ್ತಾನ ಆಸ್ಟ್ರೇಲಿಯಾವನ್ನು ಎದುರಿಸಲಿದ್ದರೆ ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ವಿರುದ್ಧ ಆಡಲಿದೆ. ಹೀಗಾಗಿ ಮೂರು ತಂಡಗಳಿಗೆ ಜಯ ಮುಖ್ಯ. ಒಂದು ವೇಳೆ ಮುಂದೆ ನಡೆಯಲಿರುವ ಎರಡೂ ಪಂದ್ಯ ಮಳೆಯಿಂದ ರದ್ದಾದರೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಲಿದೆ ಅಫ್ಘಾನಿಸ್ತಾನದ ಕನಸು ಭಗ್ನವಾಗಲಿದೆ.
It’s a for Zadran! 🏏
Ibrahim Zadran brings up a crucial fifty in a must-win clash against England in his first #ChampionsTrophy! 🔥#ChampionsTrophyOnJioStar 👉 #AFGvENG | LIVE NOW on Star Sports 2 & Sports18-1!
📺📱 Start Watching FREE on JioHotstar! pic.twitter.com/GyQO2JfZwj
— Star Sports (@StarSportsIndia) February 26, 2025
ಆರಂಭದಲ್ಲೇ ಆಘಾತ: 30 ರನ್‌ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿದ್ದರೆ 133 ರನ್‌ಗಳಿಸುವಷ್ಟರಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಜೋ ರೂಟ್‌ಗೆ ನಾಯಕ ಜೋಸ್ ಬಟ್ಲರ್ ಸಾಥ್ ನೀಡಿದರು. ಇವರಿಬ್ಬರು 5ನೇ ವಿಕೆಟಿಗೆ 91 ಎಸೆತಗಳಲ್ಲಿ 83 ರನ್ ಜೊತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು.
ಜೋಸ್ ಬಟ್ಲರ್ 38 ರನ್ (42 ಎಸೆತ, 2 ಸಿಕ್ಸರ್) ಸಿಡಿಸಿ ಔಟಾದರೆ ತಂಡದ ಮೊತ್ತ 287 ರನ್ ಆದಾಗ 120 ರನ್ (111 ಎಸೆತ, 11 ಬೌಂಡರಿ, 1 ಸಿಕ್ಸ್) ಹೊಡೆದಿದ್ದ ಜೋ ರೂಟ್ ಕ್ಯಾಚ್ ನೀಡಿ ನಿರ್ಗಮಿಸಿದರು. ಜೋ ರೂಟ್ ಔಟಾದರೂ ಜೇಮೀ ಓವರ್ಟನ್ ಬ್ಯಾಟ್ ಬೀಸುತ್ತಿದ್ದರು.
A 💯 so brilliant that even the opponents are clapping for Ibra-HIM! 👏
And with that, #IbrahimZadran jumps to the 2nd spot, among players to score most ODI centuries for Afghanistan in ODIs (after #RahmanullahGurbaz)#ChampionsTrophyOnJioStar 👉 #AFGvENG | LIVE NOW on Star… pic.twitter.com/x5wE6dOUAW
— Star Sports (@StarSportsIndia) February 26, 2025
ಯಾವಾಗ ಜೇಮೀ ಓವರ್ಟನ್ 32 ರನ್(28 ಎಸೆತ, , 3 ಬೌಂಡರಿ) ಔಟಾದರೋ ಬೆನ್ನಲ್ಲೇ 14 ರನ್ ಗಳಿಸಿದ್ದ ಜೋಫ್ರಾ ಆರ್ಚರ್ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 317 ರನ್‌ಗಳಿಗೆ ಇಂಗ್ಲೆಂಡ್ ಸರ್ವಪತನ ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಆರಂಭಿಸಿದ್ದ ಆಫ್ಘಾನಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತ್ತು. 37 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 40 ರನ್(67 ಎಸೆತ), ಅಜ್ಮತುಲ್ಲಾ ಒಮರ್ಜಾಯ್ 41 ರನ್ (31 ಎಸೆತ, 1 ಬೌಂಡರಿ, 3 ಸಿಕ್ಸರ್), ಮೊಹಮ್ಮದ್ ನಬಿ 40 ರನ್ (24 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿದ ಪರಿಣಾಮ ತಂಡ 300 ರನ್‌ಗಳ ಗಡಿ ದಾಟಿತು. ಜದ್ರಾನ್ ಮತ್ತು ನಬಿ 55 ಎಸೆತಗಳಲ್ಲಿ 111 ರನ್ ಜೊತೆಯಾಟವಾಡಿ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು.
177 ರನ್ (146 ಎಸೆತ, 12 ಬೌಂಡರಿ, 6 ಸಿಕ್ಸರ್) ಹೊಡೆದ ಜದ್ರಾನ್ 50ನೇ ಓವರಿನ ಮೊದಲ ಎಸೆತದಲ್ಲಿ ಔಟಾದರು. 65 ಎಸೆತದಲ್ಲಿ ಅರ್ಧಶತಕ ಹೊಡೆದ ಜದ್ರಾನ್ 106 ಎಸೆತಗಳಲ್ಲಿ ಶತಕ ಭಾರಿಸಿದರು. 134 ಎಸೆತಗಳಲ್ಲಿ 150 ರನ್ ಚಚ್ಚಿದರು.